ವಿಶ್ವದ ಅತ್ಯಂತ ಅಪಾಯಕಾರಿ ಸೇತುವೆಗಳು ಇವೇ! ಸುಮ್ಮನೆ ದೂರದಿಂದ ನೋಡಿದರೂ ಸಹ ಎದೆ ಝಲ್ಲೆನ್ನುತ್ತದೆ!
ಜಗತ್ತಿನಲ್ಲಿ ಅನೇಕ ಅಪಾಯಕಾರಿ ಸೇತುವೆಗಳಿವೆ. ಅಂತಹ ಸ್ಥಳಗಳಿಗೆ ಹೋಗಲು ಸಾಕಷ್ಟು ಧೈರ್ಯ ಬೇಕು. ಇಲ್ಲವಾದರೆ ದೂರದಿಂದ ನೋಡಿದ ಮಾತ್ರಕ್ಕೇ ಹೃದಯ ಬಾಯಿಗೆ ಬರುತ್ತದೆ. ಇಂತಹ ಅಪಾಯಕಾರಿ ಸೇತುವೆ ಮೇಲೆ ಪ್ರಯಾಣಿಸಿದರೆ... ಅಷ್ಟೇ ಜೀವ ಮೇಲೆ ಮೇಲಕ್ಕೆ ಹೋಗುವುದು ಖಚಿತ ಎಂದೇ ಹೇಳಬಹುದು. ಜಗತ್ತಿನ ಅತ್ಯಂತ ಅಪಾಯಕಾರಿ ಸೇತುವೆಗಳನ್ನು ನೋಡಿ ಬರೋಣ ಬನ್ನೀ.
1 / 6
Hanging Bridge Of Ghasa: ಘಾಸಾ ನೇಪಾಳದ ಹ್ಯಾಂಗಿಂಗ್ ಬ್ರಿಡ್ಜ್ - ನೇಪಾಳದ ಮಸ್ಸಾ ಪಟ್ಟಣದ ಸಮೀಪದಲ್ಲಿರುವ ಈ ನೇತಾಡುವ ಸೇತುವೆ ಇತ್ತೀಚೆಗೆ ನಿರ್ಮಿಸಲಾದ, ಭಯಾನಕ ಸೇತುವೆಯಾಗಿದೆ. ಅತ್ಯಂತ ಕಿರಿದಾದ ಈ ಸೇತುವೆಯು ಅದರ ಅಡಿಯಲ್ಲಿ ಹರಿಯುವ ನದಿಯ ಮೇಲೆ ಬಹಳ ಎತ್ತರದಲ್ಲಿದೆ. (ಫೋಟೋ ಕ್ರೆಡಿಟ್: Twitter/@DonRame)
2 / 6
U Bein Bridge: U Bein ಸೇತುವೆ ಮ್ಯಾನ್ಮಾರ್ ನಲ್ಲಿದೆ: U Bein ವಿಶ್ವದ ಅತಿ ಉದ್ದದ ತೇಗ ಮರದಿಂದ ಮಾಡಲಾದ ಸೇತುವೆ. ಇದು ಅಮರಾಪುರ ಟೌನ್‌ಶಿಪ್, ಮ್ಯಾಂಡಲೆ ಪ್ರಾಂತ್ಯದಲ್ಲಿದೆ. 1,200 ಮೀಟರ್ ಸೇತುವೆಯನ್ನು 1850 ರಲ್ಲಿ ನಿರ್ಮಿಸಲಾಯಿತು. ಇದು ವಿಶ್ವದ ಅತ್ಯಂತ ಹಳೆಯ ಮತ್ತು ಉದ್ದವಾದ ತೇಗದ ಮರದ ಸೇತುವೆ ಎನ್ನಲಾಗಿದೆ. ನೂರಾರು ಗ್ರಾಮಸ್ಥರು ಮತ್ತು ಸನ್ಯಾಸಿಗಳು ಕೆಲಸಕ್ಕೆ ಹೋಗಿ-ಬರುವಾಗ ಈ ಸೇತುವೆಯನ್ನು ಬಳಸುತ್ತಾರೆ. ನೀವು ಇಲ್ಲಿಗೆ ಪ್ರಯಾಣಿಸಲು ಬಯಸಿದರೆ, ನೀವು ಸೂರ್ಯೋದಯದ ಸಮಯದಲ್ಲಿ ಹೋಗಬಹುದು. (ಫೋಟೋ ಕ್ರೆಡಿಟ್: ವಿಕಿಮೀಡಿಯಾ ಕಾಮನ್ಸ್)
3 / 6
Monkey Bridges: ಮಂಕಿ ಸೇತುವೆಗಳು ವಿಯೆಟ್ನಾಂ ನಲ್ಲಿವೆ: ಮೆಕಾಂಗ್ ಡೆಲ್ಟಾ ವಿಯೆಟ್ನಾಂ ತನ್ನ ಮಂಕಿ ಸೇತುವೆಗಳಿಗೆ ಹೆಸರುವಾಸಿಯಾಗಿದೆ. ಇದು ಮೆಕಾಂಗ್ ಡೆಲ್ಟಾ ಪ್ರವಾಸಗಳಲ್ಲಿ ಪ್ರತಿಯೊಬ್ಬ ವಿದೇಶಿ ಪ್ರಯಾಣಿಕರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ. ಬಹುತೇಕ ಪ್ರತಿಯೊಂದು ದೇಶವು ಸ್ಥಳೀಯ ಜನರ ಸಾಂಸ್ಕೃತಿಕ ಪದ್ಧತಿಗಳನ್ನು ಪ್ರತಿಬಿಂಬಿಸುವ ವಿಶಿಷ್ಟ ಸೇತುವೆಗಳನ್ನು ಹೊಂದಿದೆ. ವಿಶೇಷವಾಗಿ ವಿಯೆಟ್ನಾಂನ ಮೆಕಾಂಗ್ ಡೆಲ್ಟಾ ಪ್ರದೇಶದಲ್ಲಿ, ಅನೇಕ ಪ್ರಯಾಣಿಕರು ಅಪಾಯಕಾರಿ ಆಟದಲ್ಲಿ ಭಾಗವಹಿಸುತ್ತಿದ್ದಾರೆಂದು ಭಾವಿಸುವ ವಿಚಿತ್ರ ಸೇತುವೆಗಳಿವೆ. (ಫೋಟೋ ಕ್ರೆಡಿಟ್: vietnamtravel.com)
4 / 6
Iya Valley Vine Bridges: lya ವ್ಯಾಲಿ ವೈನ್ ಸೇತುವೆಗಳು ಜಪಾನ್ ನಲ್ಲಿವೆ: lya ವ್ಯಾಲಿ ತನ್ನ ನೇತಾಡುವ ವೈನ್ ಸೇತುವೆಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಕಾಜುರಬಾಶಿ ಎಂದು ಕರೆಯಲಾಗುತ್ತದೆ. ಇವು ಇಯಾ ನದಿಯ ಮೇಲೆ ತೂಗಾಡುತ್ತವೆ. ಹಿಂದೆ, ಈಯಾ ಕಣಿವೆಯಲ್ಲಿ ನದಿಯಾದ್ಯಂತ ಜನ ಸಂಚಾರ ಮತ್ತು ಸರಕುಗಳನ್ನು ಸಾಗಿಸಲು ಪರ್ವತ ಕೇಬಲ್‌ಗಳೊಂದಿಗೆ 13 ತೂಗು ಸೇತುವೆಗಳ ಅಗತ್ಯವಿತ್ತು. ಕಾಜುರಬಾಶಿ ಒಳ ಕಣಿವೆಯಲ್ಲಿ ಆಳವಾಗಿ ಉಳಿದಿರುವ ಎರಡು ಸೇತುವೆಗಳು ಇನ್ನೂ ಒಂದಕ್ಕೊಂದು ಹೊಂದಿಕೊಂಡಿವೆ. (ಫೋಟೋ ಕ್ರೆಡಿಟ್: shikokutours.com)
5 / 6
Hussaini Bridge: ಹುಸೇನಿ ಹ್ಯಾಂಗಿಂಗ್ ಸೇತುವೆ - ಹುಸೇನಿ ನೇತಾಡುವ ಸೇತುವೆಯು ಪಾಕಿಸ್ತಾನದಲ್ಲಿದೆ. ಹುಸ್ಸೇನಿ ನೇತಾಡುವ ಸೇತುವೆಯು ಒಂದು ಸೂಕ್ಷ್ಮ ದಾರದಂತಿದ್ದು ಅದು ಹುಂಜಾ ನದಿಯ ಹಿಮದ ನೀರಿನಲ್ಲಿ ಹಾದುಹೋಗುತ್ತದೆ ಮತ್ತು ಕಾರಕೋರಂ ಶ್ರೇಣಿಯ ಒರಟಾದ ಭೂಪ್ರದೇಶವನ್ನು ವ್ಯಾಪಿಸಿದೆ. ಸಂಪೂರ್ಣ ಹಗ್ಗ ಮತ್ತು ಮರದ ಹಲಗೆ ಸೇತುವೆಯು ಬಲವಾದ ಗಾಳಿಯಲ್ಲಿ ತೂಗಾಡುತ್ತದೆ. (ಫೋಟೋ ಕ್ರೆಡಿಟ್: ವಿಕಿಮೀಡಿಯಾ ಕಾಮನ್ಸ್)
6 / 6
Living root bridge: ಲಿವಿಂಗ್ ರೂಟ್ ಬ್ರಿಡ್ಜ್‌ಗಳು ಭಾರತದ ಮೇಘಾಲಯದಲ್ಲಿದೆ. ಲಿವಿಂಗ್ ರೂಟ್ ಬ್ರಿಡ್ಜ್‌ಗಳು ಮೇಘಾಲಯದ ಅತ್ಯಂತ ಸುಂದರವಾದ ಮತ್ತು ಸ್ಪಷ್ಟವಾದ ಪರಂಪರೆಯ ತಾಣಗಳಾಗಿವೆ. ಇವುಗಳನ್ನು ಇತ್ತೀಚೆಗೆ UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. (ಫೋಟೋ ಕ್ರೆಡಿಟ್: ವಿಕಿಮೀಡಿಯಾ ಕಾಮನ್ಸ್)