ಪ್ರೀತಿಯ ಕುರಿತ 5 ವಿಚಿತ್ರ ವೈಜ್ಞಾನಿಕ ಸಿದ್ಧಾಂತಗಳಿವು

|

Updated on: Jan 30, 2024 | 11:38 AM

ಅನೇಕ ವಿಜ್ಞಾನಿಗಳು ಪ್ರೀತಿಯೆಂಬ ಈ ಸಾರ್ವತ್ರಿಕ ಭಾಷೆಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ಪ್ರೀತಿಯ ಬಗ್ಗೆ ಕೆಲವು ವಿಲಕ್ಷಣವಾದ ಆಶ್ಚರ್ಯಕರ ಸಿದ್ಧಾಂತಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

1 / 6
ಪ್ರೀತಿ ಹೇಗೆ ಆಗುತ್ತದೆ, ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಪ್ರೀತಿ ಹೃದಯವನ್ನು ಬೆಚ್ಚಗಾಗಿಸುವ ಭಾವನೆ. ಇನ್ನು ಕೆಲವರಿಗೆ ಪ್ರೀತಿಯೇ ಜೀವನ. ಅನೇಕ ವಿಜ್ಞಾನಿಗಳು ಪ್ರೀತಿಯೆಂಬ ಈ ಸಾರ್ವತ್ರಿಕ ಭಾಷೆಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ಪ್ರೀತಿಯ ಬಗ್ಗೆ ಕೆಲವು ವಿಲಕ್ಷಣವಾದ ಆಶ್ಚರ್ಯಕರ ಸಿದ್ಧಾಂತಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

2 / 6
ನ್ಯೂಯಾರ್ಕ್‌ನ ಆಲ್ಬರ್ಟ್ ಐನ್‌ಸ್ಟೈನ್ ಕಾಲೇಜಿನ ಅಧ್ಯಯನದ ಪ್ರಕಾರ, ನಾವು ಪ್ರೀತಿಸುತ್ತಿರುವಾಗ ನಮ್ಮ ಮಿದುಳುಗಳು ಉನ್ನತ ಭಾವನೆಯನ್ನು ಅನುಭವಿಸುತ್ತವೆ. ಈ ಭಾವನೆಯು ಅಧಿಕವಾಗಿ ಕೊಕೇನ್‌ ಸೇವಿಸುವಾಗ ಅನುಭವಿಸುವ ಭಾವನೆಯ ರೀತಿಯಲ್ಲೇ ಇರುತ್ತದೆ. ಹೀಗಾಗಿಯೇ ಬ್ರೇಕಪ್ ಆದಾಗ ಸಂಗಾತಿಗಳು ಬಹಳ ನೋವು ಅನುಭವಿಸುತ್ತಾರೆ.

3 / 6
ನ್ಯೂಯಾರ್ಕ್ ಟೈಮ್ಸ್ ಅಧ್ಯಯನದ ಪ್ರಕಾರ, ಜನರು 4 ನಿಮಿಷಗಳ ಕಾಲ ದಿಟ್ಟಿಸಿದರೆ ಪರಸ್ಪರ ಪ್ರೀತಿಯಲ್ಲಿ ಬೀಳಬಹುದು ಅಥವಾ ಪರಸ್ಪರ ಪ್ರೀತಿಯ ಭಾವನೆಯನ್ನು ಅನುಭವಿಸಬಹುದು. 4 ನಿಮಿಷಗಳ ಕಾಲ ಅಡೆತಡೆಯಿಲ್ಲದೆ ಒಬ್ಬರನ್ನೊಬ್ಬರು ನೋಡುವುದರಿಂದ ಪ್ರೀತಿ ಉಂಟಾಗುವ ಸಾಧ್ಯತೆ ಇರುತ್ತದೆ.

