Tech Tips: ಗೂಗಲ್ ಮ್ಯಾಪ್ಗೆ ನಿಮ್ಮ ಮನೆ, ಹೊಸ ಜಾಗವನ್ನು ಸೇರಿಸುವುದು ಹೇಗೆ?: ಇಲ್ಲಿದೆ ಟ್ರಿಕ್
Google Maps Tricks: ಗೂಗಲ್ ಮ್ಯಾಪ್ನಲ್ಲಿ ನಿಮ್ಮೂರಿನ ಸ್ಥಳ, ರಸ್ತೆ, ನಿಮ್ಮ ಮನೆಯ ಮಾಹಿತಿಯನ್ನು ಸೇರಿಸಬಹುದು. ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ ಓಪನ್ ಮಾಡಿಕೊಳ್ಳಬೇಕು. ನಂತರ ಗೂಗಲ್ ಮ್ಯಾಪ್ ನಲ್ಲಿ ಹೊಸ ಜಾಗವನ್ನು ಸೇರಿಸುವ ಲೊಕೇಷನ್ ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ಹಂತದ ಸಂಪೂರ್ಣ ಮಾಹಿತಿ ಇಲ್ಲಿದೆ.
1 / 5
ಗೂಗಲ್ ನೀಡಿರುವ ಬಹುಮುಖ್ಯ ಸೇವೆಗಳಲ್ಲಿ ಮ್ಯಾಪ್ ಕೂಡ ಒಂದು. ನಮಗೆ ಪರಿಚಯ ಇರದ ಯಾವುದೇ ಸ್ಥಳಗಳಿಗೆ ಗೂಗಲ್ ಮ್ಯಾಪ್ ಅಡೆತಡೆ ಇಲ್ಲದೆ ಕರೆದೊಯ್ಯುತ್ತದೆ. ಹೊಸದಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಭೇಟಿ ನೀಡಲಿ ಅಥವಾ ಗುರುತು ಪರಿಚಯವಿಲ್ಲದ ಊರಾಗಲಿ, ಗೂಗಲ್ ಮ್ಯಾಪ್ ಇದ್ದರೆ ಯಾವ ಜಾಗಕ್ಕೆ ಬೇಕಾದರೂ ತಲುಪಬಹುದು.
2 / 5
ಹಾಗೆಯೆ ಗೂಗಲ್ ಮ್ಯಾಪ್ನಲ್ಲಿ ನಿಮ್ಮೂರಿನ ಸ್ಥಳ, ನಿಮ್ಮೂರಿನ ಹೆಸರು, ನಿಮ್ಮೂರಿನ ರಸ್ತೆ, ನಿಮ್ಮ ಮನೆಯ ಮಾಹಿತಿಯನ್ನು ಸಹ ಸೇರಿಸಬಹುದು. ಇದು ಹೇಗೆ ಎಂದು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಇದರ ಮೂಲಕ ನಮಗೆ ಗೊತ್ತಿಲ್ಲದೆ ಇರುವ ಸ್ಥಳದ ಬಗ್ಗೆ ಮತ್ತು ಅಲ್ಲಿರುವ ಸೌಲಭ್ಯ, ರಸ್ತೆ, ಸೌಕರ್ಯದ ಬಗ್ಗೆ ಗೂಗಲ್ ಮ್ಯಾಪ್ನಲ್ಲಿ ಆ್ಯಡ್ ಮಾಡಬಹುದು.
3 / 5
ಇದಕ್ಕಾಗಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ ಓಪನ್ ಮಾಡಿಕೊಳ್ಳಬೇಕು. ನಂತರ ಗೂಗಲ್ ಮ್ಯಾಪ್ ನಲ್ಲಿ ಹೊಸ ಜಾಗವನ್ನು ಸೇರಿಸುವ ಲೊಕೇಷನ್ ಆಯ್ಕೆ ಮಾಡಿಕೊಳ್ಳಬೇಕು. ಆ ಲೊಕೇಷನ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲೆ ಕೆಳಗಡೆ Add A missing place ಆಯ್ಕೆ ಕಾಣುತ್ತದೆ.
4 / 5
ಈಗ ನೀವು Add A missing place ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಆ ಜಾಗದ ಕುರಿತು ಮಾಹಿತಿ ತುಂಬಲು ಬಾಕ್ಸ್ ಇರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಬಟ್ ಒತ್ತಿದರೆ ಆಯಿತು. ಇದರಲ್ಲಿ ನೀವು ಕೆಟೆಗರಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ವೆಬ್ಸೈಟ್ ಇದ್ದರೆ ಸೇರಿಸಬಹುದು. ಫೋನ್ ನಂಬರ್, ಫೋಟೋ ಕೂಡ ಹಾಕಬಹುದು.
5 / 5
ಇದು ಅಪ್ಡೇಟ್ ಆಗಲು ಒಂದು ವಾರದಿಂದ 15 ದಿನ ಸಮಯ ತೆಗೆದುಕೊಳ್ಳುತ್ತದೆ. ಗೂಗಲ್ ನವರು ಸ್ಥಳವನ್ನು ಗೂಗಲ್ ಮ್ಯಾಪ್ ನಲ್ಲಿ ಸೇರಿಸಿದ ನಂತರ ಕನ್ಫರ್ಮ್ ಮೇಲ್ ಬರುತ್ತದೆ. ಆಗ ನೀವು ಸೇರಿಸಿದ ಸ್ಥಳ ಗೂಗಲ್ ಮ್ಯಾಪ್ ನಲ್ಲಿ ಸೇರ್ಪಡೆಯಾಗುತ್ತದೆ. ಈ ಮೂಲಕ ಗೂಗಲ್ ಮ್ಯಾಪ್ಗೆ ನಿಮ್ಮ ಮನೆ, ಹೊಸ ಜಾಗವನ್ನು ಸೇರಿಸಬಹುದು.
Published On - 3:16 pm, Fri, 8 March 24