
ನಟಿ ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಚಿತ್ರರಂಗ ಮಾತ್ರವಲ್ಲದೆ, ಬಾಲಿವುಡ್ ಚಿತ್ರರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. (Image Credit: Rakul Preet Singh Instagram)

ಸದ್ಯ ರಾಕುಲ್ ಪ್ರೀತ್ ಸಿಂಗ್ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Image Credit: Rakul Preet Singh Instagram)

ಬಳಿ ಸಿಲ್ವರ್ ಬಣ್ಣದ ಲೆಹೆಂಗಾ ಧರಿಸಿದ್ದು, ಸಾಂಪ್ರದಾಯಿಕವಾಗಿ ಕಂಗೊಳಿಸಿದ್ದಾರೆ. ಗಾಳಿಯೂ ನಿಮ್ಮ ಮುಖವನ್ನು ಚುಂಬಿಸಲಿ ಎಂದು ಫೋಟೋಕ್ಕೆ ಕ್ಯಾಪ್ಷನ್ ನೀಡಿದ್ದಾರೆ. (Image Credit: Rakul Preet Singh Instagram)

ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಕೈಯಲ್ಲಿ ಸಾಕಷ್ಟು ಆಫರ್ಗಳಿವೆ. ಅವರ ನಟನೆಯ 'ಛತ್ರಿವಾಲಿ' ಸಿನಿಮಾ ಜೀ 5ನಲ್ಲಿ ಬಿಡುಗಡೆಯಾಗಲಿದೆ. (Image Credit: Rakul Preet Singh Instagram)

ಇತ್ತೀಚೆಗೆ ನಟ ಅಜಯ್ ದೇವಗನ್ ಮತ್ತು ಸಿದ್ದಾರ್ಥ ಮಲ್ಲೋತ್ರಾ ನಟನೆಯ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. (Image Credit: Rakul Preet Singh Instagram)
Published On - 9:03 pm, Sat, 17 December 22