Updated on: Jun 07, 2023 | 9:26 AM
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಸಕೊಪ್ಪ ಗ್ರಾಮದ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ನಾಯಿ ತಿಂದು ಕಾಫಿ ತೋಟದಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆಯಾಗಿದೆ.
ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಬುಸುಗುಟ್ಟ ಶಬ್ಧಕ್ಕೆ ಅರಣ್ಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ನೇಕ್ ಅರ್ಜುನ್ ಅವರು ಹೆಬ್ಬಾವು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಹೆಬ್ಬಾವು ನಾಯಿಯನ್ನು ತಿಂದು ಹೊಟ್ಟೆ ಭಾರವಾಗಿ ವಿಶ್ರಾಂತಿ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆ ಮಾಹಿತಿ ನೀಡಿದ್ರು.
ಸ್ಥಳಕ್ಕೆ ಬಂದ ಸ್ನೇಕ್ ಅರ್ಜುನ್ ಹೆಬ್ಬಾವನ್ನು ಯಾವುದೇ ಅಪಾಯವಿಲ್ಲದೆ ಹಿಡಿದು ಜನರ ಭಯವನ್ನು ದೂರ ಮಾಡಿದ್ದಾರೆ. ಹೆಬ್ಬಾವನ್ನು ಅರಣ್ಯಕ್ಕೆ ಬಿಡಲಾಗಿದೆ.