ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ನ ಕೇಂದ್ರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಹಿನ್ನಲೆ ನಿನ್ನೆ (ಮೇ.07) ರವಿವಾರ ನಗರದಲ್ಲಿ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇಂದು (ಮೇ.08) ಬೆಳಿಗ್ಗೆ ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಸ್ವಿಗ್ಗಿ, ಝೋಮ್ಯಾಟೋ, ಬಿಲಿಂಕಿಟ್ ಹಾಗೂ ಗುತ್ತಿಗೆ ನೌಕರರ ಸಂಕಷ್ಟದ ಬಗ್ಗೆ ಚರ್ಚಿಸುತ್ತಾ ಮಸಾಲೆ ದೋಸೆ ಮತ್ತು ಕಾಫಿ ಸವಿದಿದ್ದಾರೆ.
ಹೌದು ಗುತ್ತಿಗೆ ನೌಕರರ ಗುಂಪು ರಾಹುಲ್ ಗಾಂಧಿಯೊಂದಿಗೆ ತಮ್ಮ ಸಂಕಟವನ್ನು ಹಂಚಿಕೊಂಡರು.
ರಾಹುಲ್ ಗಾಂಧಿಯವರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ, ನೌಕರರ ಸಂಬಳ, ನಿರುದ್ಯೋಗ ಸಮಸ್ಯೆಯ ಕುರಿತು ಮಾತನಾಡಿದರು.
ಜೊತೆಗೆ ಇದೆ ವೇಳೆ ಅವರೊಂದಿಗೆ ಕ್ರೀಡೆಗಳ ಕುರಿತು ಚರ್ಚಿಸಿದರು ಮತ್ತು ಅವರ ನೆಚ್ಚಿನ ಫುಟ್ಬಾಲ್ ಆಟಗಾರರ ಬಗ್ಗೆ ಕೇಳಿದರು.
ಸ್ವಿಗ್ಗಿ, ಝೋಮ್ಯಾಟೋ, ಬ್ಲಿಂಕಿಟ್ ಮತ್ತು ಡಂಜೊ ನಂತಹ ಅಗ್ರಿಗೇಟರ್‌ಗಳ ವಿತರಣಾ ಪಾಲುದಾರರು ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಆಹಾರವನ್ನು ಸವಿದರು.
ಇನ್ನು ಬೆಂಗಳೂರೊಂದರಲ್ಲೇ ಎರಡು ಲಕ್ಷಕ್ಕೂ ಹೆಚ್ಚು ಗುತ್ತಿಗೆ ನೌಕರರಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.
ಇನ್ನು ಪೋಸ್ಟ್‌ನಲ್ಲಿ, ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದ್ದು, “@ರಾಹುಲ್ ಗಾಂಧಿ ಜಿ ಅವರು ಇಂದು ಬೆಂಗಳೂರಿನ ಐಕಾನಿಕ್ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಗಿಗ್ ಕೆಲಸಗಾರರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿಗಳ ವಿತರಣಾ ಪಾಲುದಾರರೊಂದಿಗೆ ಪ್ರಾಮಾಣಿಕ ಸಂಭಾಷಣೆ ನಡೆಸಿದರು.
ಒಂದು ಕಪ್ ಕಾಫಿ ಮತ್ತು ಮಸಾಲೆ ದೋಸೆಯ ಜೊತೆ ಅವರು ವಿತರಣಾ ಕಾರ್ಮಿಕರ ಜೀವನ, ಸ್ಥಿರ ಉದ್ಯೋಗದ ಕೊರತೆ ಮತ್ತು ಮೂಲ ಸರಕುಗಳ ಬೆಲೆ ಏರಿಕೆಯ ಬಗ್ಗೆ ಚರ್ಚಿಸಿದರು.
ನಿನ್ನೆ ಕೂಡ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಅವರ ಕಷ್ಟವನ್ನ ಆಲಿಸಿದ್ದರು.
Published On - 10:52 am, Mon, 8 May 23