Updated on: Feb 27, 2023 | 7:00 AM
ತೂಕ: ಒಣದ್ರಾಕ್ಷಿ ಕರಗುವ ಫೈಬರ್ ಅಂಶವನ್ನು ಹೊಂದಿದ್ದು, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಒಣದ್ರಾಕ್ಷಿಯಲ್ಲಿ ಕೊಬ್ಬನ್ನು ಸುಡುವ ಅಂಶವಿದ್ದು, ಇದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಒಣದ್ರಾಕ್ಷಿಗಳಲ್ಲಿ ರೆಸ್ವೆರಾಟ್ರೋಲ್ ಎಂಬ ಅಂಶವಿದ್ದು, ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಒಣ ದ್ರಾಕ್ಷಿಯಲ್ಲಿ ರಾತ್ರಿ ನೆನೆಸಿದ ನೀರನ್ನು ಕುಡಿಯುವುದರಿಂದ ಅಸಿಡಿಟಿ ಮತ್ತು ಎದೆಯುರಿಯಿಂದ ಉತ್ತಮ ಪರಿಹಾರ ಸಿಗುತ್ತದೆ. ಏಕೆಂದರೆ ಆಯುರ್ವೇದದ ಪ್ರಕಾರ ಇದು ಪಿತ್ತ-ಸಮತೋಲನದ ಗುಣಲಕ್ಷಣಗಳನ್ನು ಹೊಂದಿದೆ.
ಒಣದ್ರಾಕ್ಷಿಯಲ್ಲಿ ಕಬ್ಬಿಣಾಂಶ, ಫೋಲೇಟ್, ವಿಟಮಿನ್ ಬಿ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ.
ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಕ್ಯಾಲ್ಸಿಯಂ, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಒಣದ್ರಾಕ್ಷಿಯಲ್ಲಿದ್ದು, ಇವು ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.