ಮನೆಯನ್ನು ಅಂದವಾಗಿರಿಸಿಕೊಳ್ಳುವ ನಾವು ಸಾಕಷ್ಟು ಪ್ರಯತ್ನ ಪಡುತ್ತೇವೆ. ವಿವಿಧ ತೆರೆನಾದ ಅಲಂಕಾರಿಕಾ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸುತ್ತೇವೆ. ಅತಿಥಿಗಳ ಮನೆಗೆ ಹೋದಾಗ ಮೊದಲು ಕಣ್ಣಿಗೆ ಬೀಳುವುದೇ ಅವರ ಮನೆಯಲ್ಲಿರುವ ಅಲಂಕಾರಿಕಾ ವಸ್ತುಗಳು. ನೋಡಲು ಸುಂದರವಾಗಿರಬೇಕು ಜತೆಗೆ ಸರಳವಾಗಿರಬೇಕು. ಹಾಗಿದ್ದಾಗ ನಮ್ಮ ಮನೆಯನ್ನು ನಾವು ಹೇಗೆ ಸಿದ್ಧವಿಟ್ಟುಕೊಳ್ಳಬೇಕು? ಎಂಬುದನ್ನು ನೋಡೋಣ.
ನಿಮ್ಮ ಮನೆಯ ಎದುರಿಗಿನ ಜಗುಲಿಯ ಗೋಡೆಯನ್ನು ಈ ರೀತಿಯಾಗಿ ಸಿದ್ಧಗೊಳಿಸಿ. ಸುಂದರವಾದ ಚಿತ್ರಪಟಗಳು ಜತೆಗೆ ಚಿಕ್ಕದಾಗ ಹಸಿರು ಬಣ್ಣದ ಗಿಡಗಳು. ಕುಳಿತುಕೊಳ್ಳಲು ಒಳ್ಳೆಯ ಖುರ್ಚಿಗಳಿರಲಿ. ಜೊತೆಗೆ ಗೋಡೆಯ ಬಣ್ಣದ್ದೇ ಆಗಿದ್ದರೆ ಇನ್ನೂ ಸುಂದರ. ಬಿಳಿ ಬಣ್ಣದ ಗೋಡೆಗೆ ಅದರ ವಿರುದ್ಧದ ಬಣ್ಣ ಕಪ್ಪು ಬಣ್ಣದ ಫ್ರೇಮ್ ಹೊಂದಿರುವ ಚಿತ್ರ ಪಟವನ್ನು ತೂಗು ಹಾಕಿ. ನೋಡಲು ಸುಂದರವಾಗಿರುತ್ತದೆ.
ಮನೆಯೊಳಗೆ ಬಂದಾಕ್ಷಣ ಅತಿಥಿಗಳಿಗೆ ಆಶ್ಚರ್ಯವೆನಿಸಬೇಕು. ಮಾತನಾಡಲು ಖುಷಿಯೆನಿಸಬೇಕು. ಮನೆಯ ಜಗುಲಿಯಲ್ಲಿರುವ ಸೋಫಾದ ಮೇಲೆ ವಿವಿಧ ಬಣ್ಣದ ಚಿಕ್ಕ ದಿಂಬುಗಳಿಂದ ಅಲಂಕರಿಸಿ. ಒಂದು ಪಕ್ಕದಲ್ಲಿ ಚಿಕ್ಕದಾದ ಹಸಿರು ಗಿಡವಿರಲಿ. ಗೋಡೆಯ ಮೇಲೆ ದೊಡ್ಡದಾಗ ಗಡಿಯಾರ ತೂಗು ಹಾಕಿರಲಿ. ನಿಮ್ಮ ಮನೆಯ ಗೋಡೆ ಬಣ್ಣಕ್ಕೆ ಹೊಂದುವ ಗಡಿಯಾರವನ್ನು ಆರಿಸಿ ಖರೀದಿಸಿ.
ನಿಮ್ಮ ಮನೆಯ ಅಲಂಕಾರಕ್ಕಾಗಿ ನೀವು ಒಂದುಷ್ಟು ಕರಕುಶಲವನ್ನು ತಯಾರಿಸಿ. ಗಾಜಿನ ಬಾಟಲಿಯ ಸುತ್ತಲೂ ಬಣ್ಣ ಹಚ್ಚಿ ವಿವಿಧ ತೆರೆನಾದ ಡಿಸೈನ್ ಬಿಡಿಸಿ ಮನೆಯ ಮೇಜಿನ ಮೇಲೆ ಇರಿಸಬಹುದು. ನೋಡಲು ಆಕರ್ಶಕವಾಗಿ ಕಾಣಿಸುತ್ತದೆ. ಜತೆಗೆ ಆ ಗಾಜಿನ ಬಾಟಲಿಯ ಒಳಗೆ ಅಂದವಾದ ಹೂವುಗಳನ್ನು ಹಾಕಿಡಬಹುದು.
ಮನೆಯ ಹಾಲ್ ಸಣ್ಣದಾಗಿ ಅನಿಸುತ್ತಿದೆ ಅಂತಾದರೆ ಆ ಹಾಲ್ನ ಗೋಡೆಗೆ ದೊಡ್ಡ ಕನ್ನಡಿಯನ್ನು ಅಳವಡಿಸಿ. ಜತೆಗೆ ಅದಕ್ಕೆ ಪ್ರತಿಬಿಂಬವಾಗುವಂತೆ ಹಸಿರು ಗಿಡವನ್ನು ಹಾಲ್ನ ಮೂಲೆಯಲ್ಲಿಡಿ. ನೋಡಲು ಆಕರ್ಶಕವಾಗಿ ಕಾಣಿಸುತ್ತದೆ.
ನಿಮ್ಮ ಮನೆಯ ಕಿಟಕಿ ಗ್ಲಾಸ್ ಆಗಿದ್ದರೆ ಅದರ ಕೆಳಗೆ ಬಣ್ಣದ ಲೈಟ್ಗಳಿಂದ ಅಲಂಕರಿಸಿ. ಗ್ಲಾಸ್ನಿಂದ ಆ ಲೈಟ್ಗಳು ಪ್ರತಿಬಿಂಬಿಸುತ್ತದೆ. ಮನೆಗೆ ಬೆಳಕಾಗಿಯೂ, ಜತೆಗೆ ಮನೆ ಸುಂದರವಾಗಿ ಕಾಣಿಸಲು ಇದು ಉತ್ತಮ ವಿಧಾನ.
Published On - 7:35 am, Sat, 22 May 21