ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ಈ ವಿವಾಹ ಸಮಾರಂಭಕ್ಕೆ ಕೇವಲ ಆಪ್ತರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯಲ್ಲಿ ಸ್ಟಾರ್ ಸೆಲೆಬ್ರಿಟಿಗಳೂ ಇದ್ದಾರೆ.
ಶಾರುಖ್ ಖಾನ್, ರಜನಿಕಾಂತ್ ಸೇರಿದಂತೆ ಅನೇಕ ಗಣ್ಯರು ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಗೆ ಬಂದಿದ್ದಾರೆ. ನವಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.
ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಅವರ ಹೊಸ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅವರು ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಹಾಗಾಗಿ ಶಾರುಖ್ ಖಾನ್ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಬಂದು ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.
ತಮಿಳು ಚಿತ್ರರಂಗದ ದಿಗ್ಗಜ ನಟ ರಜನಿಕಾಂತ್ ಅವರು ಈ ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ. 2021ರಲ್ಲಿ ತೆರೆಕಂಡ ‘ಅಣ್ಣಾತೆ’ ಸಿನಿಮಾದಲ್ಲಿ ನಯನತಾರಾ ಹಾಗೂ ರಜನಿಕಾಂತ್ ಜೊತೆಯಾಗಿ ಕೆಲಸ ಮಾಡಿದ್ದಾರೆ.
ಮಹಾಬಲಿಪುರಂನಲ್ಲಿ ತುಂಬ ಅದ್ದೂರಿಯಾಗಿ ಈ ವಿವಾಹ ಸಮಾರಂಭ ನಡೆಯುತ್ತಿದೆ. ಮದುವೆಯ ಆಮಂತ್ರಣ ಪತ್ರದ ಫೋಟೋ ಕೂಡ ಸಖತ್ ವೈರಲ್ ಆಗಿದೆ. ಮಾಧ್ಯಮದವರಿಗಾಗಿ ಸದ್ಯದಲ್ಲೇ ರಿಸೆಪ್ಷನ್ ಕೂಡ ನಡೆಲಿದೆ.