4 / 6
ಡೇಟಿಂಗ್ ಅಪ್ಲಿಕೇಶನ್ 'ನೀವು ಆಸಕ್ತಿ ಹೊಂದಿದ್ದೀರಾ?' ನಡೆಸಿದ ಅಧ್ಯಯನದಲ್ಲಿ, ವ್ಯಕ್ತಿಯ ಆಹಾರ ಪದ್ಧತಿಯು ಅವರೊಂದಿಗೆ ಡೇಟಿಂಗ್ ಮಾಡುವ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಜನರನ್ನು ಕೇಳಲಾಯಿತು. ಅಧ್ಯಯನದ ಪ್ರಕಾರ, ಮಹಿಳೆಯರು ಮಾಂಸ ತಿನ್ನುವ ಪುರುಷರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಪುರುಷರು ಸಸ್ಯಾಹಾರಿ ಮಹಿಳೆಯರನ್ನು ಹೆಚ್ಚು ಆಯ್ಕೆ ಮಾಡುತ್ತಾರೆ. ಅಧ್ಯಯನದ ಫಲಿತಾಂಶವು ಸ್ವಲ್ಪ ಅಸಾಮಾನ್ಯವಾಗಿದ್ದರೂ ನಮ್ಮ ಆಹಾರದ ಆಯ್ಕೆಗಳು ನಮ್ಮ ಡೇಟಿಂಗ್ ಜೀವನವನ್ನು ನಿರ್ಧರಿಸುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

5 / 6
ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದ ಸಂಶೋಧಕ ಡೇವಿಡ್ ಪೆರೆಟ್ ಅವರ ಅಧ್ಯಯನದಲ್ಲಿ, ಪ್ರಣಯ ಸಂಬಂಧದಲ್ಲಿ ಯುವಕರು ಹೆಚ್ಚಾಗಿ ತಮ್ಮ ತಾಯಿಯಂತೆ ಕಾಣುವ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಯುವತಿಯರು ತಮ್ಮ ತಂದೆಯಂತೆ ಕಾಳಜಿ, ಪ್ರೀತಿ, ಜವಾಬ್ದಾರಿ ಇರುವ ಪುರುಷರನ್ನು ಆಯ್ಕೆ ಮಾಡುತ್ತಾರೆ.  ಈ ಅಧ್ಯಯನದ ಆವಿಷ್ಕಾರಗಳನ್ನು 2002ರಲ್ಲಿ ನ್ಯೂ ಸೈಂಟಿಸ್ಟ್ ನಿಯತಕಾಲಿಕದ 'ಲೈಕ್ ಫಾದರ್ ಲೈಕ್ ಹಸ್ಬೆಂಡ್' ಲೇಖನದಲ್ಲಿ ವರದಿ ಮಾಡಲಾಗಿದೆ.

6 / 6
ಹೆಚ್ಚಿನ ಪುರುಷರನ್ನು ಅಮ್ಮನ ಮಕ್ಕಳು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಂಡು ಮಕ್ಕಳು ತಾಯಿಯೊಂದಿಗೆ ಹೆಚ್ಚು ಆತ್ಮೀಯ ಸಂಬಂಧ ಹೊಂದಿರುತ್ತಾರೆ. ಯುವತಿಯರು ತಂದೆಯ ಜೊತೆ ಹೆಚ್ಚಿನ ಆತ್ಮೀಯ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಆಕೆಯನ್ನು ಅಪ್ಪನ ರಾಜಕುಮಾರಿ ಎನ್ನಲಾಗುತ್ತದೆ. ಯುವಕ- ಯುವತಿಯರು ತಮ್ಮ ಸಂಗಾತಿಯನ್ನು ಹುಡುಕುವಾಗ ತಮ್ಮ ಪೋಷಕರಂತೆ ತಮ್ಮನ್ನು ನೋಡಿಕೊಳ್ಳುವವರಿಗಾಗಿ ಹಂಬಲಿಸುತ್ತಾರಂತೆ.