Gadag News: ನಿರಂತರ ಮಳೆಗೆ ಹೂವಿನ ತೋಟಗಳು ಸಂಪೂರ್ಣ‌ ಹಾಳು; ಬಾಡಿದ ರೈತನ ಬದುಕು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 29, 2023 | 8:33 AM

ರಾಜ್ಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ರೈತರು ಹೈರಾಣಾಗಿದ್ದಾರೆ. ಅದರಂತೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಬೆಳೆದ ಹೂವುಗಳು ಮಳೆಗೆ ಹಾಳಾಗುತ್ತಿದೆ.

1 / 8
ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸಂಕಷ್ಟ ಬಂದೊದಗಿದೆ.

2 / 8
ಹೌದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹೂವುಗಳು ಮಳೆಗೆ ಹಾಳಾಗುತ್ತಿದೆ.

3 / 8
ನಾಗರ ಪಂಚಮಿ ಹಬ್ಬ, ಶ್ರಾವಣ ಮಾಸದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಹೂವು ಬೆಳೆಗಾರರು‌ ಸತತ ಮಳೆಯಿಂದ ಕಂಗಾಲಾಗಿದ್ದಾರೆ.

4 / 8
ನೂರಾರು ಎಕರೆಯಲ್ಲಿ ಬೆಳೆದ ಸೇವಂತಿ ಸೇರಿ ವಿವಿಧ ನಮೂನೆಯ‌ ಹೂವುಗಳು ನಿರಂತರ ಮಳೆಗೆ‌ ತೋಟದಲ್ಲೇ ಕೊಳೆಯುತ್ತಿರುವುದು ರೈತನಿಗೆ ಸಂಕಷ್ಟ ತಂದೊದಗಿದೆ.

5 / 8
ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬಾಂಬೆಗೆ ಪೂರೈಕೆ ಆಗುತ್ತಿದ್ದ ಹೂವುಗಳು ಇದೀಗ ಮಳೆಯಲ್ಲಿಯೇ ಕೊಳೆತು ಹೋಗುತ್ತಿದೆ. ಇದರಿಂದ ಎಕರೆಗೆ 1 ಲಕ್ಷದಿಂದ ಒಂದೂವರೆ ಲಕ್ಷ ಖರ್ಚು ಮಾಡಿದ ರೈತರ ಗೋಳಾಟ ಹೇಳತೀರದು.

6 / 8
ಈ ಬಾರಿ ಉತ್ತಮವಾಗಿ ಹೂವು ಬಂದಿದ್ದು, ರೈತ ಭರ್ಜರಿ ಲಾಭದ ಕನಸು ಕಂಡಿದ್ದರು. ಆದರೆ, ರೈತರ ಕನಸನ್ನು ಮಳೆರಾಯ ನುಚ್ಚುನೂರು ಮಾಡಿದ್ದಾನೆ.

7 / 8
ಇನ್ನು ಕಷ್ಟಪಟ್ಟು ಬೆಳೆದ ಹೂವುಗಳು ತೋಟದಲ್ಲೇ ಕೊಳೆಯುತ್ತಿರುವುದನ್ನ ನೋಡಿದ ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತನಿಗೆ ಯಾವಾಗಲಾದರೂ ಒಮ್ಮೆ ಲಾಭ ಬರುತ್ತದೆ. ಅದರಂತೆ ಈ ಬಾರಿ ಉತ್ತಮ ಬೆಳೆ ಬಂದಿದ್ದು, ಲಾಭದ ಕನಸಿನಲ್ಲಿದ್ದ ರೈತನಿಗೆ ಮಳೆಯಿಂದ ಸಿಡಿಲು ಬಡಿದಂತಾಗಿದೆ.

8 / 8
ಸರ್ಕಾರ ಹೂವು ಬೆಳೆಗಾರರ ನೆರವಿಗೆ ಧಾವಿಸಿ, ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲವಾದರೇ ರೈತರು ಬದುಕೋದು ಕಷ್ಟವಾಗಿದೆ ಎಂದು ಮನವಿ ಮಾಡಿದ್ದಾರೆ.