
ದಕ್ಷಿಣ ಕೊರಿಯಾ ಮೂಲಕ ಪ್ರಮುಖ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್ ಕಂಪನಿ ಹೊಸ ಗ್ಯಾಲಕ್ಸಿ ಬುಕ್ 4 ಸರಣಿಯ ಲ್ಯಾಪ್‌ಟಾಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಬುಕ್ 4 Pro 360 ಮತ್ತು ಗ್ಯಾಲಕ್ಸಿ ಬುಕ್ 4 360 ಈ ಸರಣಿಯಲ್ಲಿ ಅನಾವರಣಗೊಂಡ ಎರಡು ಲ್ಯಾಪ್‌ಟಾಪ್‌ಗಳಾಗಿವೆ.

ಈ ಎರಡೂ ಲ್ಯಾಪ್‌ಟಾಪ್‌ಗಳ ಮುಂಗಡ ಬುಕಿಂಗ್ ಫೆಬ್ರವರಿ 20 ರಿಂದ ಪ್ರಾರಂಭವಾಗಿತ್ತು. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ಈ ಲ್ಯಾಪ್‌ಟಾಪ್‌ಗಳ ಬುಕಿಂಗ್ ಅನ್ನು ಆಯ್ದ ಇ-ಕಾಮರ್ಸ್ ಸೈಟ್‌ಗಳಲ್ಲಿ ಮಾಡಬಹುದು. ವಿಶೇಷ ಎಂದರೆ ಇದರಲ್ಲಿ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಈ ಲ್ಯಾಪ್‌ಟಾಪ್‌ಗಳು ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (ಸಿಪಿಯು), ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಮತ್ತು ನ್ಯೂರಲ್ ಪ್ರೊಸೆಸಿಂಗ್ ಯುನಿಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಗ್ಯಾಲಕ್ಸಿ ಬುಕ್ 4 360 ಲ್ಯಾಪ್‌ಟಾಪ್ 15.6-ಇಂಚಿನ ಪೂರ್ಣ HD ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.

ಗ್ಯಾಲಕ್ಸಿ ಬುಕ್ 14 ಲ್ಯಾಪ್‌ಟಾಪ್‌ನ ಬೆಲೆ 1,14,990 ರೂ. ನಿಗದಿಪಡಿಸಲಾಗಿದೆ. ಗ್ಯಾಲಕ್ಸಿ ಬುಕ್ 4 ಪ್ರೊ ಮಾದರಿಯನ್ನು 14 ಮತ್ತು 16 ಇಂಚಿನ ರೂಪಾಂತರದಲ್ಲಿ ತರಲಾಗಿದೆ. ಇದರ ಬೆಲೆ 1.32 ಲಕ್ಷಕ್ಕಿಂತ ಕಡಿಮೆ ಇರುತ್ತದೆ. ಗ್ಯಾಲಕ್ಸಿ ಬುಕ್ 4 ಪ್ರೊ 360 ಮಾದರಿಯು 16-ಇಂಚಿನ ಡೈನಾಮಿಕ್ AMOLED 2X ಟಚ್ ಸ್ಕ್ರೀನ್ ಹೊಂದಿದೆ. ಇದರ ಆರಂಭಿಕ ಬೆಲೆ ರೂ. 1,63,990.

ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಸ್ಯಾಮ್‌ಸಂಗ್ ರೂ. 5,000 ಮೌಲ್ಯದ ರಿಯಾಯಿತಿ ನೀಡುತ್ತಿದೆ. 10,000 ಮೌಲ್ಯದ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ರೂ. 8,000 ವರೆಗೆ ಅಪ್‌ಗ್ರೇಡ್ ಬೋನಸ್, 24 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಯಂತಹ ಆಫರ್ಗಳನ್ನು ಘೋಷಣೆ ಮಾಡಲಾಗಿದೆ.