- Kannada News Photo gallery Davangere: the future doctor played in the mud field with all sportsmanship
ದಾವಣಗೆರೆ: ಕೆಸರು ಗದ್ದೆಯಲ್ಲಿ ಭಾವಿ ವೈದ್ಯರು ನಾ ಮುಂದು ತಾ ಮುಂದು ಎಂದು ಏನು ಆಡಿದರು ನೋಡಿ!?
ಅವರೆಲ್ಲಾ ವೈದ್ಯರು. ಬಿಳಿ ಕೋಟ್ ಹಾಕಿಕೊಂಡು ಸಂಕಷ್ಟದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಮಾಡುವರು. ಬಿಳಿಕೋಟ್ ಗೆ ಸ್ವಲ್ಪ ಕಲೆಯಾದ್ರ ಬೇಸರ ಪಟ್ಟುಕೊಳ್ಳುವಷ್ಟು ಸೂಕ್ಷ್ಮ ಜನ. ಇಂತವರು ಕೆಸರು ಗದ್ದೆಯಲ್ಲಿ ಓಡಾಡಿದರು. ಚಿನ್ನಿದಾಂಡು , ಬುಗರಿ ಆಡಲು ಆರಂಭಿಸಿದ್ರು. ಹೌದಾ. ಇಲ್ಲಿದೆ ನೋಡಿ ಡಾಕ್ಟರ್ ಹಳ್ಳಿ ಕಮಾಲ್ ಸ್ಟೋರಿ.
Updated on: Aug 07, 2023 | 12:21 PM

ಅವರೆಲ್ಲಾ ವೈದ್ಯರು. ಬಿಳಿ ಕೋಟ್ ಹಾಕಿಕೊಂಡು ಸಂಕಷ್ಟದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಮಾಡುವರು. ಬಿಳಿಕೋಟ್ ಗೆ ಸ್ವಲ್ಪ ಕಲೆಯಾದ್ರ ಬೇಸರ ಪಟ್ಟುಕೊಳ್ಳುವಷ್ಟು ಸೂಕ್ಷ್ಮ ಜನ. ಇಂತವರು ಕೆಸರು ಗದ್ದೆಯಲ್ಲಿ ಓಡಾಡಿದರು. ಚಿನ್ನಿದಾಂಡು , ಬುಗರಿ ಆಡಲು ಆರಂಭಿಸಿದ್ರು. ಹೌದಾ. ಇಲ್ಲಿದೆ ನೋಡಿ ಡಾಕ್ಟರ್ ಹಳ್ಳಿ ಕಮಾಲ್ ಸ್ಟೋರಿ.

ಇಂತವರು ಕೆಸರು ಗದ್ದೆಯಲ್ಲಿ ಓಡಾಡಿದರು. ಚಿನ್ನಿದಾಂಡು , ಬುಗರಿ ಆಡಲು ಆರಂಭಿಸಿದ್ರು. ಹೌದಾ. ಇಲ್ಲಿದೆ ನೋಡಿ ಡಾಕ್ಟರ್ ಹಳ್ಳಿ ಕಮಾಲ್ ಸ್ಟೋರಿ.

ಇವರೆಲ್ಲ ಪ್ರತಿಯೊಬ್ಬ ಪಾಲಕರ ಕನಸಿನ ಕೋರ್ಸ್ಗೆ ಸೇರಿದವರು. ತಮ್ಮ ಮಕ್ಕಳು ವೈದ್ಯರಾಗಬೇಕು.ಇಂಜಿನೀಯರ್ ಆಗಬೇಕು ಎಂದು. ಆದ್ರೆ ಕೆಲ ಪಾಲಕರಿಗೆ ಮಾತ್ರ ಇಂತಹ ಭಾಗ್ಯ ಲಭ್ಯವಾಗುತ್ತಿದೆ. ಇಲ್ಲಿ ಇದ್ದವರೆಲ್ಲಾ ಪಾಲಕರ ಕನಸು ನನಸು ಮಾಡಿದ ಮಕ್ಕಳು. ಅಂದ್ರೆ ಇವರೆಲ್ಲಾ ವೈದ್ಯರು. ದಾವಣಗೆರೆ ನಗರದ ಎಸ್ ಎಸ್ ಮೆಡಿಕಲ್ ಕಾಲೇಜ್ ಹಾಗೂ ಜೆಜೆ ಎಂ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿ ಎಸ್ ಹಾಗೂ ಎಂಡಿ ಸೇರಿದಂತೆ ವಿವಿಧ ಪಿಜೆ ಕೋರ್ಸ್ ಮಾಡುತ್ತಿರುವ ವೈದ್ಯರು.

