ಟ್ಯಾಟೂ ಹಾಕಿಸಿಕೊಳ್ಳುತ್ತೀರಾ?; ಈ ವಿಷಯಗಳ ಬಗ್ಗೆ ಎಚ್ಚರವಿರಲಿ
Tattoo Designs: ಟ್ಯಾಟೂ ಹಾಕುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಟ್ಯಾಟೂ ಹಾಕಿಸಿಕೊಳ್ಳುವ ಆಸೆ ನಿಮಗೂ ಇದ್ದರೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.
1 / 8
ಟ್ಯಾಟೂ ಹಾಕಿಸಿಕೊಳ್ಳುವ ಆಸೆ ನಿಮಗೂ ಇದ್ದರೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.
2 / 8
ಟ್ಯಾಟೂ ಡಿಸೈನ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡು ಹುಡುಕಾಡುತ್ತೀರೋ ಅದೇ ರೀತಿ ಲೈಸೆನ್ಸ್ ಇರುವ ಮತ್ತು ಉತ್ತಮ ಅನುಭವ ಇರುವ ಟ್ಯಾಟೂ ಕಲಾವಿದರನ್ನು ಕೂಡ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.
3 / 8
ಕಡಿಮೆ ದುಡ್ಡಿನಲ್ಲಿ ಟ್ಯಾಟೂ ಹಾಕುತ್ತಾರೆ ಎಂದು ಅನುಭವವಿಲ್ಲದ ಅಥವಾ ಲೈಸೆನ್ಸ್ ಇಲ್ಲದವರ ಬಳಿ ಟ್ಯಾಟೂ ಹಾಕಿಸಿಕೊಳ್ಳಬೇಡಿ. ಇದರಿಂದ ಸೋಂಕು ಹರಡಿ, ಜೀವಕ್ಕೆ ಅಪಾಯವೂ ಉಂಟಾದೀತು.
4 / 8
ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಟ್ಯಾಟೂ ಆರ್ಟಿಸ್ಟ್ ತಾಜಾ ಸೂಜಿಯನ್ನು ಬಳಸುತ್ತಿದ್ದಾರಾ ಎಂಬುದನ್ನು ಗಮನಿಸಿ.
5 / 8
ಟ್ಯಾಟೂ ಹಾಕುವ ಕಲಾವಿದರು ಸರಿಯಾದ ಸಲಕರಣೆಗಳನ್ನು ಬಳಸುತ್ತಾರೆಯೇ ಎಂದು ಪರಿಶೀಲಿಸಿ.
6 / 8
ಟ್ಯಾಟೂ ಹಾಕುವಾಗ ಆರ್ಟಿಸ್ಟ್ ಗ್ಲೌಸ್ ಹಾಕಿಕೊಂಡಿದ್ದಾರಾ ಎಂಬುದನ್ನು ಗಮನಿಸಿ. ಒಂದುವೇಳೆ ಅವರು ಗ್ಲೌಸ್ ಹಾಕದಿದ್ದರೆ ನೀವೇ ಅವರನ್ನು ಎಚ್ಚರಿಸಿ.
7 / 8
ಟ್ಯಾಟೂ ಹಾಕುವ ಉಪಕರಣವನ್ನು ಚೆನ್ನಾಗಿ ಕ್ರಿಮಿನಾಶಕಗೊಳಿಸಲಾಗಿದೆಯೇ ಎಂದು ಕೇಳಿ ತಿಳಿದುಕೊಳ್ಳಿ.
8 / 8
ಟ್ಯಾಟೂ ಹಾಕಿಸಿಕೊಂಡ ನಂತರವೂ ನೀವು ಅನುಸರಿಸಬೇಕಾದ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಅದಕ್ಕೆ ಹಚ್ಚಬೇಕಾದ ಕ್ರೀಂ ಇತ್ಯಾದಿಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡು ಬನ್ನಿ. ಇಲ್ಲವಾದರೆ ಕೆಲವರಿಗೆ ಅಲರ್ಜಿ ಅಥವಾ ಇನ್ನಿತರ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಇರುತ್ತವೆ.