ಕೆಲವೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 11, ರಿಯಲ್ ಮಿ 11X ಸ್ಮಾರ್ಟ್​ಫೋನ್

|

Updated on: Aug 17, 2023 | 1:03 PM

Realme 11 5G and Realme 11X 5G Launch Date: ರಿಯಲ್ ಮಿ 11 ಮತ್ತು ರಿಯಲ್ ಮಿ 11X ಈ ಎರಡೂ ಸ್ಮಾರ್ಟ್​ಫೋನ್​ಗಳು ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 23 ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಲಿದೆ. ಈ ಬಗ್ಗೆ ಸ್ವತಃ ರಿಯಲ್ ಮಿ ಕಂಪನಿ ಪೋಸ್ಟರ್ ಬಿಡುಗಡೆ ಮಾಡಿ ಖಚಿತ ಪಡಿಸಿದೆ.

1 / 8
ಎರಡು ತಿಂಗಳ ಹಿಂದೆ ಪ್ರಸಿದ್ಧ ರಿಯಲ್ ಮಿ ಸಂಸ್ಥೆ ಭಾರತದಲ್ಲಿ ರಿಯಲ್ ಮಿ 11 ಪ್ರೊ ಸರಣಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿತ್ತು. ಇದೀಗ ಕಂಪನಿ ಈ ಸರಣಿಯ ಅಡಿಯಲ್ಲಿ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನನ್ನು  ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

2 / 8
ಈ ಎರಡೂ ಸ್ಮಾರ್ಟ್​ಫೋನ್​ಗಳು ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 23 ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಲಿದೆ. ಈ ಬಗ್ಗೆ ಸ್ವತಃ ರಿಯಲ್ ಮಿ ಕಂಪನಿ ಪೋಸ್ಟರ್ ಬಿಡುಗಡೆ ಮಾಡಿ ಖಚಿತ ಪಡಿಸಿದೆ. ರಿಯಲ್ ಮಿ 11 5G ಸ್ಮಾರ್ಟ್​ಫೋನ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

3 / 8
ರಿಯಲ್ ಮಿ 11 ಪ್ರಾಥಮಿಕ ಕ್ಯಾಮೆರಾದಲ್ಲಿ ಸ್ಯಾಮ್​ಸಂಗ್ HM6 ಸಂವೇದಕವನ್ನು ಅಳವಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಜೊತೆಗೆ 3x ಇನ್-ಸೆನ್ಸಾರ್ ಜೂಮ್, 3X ಆಪ್ಟಿಕಲ್ ಝೂಮ್‌ನೊಂದಿಗೆ ಅನಾವರಣಗೊಳ್ಳಲಿದೆ.

4 / 8
ರಿಯಲ್ ಮಿಯ ಈ ಫೋನಿನಲ್ಲಿ ಕ್ಯಾಮೆರಾಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹಿಂದಿನ ರಿಯಲ್ ಮಿ ಫೋನುಗಳಿಗೆ ಹೋಲಿಸಿದರೆ ಇದರಲ್ಲಿ ಫೋಕಸ್ ಆಯ್ಕೆಯನ್ನು ಹೆಚ್ಚಿಸಲಾಗಿದೆ. ಕ್ಯಾಮೆರಾವು ಟ್ರ್ಯಾಂಕ್ವಿಲ್, ಕ್ರಿಸ್ಪ್ ಮತ್ತು ಸಿನೆಮ್ಯಾಟಿಕ್ ಸೇರಿದಂತೆ ಹೊಸ ಹೊಸ ಫಿಲ್ಟರ್‌ಗಳನ್ನು ಸಹ ಒಳಗೊಂಡಿದೆ.

5 / 8
67W ಚಾರ್ಜಿಂಗ್ ವೇಗದ ಚಾರ್ಜರ್ ನೀಡಲಾಗಿದ್ದು, ಇದು 17 ನಿಮಿಷಗಳಲ್ಲಿ 50 ಪ್ರತಿಶತ ಚಾರ್ಜ್ ಮತ್ತು 47 ನಿಮಿಷಗಳಲ್ಲಿ 100 ಪ್ರತಿಶತ ಬ್ಯಾಟರಿ ಫುಲ್ ಮಾಡುತ್ತದೆ. ಈ ಫೋನ್ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಬಿಡುಗಡೆಯ ಮೊದಲು, ರಿಯಲ್ ಮಿ 11 5G ವಿನ್ಯಾಸವನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

6 / 8
ರಿಯಲ್ ಮಿ 11 5G ಫೋನ್ ಐಫೋನ್ 12 ನಿಂದ ಪ್ರೇರಿತವಾದ ಫ್ಲಾಟ್ ಎಡ್ಜ್‌ಗಳನ್ನು ಒಳಗೊಂಡಿದೆ. ಪವರ್ ಬಟನ್‌ನಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಕೆಳಭಾಗದಲ್ಲಿ 3.5mm ಆಡಿಯೋ ಜ್ಯಾಕ್ ಅನ್ನು ಪೋಸ್ಟರ್ ಮೂಲಕ ತಿಳಿದುಬಂದಿದೆ. ಮುಂಭಾಗವು ಸೆಲ್ಫಿ ಕ್ಯಾಮೆರಾಕ್ಕಾಗಿ ಹೋಲ್-ಪಂಚ್ ಕಟೌಟ್ ಅನ್ನು ನೀಡಲಾಗಿದೆ.

7 / 8
ರಿಯಲ್ ಮಿ 11 5G ಫೋನ್ 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾದ ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ನಿಂದ ಕಾರ್ಯನಿರ್ವಹಿಸುತ್ತದೆ. 6.72-ಇಂಚಿನ ಪೂರ್ಣ-HD+ AMOLED ಡಿಸ್ ಪ್ಲೇ ನೀಡಲಾಗಿದೆ.

8 / 8
ರಿಯಲ್ ಮಿಯ ಈ ಹೊಸ ಸ್ಮಾರ್ಟ್​ಫೋನ್​ನಲ್ಲಿ 120Hz ರಿಫ್ರೆಶ್ ರೇಟ್, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.2, ಮತ್ತು NFC ಇದೆ. ರಿಯಲ್ ಮಿ 11 ಮತ್ತು ರಿಯಲ್ ಮಿX ಭಾರತದಲ್ಲಿ 20,000 ರೂ. ಕ್ಕಿಂತ ಕಡಿಮೆ ಬೆಲೆಯನ್ನು ಬಿಡುಗಡೆ ಆಗುವ ನಿರೀಕ್ಷೆಯಿದೆ.