Spinach Juice: ತಂಪಾದ ಪಾಲಕ್ ಜ್ಯೂಸ್​ ಕುಡಿದರೆ ಹಲವು ರೋಗಗಳನ್ನು ದೂರವಿಡಬಹುದು

|

Updated on: Oct 14, 2023 | 12:05 PM

ತೂಕ ಇಳಿಸಿಕೊಳ್ಳಲು ಪಾಲಕ್ ಜ್ಯೂಸ್ ಸಹಾಯ ಮಾಡುತ್ತದೆ. ಪಾಲಕ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಉತ್ತಮ ಮೂಳೆಗಳ ಆರೋಗ್ಯಕ್ಕೆ ಪಾಲಕ್ ಜ್ಯೂಸ್ ಸಹಾಯ ಮಾಡುತ್ತದೆ.

1 / 17
ಪಾಲಕ್ ಜ್ಯೂಸ್​ ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಮ್ಯಾಕ್ರೋ ಪೋಷಕಾಂಶಗಳಿಂದ ತುಂಬಿರುತ್ತದೆ. ಪಾಲಕ್ ಸೊಪ್ಪಿನ ತಾಜಾ ಎಲೆಗಳನ್ನು ಕುದಿಸಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

2 / 17
ಪಾಲಕ್ ಪರ್ಷಿಯಾದಲ್ಲಿ ಹುಟ್ಟಿದ ಹಸಿರು ಸೊಪ್ಪು. ಪಾಲಕ್ ಸೊಪ್ಪಿನಲ್ಲಿ ಹೆಚ್ಚಾಗಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ.

3 / 17
ಪಾಲಕ್‌ನಲ್ಲಿ ಕರಗದ ನಾರಿನಂಶ ಅಧಿಕವಾಗಿದೆ. ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪಾಲಕ್ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ.

4 / 17
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ 1, ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಸಿಯಂ ಅಂಶಗಳು ಅಧಿಕವಾಗಿದೆ.

5 / 17
ಪಾಲಕ್ ಜ್ಯೂಸ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಪಾಲಕ್ ಸೊಪ್ಪಲ್ಲಿ ಕೆಲವು ತರಕಾರಿಗಳಲ್ಲಿ ಬಣ್ಣಕ್ಕೆ ಕಾರಣವಾಗಿರುವ ಕ್ಯಾರೊಟಿನಾಯ್ಡ್‌ಗಳಾದ ಝೀಕ್ಸಾಂಥಿನ್ ಮತ್ತು ಲುಟೀನ್‌ಗಳು ಹೆಚ್ಚಾಗಿವೆ.

6 / 17
ಮನುಷ್ಯನ ಕಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಈ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಇದು ಸೂರ್ಯನ ಬೆಳಕಿನಿಂದ ಉಂಟಾಗುವ ಹಾನಿಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

7 / 17
ಪಾಲಕ್ ಜ್ಯೂಸ್ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಪಾಲಕ್‌ನಲ್ಲಿ MGDG ಮತ್ತು SQDG ಎಂಬ ಎರಡು ಘಟಕಗಳಿವೆ. ಇದು ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

8 / 17
ಪಾಲಕ್ ಜ್ಯೂಸ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಪಾಲಕವು ಹೆಚ್ಚಿನ ಪ್ರಮಾಣದ ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಮಧ್ಯಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

9 / 17
ಕಿಡ್ನಿ ಸ್ಟೋನ್​ನಿಂದ ಬಳಲುತ್ತಿರುವವರಿಗೆ ಪಾಲಕ್ ಜ್ಯೂಸ್ ಅತ್ಯುತ್ತಮ ಆಹಾರ.

10 / 17
ಕಿಡ್ನಿಯಲ್ಲಿ ಆಮ್ಲ ಮತ್ತು ಖನಿಜ ಲವಣಗಳ ಸಂಗ್ರಹದಿಂದ ಕಲ್ಲುಗಳು ಉಂಟಾಗುತ್ತವೆ. ಪಾಲಕ್ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಧಿಕವಾಗಿದೆ.

11 / 17
ರಕ್ತ ಹೆಪ್ಪುಗಟ್ಟುವಿಕೆಗೆ ಪಾಲಕ್ ಜ್ಯೂಸ್ ಸಹಕಾರಿಯಾಗಿದೆ. ಪಾಲಕ್ ವಿಟಮಿನ್ K1 ಅಂಶವನ್ನು ಹೊಂದಿದೆ.

12 / 17
ಇದು ನಮ್ಮ ದೇಹದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ರಕ್ತ ಹೆಪ್ಪುಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

13 / 17
ಉತ್ತಮ ಮೂಳೆಗಳ ಆರೋಗ್ಯಕ್ಕೆ ಪಾಲಕ್ ಜ್ಯೂಸ್ ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದೆ. ಇದು ಉತ್ತಮ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ನಿಮ್ಮ ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

14 / 17
ತೂಕ ಇಳಿಸಿಕೊಳ್ಳಲು ಪಾಲಕ್ ಜ್ಯೂಸ್ ಸಹಾಯ ಮಾಡುತ್ತದೆ. ಪಾಲಕ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

15 / 17
ಪಾಲಕ್ ಜ್ಯೂಸ್ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಈ ಸೂಪರ್‌ಫುಡ್‌ನಲ್ಲಿ ನಿಯೋಕ್ಸಾಂಥಿನ್ ಮತ್ತು ವಯೋಲಾಕ್ಸಾಂಥಿನ್ ಎರಡು ಉರಿಯೂತ ನಿವಾರಕ ಗುಣಲಕ್ಷಣಗಳು ಇವೆ. ಇದು ಆಸ್ಟಿಯೊಪೊರೋಸಿಸ್, ಮೈಗ್ರೇನ್, ಆಸ್ತಮಾ, ಸಂಧಿವಾತ ಮತ್ತು ತಲೆನೋವುಗಳನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ.

16 / 17
ಪಾಲಕ್​ನಲ್ಲಿರುವ ಹೆಚ್ಚಿನ ಸತು ಮತ್ತು ಮೆಗ್ನೀಸಿಯಮ್ ಅಂಶವು ರಾತ್ರಿಯ ವೇಳೆ ಉತ್ತಮ ನಿದ್ರೆ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಪಾಲಕ್ ಎಲೆಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

17 / 17
ಪಾಲಕ್​ನಲ್ಲಿ ಕಂಡುಬರುವ ವಿಟಮಿನ್ ಎ ಅಂಶವು ಉಸಿರಾಟ, ಕರುಳುಗಳು ಮತ್ತು ಲೋಳೆಯ ಪೊರೆಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಪಾಲಕ್ ಜ್ಯೂಸ್ ರಕ್ತಹೀನತೆಯನ್ನು ತಡೆಯುತ್ತದೆ. ಪಾಲಕ್ ಸೊಪ್ಪುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು, ಅದು ರಕ್ತಹೀನತೆಯ ಅಪಾಯದಿಂದ ನಿಮ್ಮನ್ನು ಕಾಪಾಡುತ್ತದೆ.