Updated on: Dec 27, 2023 | 9:20 PM
ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಒಟಿಟಿಗೆ ಬರುತ್ತಿದೆ.
ನಟಿ ರಮ್ಯಾ ನಿರ್ಮಾಣದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು.
ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸು ಕಂಡರೂ, ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.
ರಾಜ್ ಬಿ ಶೆಟ್ಟಿ ಅವರು ಈ ಸಿನಿಮಾಕ್ಕೆ ಕತೆ ಬರೆದು, ನಿರ್ದೇಶನವನ್ನೂ ಮಾಡಿದ್ದರು. ಸಿನಿಮಾವನ್ನು ನೇರ ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಅವರ ಇಚ್ಛೆಯಾಗಿತ್ತು.
ಮೊದಲಿಗೆ ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಬೇಕಿತ್ತು, ನಂತರ ಆಯ್ಕೆ ಬದಲಾಯ್ತು.
ಸಿನಿಮಾಕ್ಕೆ ಸಿರಿ ರವಿಕುಮಾರ್ ನಾಯಕಿಯಾಗಿ ಆಯ್ಕೆ ಆದರು, ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಯ್ತು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಡಿಸೆಂಬರ್ 29ಕ್ಕೆ ತೆರೆಗೆ ಬರಲಿದೆ.