ಕೃಷ್ಣನ ಮನದರಸಿ ರಾಧೆಯಾಗಿ ನಟಿ ತಮನ್ನಾ ಭಾಟಿಯಾ, ಇಲ್ಲಿವೆ ಸುಂದರ ಚಿತ್ರಗಳು
Tamannah Bhatia: ನಟಿ ತಮನ್ನಾ ಭಾಟಿಯಾ ರಾಧೆಯಾಗಿದ್ದಾರೆ. ಆದರೆ ಇದು ಯಾವುದೋ ಸಿನಿಮಾ, ವೆಬ್ ಸರಣಿಗಾಗಿ ಅಲ್ಲ ಬದಲಿಗೆ ಜಾಹೀರಾತಿಗಾಗಿ. ತಮನ್ನಾ ಭಾಟಿಯಾರ ಕೆಲ ಸುಂದರ ಚಿತ್ರಗಳು ಇಲ್ಲಿವೆ.
1 / 7
ನಟಿ ತಮನ್ನಾ ಭಾಟಿಯಾ ಜನಪ್ರಿಯ ಬಹುಭಾಷಾ ನಟಿ. ಅವರು ನಟಿಯಾಗಿ ಎಷ್ಟು ಜನಪ್ರಿಯರೊ ಮಾಡೆಲ್ ಆಗಿಯೂ ಅಷ್ಟೆ ಜನಪ್ರಿಯರು. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ ತಮನ್ನಾ.
2 / 7
ಚಿನ್ನದ ಆಭರಣ, ಬ್ಯೂಟಿ ಪ್ರಾಡೆಕ್ಟ್, ಫ್ಯಾಷನ್, ಬ್ಯಾಂಕಿಂಗ್, ಪ್ರವಾಸ, ಮನರಂಜನೆ ಇನ್ನೂ ಹಲವಾರು ಸಂಸ್ಥೆಗಳಿಗೆ ತಮನ್ನಾ ಭಾಟಿಯಾ ರಾಯಭಾರಿ ಆಗಿದ್ದಾರೆ. ಅವರ ಸೌಂದರ್ಯ ಹಾಗೂ ಜನಪ್ರಿಯತೆಯನ್ನು ಹಲವು ಬ್ರ್ಯಾಂಡ್ಗಳು ಬಳಸಿಕೊಂಡಿವೆ.
3 / 7
ಆದರೆ ಇತ್ತೀಚೆಗೆ ತಮನ್ನಾ ಭಿನ್ನ ರೀತಿಯ ವಿಡಿಯೋ, ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಧೆ ಮತ್ತು ಗೋಪಿಕೆಯರ ವೇಷದಲ್ಲಿ ಯುವತಿಯರು ಸ್ನಾನ ಮಾಡುತ್ತಿರುವ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದರು.
4 / 7
ಮುಂದುವರೆದು, ಕೃಷ್ಣ-ರಾಧೆ, ಕೃಷ್ಣನ ತುಂಟಾಟ, ಗೋಪಿಕೆಯರೊಟ್ಟಿಗೆ ಕೃಷ್ಣನ ಸರಸ ಇನ್ನಿತರೆ ದೃಶ್ಯಗಳ ವಿಡಿಯೋ ಹಾಗೂ ಚಿತ್ರಗಳನ್ನು ನಟಿ ತಮನ್ನಾ ಹಂಚಿಕೊಂಡಿದ್ದರು. ಚಿತ್ರ ಹಾಗೂ ವಿಡಿಯೋ ಬಹಳ ಸುಂದರವಾಗಿ ಕಾಣುತ್ತಿದ್ದವು.
5 / 7
ಅಸಲಿಗೆ ತಮನ್ನಾ, ತೊರಾನಿ ಹೆಸರಿನ ಬ್ರ್ಯಾಂಡ್ನ ಬಟ್ಟೆಗಳ ರಾಯಭಾರಿ ಆಗಿದ್ದು, ‘ಲೀಲಾ’ ಹೆಸರಿನ ಲೈನ್ನ ಬಟ್ಟೆಗಳ ಪ್ರಚಾರಕ್ಕಾಗಿ ರಾಧೆಯ ವೇಷದಲ್ಲಿ ನಟಿ ತಮನ್ನಾ ಫೋಟೊಶೂಟ್ ಮಾಡಿಸಿದ್ದಾರೆ.
6 / 7
ತೊರಾನಿಯ ಫೋಟೊಶೂಟ್ ಬಗ್ಗೆ ವೈಯಕ್ತಿಕವಾಗಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವ ನಟಿ ತಮನ್ನಾ, ಈ ಬ್ರ್ಯಾಂಡ್ ಕೊಲ್ಯಾಬರೇಷನ್ ನನ್ನ ಪಾಲಿಗೆ ಅತ್ಯಂತ ಭಿನ್ನ ಹಾಗೂ ಮಹತ್ವವಾದುದು. ಸೆಟ್ನಲ್ಲಿ ಇದ್ದ ನಮಗೆಲ್ಲರಿಗೂ ನಾವೇನೋ ಅದ್ಭುತವಾದುದನ್ನು ಮಾಡುತ್ತಿರುವ ನಂಬಿಕೆ ಇತ್ತು ಎಂದಿದ್ದಾರೆ.
7 / 7
ರಾಧಾ-ಕೃಷ್ಣರ ಸರಸ, ವಿರಸ ಹೀಗೆ ಹಲವು ಭಾವ, ಭಂಗಿ, ಸನ್ನಿವೇಶಗಳ ಚಿತ್ರಗಳನ್ನು ತೊರಾನಿಯ ಲೀಲಾ ವಿನ್ಯಾಸದ ಉಡುಪುಗಳ ಪ್ರಚಾರಕ್ಕಾಗಿ ಸೆರೆ ಹಿಡಿಯಲಾಗಿದ್ದು ಕೆಲವುಗಳ ಚಿತ್ರ ಇಲ್ಲಿದೆ.