ಬೆಲೆ ಕೇವಲ 8,999: ಬಜೆಟ್ ಪ್ರಿಯರು ಕಾದು ಕುಳಿತ ರಿಯಲ್ ಮಿ C51 ಫೋನಿನ ಮಾರಾಟ ಆರಂಭ

Updated on: Sep 05, 2023 | 5:10 PM

Realme C51 Phone sale started: ಸೋಮವಾರ ರಿಯಲ್ ಮಿ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದ ರಿಯಲ್ ಮಿ C51 ಈಗಾಗಲೇ ತನ್ನ ಸೇಲ್ ಅನ್ನು ಆರಂಭಿಸಿದೆ. ಈ ಫೋನ್ ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿದ್ದು, 5000mAh ಬ್ಯಾಟರಿ ಜೊತೆಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಅಳವಡಿಸಲಾಗಿದೆ.

1 / 7
ಪ್ರಸಿದ್ಧ ರಿಯಲ್ ಮಿ ಕಂಪನಿಯ ಸ್ಮಾರ್ಟ್​ಫೋನ್​ಗಳು ದೇಶದಲ್ಲಿ ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. ಸೋಮವಾರ ಕಂಪನಿ ದೇಶದಲ್ಲಿ ತನ್ನ C-ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C51 (Realme C51) ಮೊಬೈಲ್ ಅನಾವರಣ ಮಾಡಿತ್ತು. ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್ ಈಗಾಗಲೇ ತನ್ನ ಸೇಲ್ ಅನ್ನು ಆರಂಭಿಸಿದೆ.

ಪ್ರಸಿದ್ಧ ರಿಯಲ್ ಮಿ ಕಂಪನಿಯ ಸ್ಮಾರ್ಟ್​ಫೋನ್​ಗಳು ದೇಶದಲ್ಲಿ ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. ಸೋಮವಾರ ಕಂಪನಿ ದೇಶದಲ್ಲಿ ತನ್ನ C-ಸರಣಿ ಅಡಿಯಲ್ಲಿ ಹೊಸ ರಿಯಲ್ ಮಿ C51 (Realme C51) ಮೊಬೈಲ್ ಅನಾವರಣ ಮಾಡಿತ್ತು. ಡ್ಯುಯಲ್-ಟೆಕ್ಸ್ಚರ್ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್ ಈಗಾಗಲೇ ತನ್ನ ಸೇಲ್ ಅನ್ನು ಆರಂಭಿಸಿದೆ.

2 / 7

ಭಾರತದಲ್ಲಿ ರಿಯಲ್ ಮಿ C51 ಸ್ಮಾರ್ಟ್​ಫೋನ್ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಕಾರ್ಬಲ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

3 / 7

ರಿಯಲ್ ಮಿ C51 ಫೋನ್ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 nits ವರೆಗೆ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ. ಈ ಫೋನ್ ಯುನಿಸಾಕ್ T612 ಆಕ್ಟಾ-ಕೋರ್ 12nm ಪ್ರೊಸೆಸರ್ ಜೊತೆಗೆ Mali-G57 GPU ನಿಂದ ಚಾಲಿತವಾಗಿದೆ.

4 / 7

ಕ್ಯಾಮೆರಾ ವಿಚಾರಕ್ಕೆ ಬಂದರೆ f/1.8 ಅಪಾರ್ಚರ್​ ಮತ್ತು LED ಫ್ಲ್ಯಾಷ್ ಮತ್ತು ಸೆಕೆಂಡರಿ ಡೆಪ್ತ್ ಸೆನ್ಸರ್ ಜೊತೆಗೆ 50MP ಹಿಂಬದಿಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. 5000mAh ಬ್ಯಾಟರಿ ಜೊತೆಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಅಳವಡಿಸಲಾಗಿದೆ.

5 / 7

ಡ್ಯುಯಲ್ 4G VoLTE, Wi-Fi 802.11ac, ಬ್ಲೂಟೂತ್ 5.0, GPS + GLONASS, ಮತ್ತು USB ಟೈಪ್-C. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ. 4GB LPDDR4X RAM ಮತ್ತು 64GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಜೊತೆಗೆ 2TB ವರೆಗೆ ವಿಸ್ತರಿಸಬಹುದಾಗಿದೆ. 4GB ವರ್ಚುವಲ್ RAM ಬೆಂಬಲವಿದೆ.

6 / 7

ರಿಯಲ್ ಮಿ ಭಾರತದಲ್ಲಿ ಸೆಪ್ಟೆಂಬರ್ 12 ರಂದು ರಿಯಲ್ ಮಿ ನಾರ್ಜೊ 60x (Realme Narzo 60x) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡುವುದಾಗಿ ಹೇಳಿದೆ. ಹೊಚ್ಚ ಹೊಸ ರಿಯಲ್ ಮಿ ನಾರ್ಜೊ 60x ಫೋನ್ 5G ಬೆಂಬಲ ಪಡೆದುಕೊಂಡಿದ್ದು, 33W SUPERVOOC ವೇಗದ ಚಾರ್ಜಿಂಗ್ ಮೂಲಕ ಮಾರುಕಟ್ಟೆಗೆ ಪ್ರವೇಶಿಸಲಿದೆ.

7 / 7

ರಿಯಲ್ ಮಿ ನಾರ್ಜೊ 60x ಫೋನ್ ಜೊತೆಗೆ ಅದೇ ದಿನ ಬಡ್ಸ್ T300 ಬಿಡುಗಡೆಗೆ ಆಗಲಿದೆ ಎನ್ನಲಾಗಿದೆ. ಈ ಹೊಸ ಬಡ್ಸ್ ರಿಯಲ್ ಮಿ TWS 30dB ನಾಯ್ಸ್ ಕ್ಯಾನ್ಸಲೇಷನ್ ಮತ್ತು 12.4mm ಡೈನಾಮಿಕ್ ಬಾಸ್ ಡ್ರೈವರ್ ಅನ್ನು ಒಳಗೊಂಡಿರುತ್ತದೆ. ಬಡ್ಸ್ ಮತ್ತು ಹೊಸ ಸ್ಮಾರ್ಟ್​ಫೋನ್ ಅಮೆಜಾನ್​ನಲ್ಲಿ ಸೇಲ್ ಕಾಣಲಿದೆ.

Published On - 5:03 pm, Tue, 5 September 23

Loading...
Unable to load recommendations.
Follow Us