ಬಜೆಟ್ ಪ್ರಿಯರು ಕಾದು ಕುಳಿತಿದ್ದ ರೆಡ್ಮಿ A3 ಫೋನ್ ಇಂದಿನಿಂದ ಖರೀದಿಗೆ ಲಭ್ಯ

|

Updated on: Feb 23, 2024 | 6:55 AM

Redmi A3 Sale Start Today in India: ರೆಡ್ಮಿ A3 ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ ಬೇಸ್ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ 7,299 ರೂ. ಇದೆ. ಈ ಫೋನ್ ಇಂದಿನಿಂದ ಫ್ಲಿಪ್​ಕಾರ್ಟ್, Mi.com ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಸಬಹುದು.

1 / 5
ಚೀನಾ ಮೂಲದ ಶವೋಮಿ ಕಂಪನಿ ಕಳೆದ ವಾರ ಭಾರತದಲ್ಲಿ ಹೊಸ ರೆಡ್ಮಿ A3 ಫೋನನ್ನು ಬಿಡುಗಡೆ ಮಾಡಿತ್ತು. ಇದು ರೆಡ್ಮಿ A- ಸರಣಿಗೆ ಸೇರ್ಪಡೆಗೊಳ್ಳುತ್ತದೆ. ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಇಂದಿನಿಂದ ಮಾರಾಟ ಕಾಣಲಿದೆ.

2 / 5
ರೆಡ್ಮಿ A3 ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ ಬೇಸ್ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ 7,299 ರೂ. ಇದೆ. 4GB + 128GB ಆವೃತ್ತಿಯ ಬೆಲೆ ರೂ. 8,299. ಅಂತೆಯೆ 6GB + 128GB ಮಾದರಿಯ ಬೆಲೆ ರೂ. 9,299 ಆಗಿದೆ. ಈ ಫೋನ್ ಇಂದಿನಿಂದ ಫ್ಲಿಪ್​ಕಾರ್ಟ್, Mi.com ಮತ್ತು ಶವೋಮಿಯ ಚಿಲ್ಲರೆ ಪಾಲುದಾರರ ಮೂಲಕ ಖರೀದಿಸಬಹುದು.

3 / 5
ಡ್ಯುಯಲ್-ಸಿಮ್ (ನ್ಯಾನೋ) ರೆಡ್ಮಿ A3 ಫೋನ್ ಆಂಡ್ರಾಯ್ಡ್ 13 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.71-ಇಂಚಿನ HD+ (1,600×700 ಪಿಕ್ಸೆಲ್‌ಗಳು) ಡಿಸ್ಪ್ಲೇ ಜೊತೆಗೆ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ನೀಡಲಾಗಿದೆ.

4 / 5
ಹೊಸ ರೆಡ್ಮಿ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G36 SoC ಯಿಂದ ಚಾಲಿತವಾಗಿದ್ದು, 3GB RAM ನೊಂದಿಗೆ ಸಂಯೋಜಿಸಲ್ಪಟ್ಟಿದೆ. 8-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುವ ರೆಡ್ಮಿ A3 ನಲ್ಲಿ AI- ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಪ್ಯಾಕ್ ಮಾಡಲಾಗಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವಿದೆ.

5 / 5
ರೆಡ್ಮಿ A3 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ 5.0, GPS/ A-GPS, ಮೈಕ್ರೋ-ಯುಎಸ್‌ಬಿ ಪೋರ್ಟ್, ಗ್ಲೋನಾಸ್, 3.5 ಎಂಎಂ ಆಡಿಯೋ ಜ್ಯಾಕ್ ಸೇರಿವೆ. ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.