ಸ್ಯಾಮ್ಸಂಗ್ನಿಂದ ಶಾಕಿಂಗ್ ಘೋಷಣೆ: ಬರುತ್ತಿದೆ ವಿಶ್ವದ ಮೊದಲ AI ಲ್ಯಾಪ್‌ಟಾಪ್
Samsung Galaxy Book 4: ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಲ್ಯಾಪ್‌ಟಾಪ್ ಡಿಸೆಂಬರ್ 15 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಭಾರತೀಯ ಮಾರುಕಟ್ಟೆಗೆ ಯಾವಾಗ ತರಲಾಗುವುದು ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಇದು ಇಂಟೆಲ್ ಕೋರ್ ಅಲ್ಟ್ರಾ 7155H ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿದೆ.
1 / 5
ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್ ಅದ್ಭುತವಾದ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಲಿದೆ. ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ ಲ್ಯಾಪ್‌ಟಾಪ್ ಅನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ. ಈ ಲ್ಯಾಪ್‌ಟಾಪ್ ಶೀಘ್ರದಲ್ಲೇ ಗ್ಯಾಲಕ್ಸಿ ಬುಕ್ 4 ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.
2 / 5
ಗ್ಯಾಲಕ್ಸಿ ಬುಕ್ 4 ಲ್ಯಾಪ್‌ಟಾಪ್ ಡಿಸೆಂಬರ್ 15 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಭಾರತೀಯ ಮಾರುಕಟ್ಟೆಗೆ ಯಾವಾಗ ತರಲಾಗುವುದು ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
3 / 5
ಈ ಲ್ಯಾಪ್‌ಟಾಪ್‌ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು ಇಂಟೆಲ್ ಕೋರ್ ಅಲ್ಟ್ರಾ 7155H ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಅತ್ಯಂತ ವೇಗದ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡುತ್ತದೆ. ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನೆಂದರೆ, ಇದರಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೆ ಅನೇಕ ಕೆಲಸಗಳನ್ನು ಮಾಡಬಹುದು.
4 / 5
ಗ್ಯಾಲಕ್ಸಿ ಬುಕ್ 4 ಲ್ಯಾಪ್‌ಟಾಪ್ Samsung Goss ಎಂಬ ಕೃತಕ ಬುದ್ಧಿಮತ್ತೆಯಿಂದ ಚಾಲಿತವಾಗಲಿದೆ. ಈ ಲ್ಯಾಪ್‌ಟಾಪ್‌ನ CPU ನಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರ ಸಹಾಯದಿಂದ AI ವೇಗವಾಗಿ ಕೆಲಸ ಮಾಡುತ್ತದೆ.
5 / 5
ಇದು 32 GB RAM ಮತ್ತು 1 TB ವರೆಗೆ ಆನ್-ಬೋರ್ಡ್ ಸಂಗ್ರಹಣೆಯನ್ನು ಹೊಂದಿರುವ ಸಾಧ್ಯತೆಯಿದೆ. ಗ್ರಾಫಿಕ್ಸ್‌ಗಾಗಿ ಆಯ್ಕೆಮಾಡಿದ ಮಾದರಿಗಳನ್ನು ಅವಲಂಬಿಸಿ NVIDIA GeForce RTX 4050 GPU ಅನ್ನು ಇದು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಕಂಪನಿಯು ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.