Redmi 10 ಬಿಡುಗಡೆ: ಕೇವಲ 10,000 ರೂ. ಗೆ 50MP ಕ್ಯಾಮೆರಾ, 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ

|

Updated on: Mar 18, 2022 | 8:15 AM

Redmi 10: ಶವೋಮಿ ಇದೀಗ ದೇಶದಲ್ಲಿ ಹೊಸ ರೆಡ್ಮಿ 10 (Redmi 10) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಅತ್ಯಂತ ಬಲಿಷ್ಠವಾದ ದೀರ್ಘ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್​ಗೆ ನೀಡಲಾಗಿದೆ.

1 / 5
ಶವೋಮಿ ಇದೀಗ ದೇಶದಲ್ಲಿ ಹೊಸ ರೆಡ್ಮಿ 10 (Redmi 10) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಅತ್ಯಂತ ಬಲಿಷ್ಠವಾದ ದೀರ್ಘ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಈ ಫೋನ್​ಗೆ ನೀಡಲಾಗಿದೆ. ಅಲ್ಲದೆ ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಇದರಲ್ಲಿರುವ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ.

2 / 5
ಈ ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 13 ಜೊತೆಗೆ ರನ್ ಆಗುತ್ತದೆ.

3 / 5
ರೆಡ್ಮಿ 10 ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಒಳಗೊಂಡಿದೆ.

4 / 5
ಧೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಆದಷ್ಟು ಬೇಗ ಚಾರ್ಜ್ ಆಗುವಂತಹ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬಂಡಲ್ ಚಾರ್ಜರ್ 10W ವರೆಗೆ ಚಾರ್ಜ್ ಮಾಡುವುದನ್ನು ಮಾತ್ರ ಬೆಂಬಲಿಸುತ್ತದೆ.

5 / 5
ಬೆಲೆ ಎಷ್ಟು?: 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ ಕೇವಲ 10,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM ಮತ್ತು 128GB ಮಾದರಿಯ ಆಯ್ಕೆಗೆ 12,999 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮಾರ್ಚ್ 24 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌, ಎಂಐ.ಕಾಮ್‌, ಎಂಐ ಹೋಮ್‌ ಮೂಲಕ ಮಾರಾಟ ಕಾಣಲಿದೆ.

Published On - 7:49 am, Fri, 18 March 22