ದಿನಕ್ಕೆ ಐದಾರು ಎಸಳು ಪುದೀನಾ ಸೊಪ್ಪು ತಿಂದರೆ ಏನೇನೆಲ್ಲ ಆಗುತ್ತೆ ನೋಡಿ!
ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್ ತೆಗೆದುಹಾಕುತ್ತದೆ. ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Updated on: Oct 14, 2023 | 4:54 PM

ಪುದೀನಾ ಸೊಪ್ಪು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ವೈಜ್ಞಾನಿಕವಾಗಿ ಮೆಂಥಾ ಸ್ಪಿಕಾಟಾ ಎಂದು ಕರೆಯಲಾಗುತ್ತದೆ.

ಪುದೀನಾವನ್ನು ಇಂಗ್ಲಿಷ್‌ನಲ್ಲಿ ಸ್ಪಿಯರ್‌ಮಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ.

ಪುದೀನಾ ಸೊಪ್ಪಿನ ಪರಿಮಳದಿಂದಾಗಿ ಅಡುಗೆಗೆ ಹೊಸ ರುಚಿ ಬರುತ್ತದೆ. ಪಲಾವ್, ಬಿರಿಯಾನಿ, ಚಟ್ನಿ, ಸ್ಮೂಥಿ, ಜ್ಯೂಸ್ ಹೀಗೆ ಹಲವು ರೀತಿಯ ಅಡುಗೆಯಲ್ಲಿ ಪುದೀನಾವನ್ನು ಬಳಸಲಾಗುತ್ತದೆ.

ಪುದಿನಾದ ಒಣಗಿದ ಸಸ್ಯ ಮತ್ತು ಸಾರಭೂತ ತೈಲಗಳನ್ನು ಆಹಾರ, ಸೌಂದರ್ಯವರ್ಧಕ, ಮಿಠಾಯಿ, ಚೂಯಿಂಗ್ ಗಮ್, ಟೂತ್‌ಪೇಸ್ಟ್ ಮತ್ತು ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್ ತೆಗೆದುಹಾಕುತ್ತದೆ.

ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಇದು ಮೂತ್ರವರ್ಧಕ ಚಟುವಟಿಕೆಯನ್ನು ಹೊಂದಿದೆ. ಅಂದರೆ, ಪುದೀನಾವನ್ನು ತಿಂದರೆ ಮೂತ್ರ ವಿಸರ್ಜನೆ ಹೆಚ್ಚಾಗಿ, ಕಿಡ್ನಿ ಕ್ಲೀನ್ ಆಗುತ್ತದೆ.

ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದು ಆಂಟಿಫಂಗಲ್ ಆಗಿದ್ದು, ಅತಿಸಾರವನ್ನು ಕೂಡ ಕಡಿಮೆ ಮಾಡುತ್ತದೆ.

ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶೀತ ಬಂದಾಗ ಪುದೀನಾವನ್ನು ಸೇವಿಸಿದರೆ ಬೇಗ ಗುಣವಾಗುತ್ತದೆ. ಅಲ್ಲದೆ, ನಿಮ್ಮ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

ನಿಮ್ಮ ಜೀರ್ಣಕ್ರಿಯೆಯನ್ನು ಪುದೀನಾ ಸರಾಗಗೊಳಿಸುತ್ತದೆ. ಪುದಿನಾ ಕರುಳಿನಿಂದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಪುದೀನಾವನ್ನು ಸುಲಭವಾಗಿ ಮನೆಯ ಹಿತ್ತಿಲಲ್ಲೋ, ಬಾಲ್ಕನಿಯಲ್ಲೋ ಬೆಳೆಸಬಹುದು. ಇದು ಎಲ್ಲಿ ಬೇಕಾದರೂ ಸೊಂಪಾಗಿ ಬೆಳೆಯುತ್ತದೆ.

ಅಡುಗೆಗೆ ಮಾತ್ರವಲ್ಲದೆ ನಿಮ್ಮ ಲೆಮನ್ ಟೀಗೆ ಒಂದೆರಡು ಎಸಳು ಪುದೀನಾವನ್ನು ಹಾಕಿಕೊಂಡರೆ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಮಜ್ಜಿಗೆಗೂ ಪುದೀನಾ ಸೊಪ್ಪು ಹಾಕಿಕೊಳ್ಳಬಹುದು.

ಪ್ರಯೋಗಾಲಯದ ಅಧ್ಯಯನಗಳಲ್ಲಿ, ಪುದೀನಾ ಎಲೆಗಳ ಸಾರವು ವಿವಿಧ ಕ್ಯಾನ್ಸರ್ ಕೋಶಗಳ ವಿರುದ್ಧ ಬಲವಾದ ಕ್ಯಾನ್ಸರ್ ವಿರೋಧಿ ಚಟುವಟಿಕೆಯನ್ನು ತೋರಿಸಿದೆ. ಪುದೀನಾ ಎಲೆಗಳಿಂದ ಸಾರಗಳು ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

ಪುದೀನಾದ ಜ್ಯೂಸ್ ಮಾಡಿಕೊಂಡು ಕುಡಿದರೂ ಒಳ್ಳೆಯದು. ಪುದಿನಾ ಎಲೆಯ ಸಾರವು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಹೀಗಾಗಿ, ದಿನವೂ ಐದಾರು ಎಸಳು ಪುದೀನಾವನ್ನು ಸೇವಿಸಿದರೆ ಅದರಿಂದ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.



















