
ಹೃದಯಾಘಾತದಿಂದ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಪಂದನಾಗೆ ಹೃದಯಾಘಾತವಾಗಿತ್ತು.

ಹೃದಯಾಘಾತ ಹಿನ್ನೆಲೆ ತಕ್ಷಣವೇ ಸ್ಪಂದನಾ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೊನೆಯುಸಿರೆಳೆದಿದ್ದಾರೆ.

ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರಿಯಾಗಿದ್ದಾರೆ.

2007ರ ಆ.26ರಂದು ಸ್ಪಂದನಾ, ವಿಜಯ್ ರಾಘವೇಂದ್ರ ವಿವಾಹವಾಗಿದ್ದರು.

ವಿಜಯ್ ರಾಘವೇಂದ್ರ, ಸ್ಪಂದನಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಥೈಲ್ಯಾಂಡ್ ನಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಈ ಘಟನೆ ನಡೆದಿದೆ

ನಾಳೆ ಬೆಂಗಳೂರಿಗೆ ಸ್ಪಂದನಾ ವಿಜಯ್ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

ವಿಜಯ್ ರಾಘವೇಂದ್ರ-ಸ್ಪಂದನಾ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದರು,ಮೊದಲಿಗೆ ಸ್ಪಂದನ ಅವರ ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ.
Published On - 11:20 am, Mon, 7 August 23