ಇವರೆಲ್ಲಾ ಇಂದು ಒಂದು ರೀತಿಯಲ್ಲಿ ದೇಶಿ ಅಪ್ಪಟ ರೈತನ ಮಕ್ಕಳಾಗಿದ್ದರು. ಎಲ್ಲಿ ನೋಡಿದರಲ್ಲಿ ವೈದ್ಯರೆ ಇದ್ದರು. ದಾವಣಗೆರೆ ನಗರದ ಹೊರವಲಯದ ಗ್ಲಾಸ್ ಹೌಸ್ ಬಳಿಯ ಭತ್ತದ ಗದ್ದೆಗೆ ಬಂದಿದ್ದರು. ಕಾರಣ... ಇಲ್ಲಿನ ಶಿಕ್ಷಕರು ಹಾಗೂ ಪ್ರಾಧ್ಯಾಪಕರು ಸೇರಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಶಿಯ ತನವನ್ನ ಪರಿಚಯಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು.

ಇದರ ಫಲವಾಗಿ ಗದ್ದೆಯಲ್ಲಿ ನೀರು ತುಂಬಿದ್ದರೂ ಲೆಕ್ಕಿಸದೇ ಓಡುತ್ತಿದ್ದರು. ಲೇಡಿ ಡಾಕ್ಟರ್ ಗಳು ಸಹ ನಾವೇನು ಕಮ್ಮಿ ಎಂದು ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿದ್ದರು.

ಇದರಲ್ಲಿ ನೀರು ತುಂಬಿದ ಕೇಸರಿನ ಗದ್ದೆಯಲ್ಲಿ ವಾಲಿಬಾಲ್ ಆಡುವುದು. ಜೊತೆಗೆ ಕೇಸರು ಗದ್ದೆ ಆಟ. ಓಟ ಹೀಗೆ ಹತ್ತು ಹಲವಾರು ವಿವಿಧ ಗ್ರಾಮೀಣ ಕ್ರೀಡೆಗಳನ್ನ ಆಡಿಸಲಾಯಿತು. ಪ್ರತಿಯೊಂದು ಸ್ಪರ್ಧೆಗಳಲ್ಲಿ ಬಹುಮಾನ ಕೊಡಲಾಗುತ್ತಿತ್ತು.

ಇದೇ ಕಾರಣಕ್ಕೆ ಸ್ಪರ್ಧೆಗಳು ತೀವ್ರತೆ ಪಡೆದುಕೊಂಡಿತ್ತು. ಇವರೆಲ್ಲಾ ದಿನ ಬೆಳಗಾದ್ರೆ ರೋಗಿಗಳ ಜೊತೆ ಮಾತುಕತೆ ಶಸ್ತ್ರಚಿಕಿತ್ಸೆ ರಿಪೋರ್ಟ್ ತಯಾರಿಸುವುದು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಚಿನ್ನಿದಾಂಡು, ಲಗೋರಿ, ಗೋಲಿ, ಕುಂಟೊಬಿಲ್ಲೆ ಸೇರಿದಂತೆ ಹತ್ತಾರು ಕ್ರೀಡೆಗಳನ್ನ ಆಡಿ ಸಂಭ್ರಮಿಸಿದರು.

ಹಿರಿಯ ವೈದ್ಯರ ಜೊತೆಗೆ ವಿವಿಧ ಕಾಯಿಲೆಗಳ ಬಗ್ಗೆ ಚರ್ಚೆ ಮಾಡುವುದು ಇವೆಲ್ಲ ನಿರಂತರ ಕಾಯಕ. ಆದ್ರೆ ಇದನ್ನ ಮೆರತು ಕೆಸರುಮಯ ದೇಶಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಇತ್ತೀಚಿನ ದಿನ ಮನಸ್ಸಿನ ಮೇಲೆ ಮೊಬೈಲ್ ದಾಳಿ ಮಾಡಿದ ಬಳಿಕ ದೇಶಿ ಕ್ರೀಡೆಗಳು ಮಾಯವಾಗಿದೆ. ಕ್ರೀಡೆಗಳನ್ನ ಕ್ರೀಡಾಂಗಣಕ್ಕೆ ಇಳಿದು ಆಡುವ ಬದಲು ಮೊಬೈಲ್ ನಲ್ಲಿಯೇ ಆಡುವುದು ರೂಢಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂತಹ ದೇಶಿ ಕ್ರೀಡೆಗಳ ಖದರ್ ತೋರಿಸಿದ್ದು ವಿಶೇಷವಾಗಿತ್ತು.



















