ನವೆಂಬರ್ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಸ್ ಇಲ್ಲಿದೆ ನೋಡಿ
Best Smartphones Under Rs. 15,000 in India: ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ 14,990 ರೂ. ಗೆ ಲಭ್ಯವಿದೆ. ಇದು ಎಕ್ಸಿನೊಸ್ 1330 SoC ನಿಂದ ರನ್ ಆಗುತ್ತದೆ. ಇದರಂತೆ ಕೆಲವು ಫೋನುಗಳು 15,000 ರೂ. ಒಳಗೆ ಲಭ್ಯವಿದೆ. ಇಲ್ಲಿದೆ ನೋಡಿ ನವೆಂಬರ್ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಸ್.
1 / 6
ಇಂದಿನ ಮಾರುಕಟ್ಟೆಯಲ್ಲಿ 15,000 ರೂ. ಗಿಂತ ಕಡಿಮೆ ಬೆಲೆಗೆ ಹೆಚ್ಚು ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ನೀವು ಕಾಣಬಹುದು. ಈ ಫೋನುಗಳು ಆಕರ್ಷಕವಾದ ಡಿಸ್ ಪ್ಲೇ, ಬಲಿಷ್ಠ ಪ್ರೊಸೆಸರ್‌ಗಳು ಮತ್ತು ಕನಿಷ್ಠ 4GB RAM ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಅಮೆಜಾನ್‌ನಲ್ಲಿ 15,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.
2 / 6
ರೆಡ್ಮಿ 12 5G (6GB 128GB) ಪ್ರಸ್ತುತ ಅಮೆಜಾನ್‌ನಲ್ಲಿ 13,499ರೂ. ಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. 6.71-ಇಂಚಿನ FHD+ ಡಿಸ್ ಪ್ಲೇ, 5,000mAh ಬ್ಯಾಟರಿ ಇದೆ. ಡ್ಯುಯಲ್-ಕ್ಯಾಮೆರಾ ಸೆಟಪ್ ಇದ್ದು 50MP ಪ್ರಾಥಮಿಕ ಸಂವೇದಕದೊಂದಿಗೆ ಬರುತ್ತದೆ.
3 / 6
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ 14,990 ರೂ. ಗೆ ಲಭ್ಯವಿದೆ. ಇದು ಎಕ್ಸಿನೊಸ್ 1330 SoC ನಿಂದ ನಡೆಸಲ್ಪಡುತ್ತದೆ. 6.6-ಇಂಚಿನ FHD+ ಡಿಸ್ ಪ್ಲೇ, 6,000mAh ಬ್ಯಾಟರಿ, 25W ನಲ್ಲಿ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ 2MP ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳ ಜೊತೆಗೆ 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ.
4 / 6
ವಿವೋ T2x 5G ಅನ್ನು ಅಮೆಜಾನ್‌ನಲ್ಲಿ ನೀವು 14,990 ರೂ. ಗೆ ಖರೀದಿಸಬಹುದು. ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ನಿಂದ ಚಾಲಿತವಾಗಿದೆ. FHD+ ರೆಸಲ್ಯೂಶನ್‌ನೊಂದಿಗೆ 6.58-ಇಂಚಿನ FHD+ IPS LCD ಡಿಸ್ ಪ್ಲೇ ಹೊಂದಿದೆ. ಮುಂಭಾಗದಲ್ಲಿ ಇದು 50MP ಪ್ರಾಥಮಿಕ ಸಂವೇದಕ ಒಳಗೊಂಡಿದೆ. 5,000mAh ಬ್ಯಾಟರಿ, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
5 / 6
ರಿಯಲ್ ಮಿ 9i ಸ್ಮಾರ್ಟ್‌ಫೋನ್ ಬೆಲೆ 12,399 ರೂ ಆಗಿದೆ. ಈ ಫೋನ್ 90Hz IPS LCD ಡಿಸ್ ಪ್ಲೇ ಹೊಂದಿದ್ದು, 5,000mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಕ್ವಾಲ್ಕಂ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್, 50MP ಪ್ರಾಥಮಿಕ ಕ್ಯಾಮೆರಾ ಆಯ್ಕೆ ಅಳವಡಿಸಲಾಗಿದೆ.
6 / 6
ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್ ಬೆಲೆ 13,999 ರೂ. ಇದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4-ಸರಣಿ SoC ಪ್ರೊಸೆಸರ್ ಹೊಂದಿದೆ. ಈ ಎಲ್ಲಾ ಫೋನುಗಳ ಬೆಲೆ ಪ್ಲಾಟ್‌ಫಾರ್ಮ್‌ಗೆ ಅನುಗುಣವಾಗಿರುತ್ತವೆ, ಬೆಲೆಗಳು ಮತ್ತು ರಿಯಾಯಿತಿಗಳು ಬದಲಾಗುವ ಸಂಭವವಿದೆ.