Temple for Parents: ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸುವ ಈಗಿನ ಕಾಲದಲ್ಲಿ ತಂದೆ-ತಾಯಿಗೆ ದೇವಾಲಯ ನಿರ್ಮಾಣ ಮಾಡಿದ ಮಕ್ಕಳು!
TV9 Web | Updated By: ಸಾಧು ಶ್ರೀನಾಥ್
Updated on:
Mar 01, 2023 | 7:24 PM
ಹೆತ್ತ ತಂದೆ ತಾಯಿ ವೃದ್ದರಾಗುತ್ತಿದ್ದಂತೆ ಅವರನ್ನು ಅನಾಥ ಆಶ್ರಮಕ್ಕೆ ಸೇರಿಸೊ ಈಗಿನ ಕಾಲದಲ್ಲಿ, ತಂದೆ ತಾಯಿಗೊಂದು ದೇವಸ್ಥಾನ ನಿರ್ಮಾಣ ಮಾಡಿ ಪ್ರತಿನಿತ್ಯ ತಂದೆ ತಾಯಿಯ ಪ್ರತಿಮೆಗೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ ಅವರ ಪುತ್ರರು. ಅದೆಲ್ಲಿ ಅಂತೀರಾ? ಈ ವರದಿ ನೋಡಿ!
1 / 8
ಹೆತ್ತ ತಂದೆ ತಾಯಿ ವೃದ್ದರಾಗುತ್ತಿದ್ದಂತೆ ಅವರನ್ನು ಅನಾಥ ಆಶ್ರಮಕ್ಕೆ ಸೇರಿಸೊ ಈಗಿನ ಕಾಲದಲ್ಲಿ, ತಂದೆ ತಾಯಿಗೊಂದು ದೇವಸ್ಥಾನ (Temple) ನಿರ್ಮಾಣ ಮಾಡಿ ಪ್ರತಿನಿತ್ಯ ತಂದೆ ತಾಯಿಯ ಪ್ರತಿಮೆಗೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ ಅವರ ಪುತ್ರರು (Sons). ಅದೆಲ್ಲಿ ಅಂತೀರಾ? ಈ ವರದಿ ನೋಡಿ!
2 / 8
ತಂದೆ ತಾಯಿ ಅಂತಲೂ ನೋಡದೆ ವೃದ್ದಾಶ್ರಮಗಳಲ್ಲಿ ಸೇರಿಸೋ ಮಕ್ಕಳು (Children) ಇರೋ ಈ ಕಲಿಯುಗದಲ್ಲಿ ಹೆತ್ತವರಿಗಾಗಿಯೇ ದೇವಾಲಯ ನಿರ್ಮಾಣ ಮಾಡಿ ಹೆತ್ತವರ ಪ್ರತಿಮೆಗಳಿಗೆ ಪ್ರತಿ ನಿತ್ಯ ಪೂಜೆ ಪುನಸ್ಕಾರ ನಡೆಸುತ್ತಿರೋದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ( Gauribidanur) ತಾಲೂಕಿನ ಕಲ್ಲೂಡಿ ಗ್ರಾಮದ ಬಳಿ (Kalludi village).
3 / 8
ಗ್ರಾಮದ ನಿವೃತ್ತ ಅಧಿಕಾರಿ ಬಾಬಣ್ಣ ಎಂಬುವವರು ತಮ್ಮ ತಂದೆ ನರಸಯ್ಯ ಹಾಗೂ ತಾಯಿ ಗೌರಮ್ಮನವರ ಪ್ರತಿಮೆಗಳನ್ನ ಮಾಡಿಸಿ ಅವರಿಗೆ ದೇವಾಲಯವನ್ನ ಕಟ್ಟಿ ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ)
4 / 8
ಇನ್ನು ನರಸಪ್ಪ-ಗೌರಮ್ಮ ದಂಪತಿಗೆ 10 ಮಂದಿ ಮಕ್ಕಳಿದ್ದು, ತಾಯಿ ಗೌರಮ್ಮನವರು 2014 ರಲ್ಲಿ ತೀರಿಕೊಂಡಿದ್ದರು. ನರಸಪ್ಪನವರು 2022 ರಲ್ಲಿ ತೀರಿಕೊಂಡಿದ್ದಾರೆ.
5 / 8
ಇದ್ರಿಂದ ತಮ್ಮ ತಂದೆ ತಾಯಿಯ ನೆನಪುಗಳು ಅಚ್ಚಳಿಯದಂತೆ ಉಳಿಯಬೇಕು, ತಂದೆ ತಾಯಿಯ ಪ್ರತಿರೂಪ ತಮ್ಮ ಕಣ್ಣು ಮುಂದೆಯೇ ಇರಬೇಕು ಅಂತ ಬಾಬಣ್ಣನವರು ರಾಜಸ್ಥಾನದ ನುರಿತ ಶಿಲ್ಪಿಗಳ ಕೈಯಲ್ಲಿ ಪ್ರತಿಮೆಗಳನ್ನ ಮಾಡಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.
6 / 8
ತಂದೆ ತಾಯಿಯ ಪ್ರತಿಮೆಗಳಿಗೆ ಅವರ ಮಕ್ಕಳು ಪೂಜೆ ಪುನಸ್ಕಾರ ಮಾಡಿ ತಂದೆ ತಾಯಿಯ ಶ್ರಮವನ್ನು ನೆನಪಿಸಿಕೊಳ್ತಿದ್ದಾರೆ ಬಾಬಣ್ಣ ಸಹೋದರ ಸುರೇಶ್.
7 / 8
8 / 8
ಬದುಕಿರುವಾಗಲೇ ಹೆತ್ತ ತಂದೆ ತಾಯಿ ಬಗ್ಗೆ ತಾತ್ಸಾರ ತೋರುವ ಅದೆಷ್ಟೋ ಮಕ್ಕಳು ಇರುವ ಈ ಕಾಲದಲ್ಲಿ... ಸತ್ತ ಮೇಲೂ ತಂದೆ ತಾಯಿ ನೆನಪಲ್ಲಿ ದೇವಾಲಯ ಕಟ್ಟಿ ಪೂಜೆ ಪುನಸ್ಕಾರ ಮಾಡುತ್ತೀರೋ ಇವರ ಕಾಯಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.