Skin Care: ಚರ್ಮದ ಕಾಂತಿ ಹೆಚ್ಚಿಸಲು ಈ ಆಹಾರಗಳು ಹೆಚ್ಚು ನೆರವಾಗಲಿದೆ

| Updated By: Pavitra Bhat Jigalemane

Updated on: Jan 28, 2022 | 3:19 PM

ಸುಂದರವಾದ ಚರ್ಮವನ್ನು ಪಡೆಯುವ ಹಂಬಲ ಎಲ್ಲರಿಗೂ ಇರುತ್ತದೆ. ಅದು ಉತ್ತಮ ಅಹಾರದಿಂದ ಮಾತ್ರ ಸಾಧ್ಯ. ಹೀಗಾಗಿ ಈ ಆಹಾರಗಳನ್ನು ಪ್ರಯತ್ನಿಸಿ, ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮಾಡಿಕೊಳ್ಳಬಹುದು.

1 / 10
ಅಂದವಾದ ಚರ್ಮ ಇರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಅದಕ್ಕೆ ತಕ್ಕಹಾಗೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು.  ಈ ಆಹಾರಗಳನ್ನು ನಿಮ್ಮ ಡಯೆಟ್​ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕಾಂತಿಯುತ ಚರ್ಮವನ್ನು ಪಡೆಯಬಹುದು.

2 / 10
ಅವಕಾಡೊ ಅಥವಾ ಬಟರ್​​ ಫ್ರುಟ್​​ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ ಇ ಮತ್ತು ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

3 / 10
ವಾಲ್ನಟ್​ ಅಥವಾ ಅಖ್ರೋಟ್​  ಚರ್ಮದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್​ ಮತ್ತು ವಿಟಮಿನ್​ ಬಿ ಅಂಶಗಳು ಸುಕ್ಕುಗಟ್ಟಿದ, ಕಳೆಗುಂದಿದ ತ್ವಚೆಯನ್ನು ನಿವಾರಿಸುತ್ತದೆ.

4 / 10
ಟೊಮಾಟೋದಲ್ಲಿರುವ ವಿಟಮಿನ್​ ಎ,ಸಿ,ಆ್ಯಂಟಿಆಕ್ಸಿಡೆಂಟ್​ಗಳು ಮೊಡವೆಗಳನ್ನು ನಿವಾರಿಸಿ ಕ್ಲೀನ್​ ಸ್ಕಿನ್​ ನೀಡುತ್ತದೆ.

5 / 10
ಕಲ್ಲಂಗಡಿ ಹಣ್ಣು ಮುಖದ ಮೇಲಿನ ಕಲೆಯನ್ನು ನಿವಾರಿಸಲು ಸಹಾಯವಾಗಿದೆ.  ಹೆಚ್ಚು ನೀರನಂಶವುಳ್ಳ ಈ ಹಣ್ಣಿನ ಸೇವನೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸುತ್ತದೆ.

6 / 10
ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್​ ಬಿ2 ಮತ್ತು ವಿಟಮಿನ್​ ಇ ಅಂಶ ಗ್ರೀನ್​​ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್​ ಟೀ ಮಹತ್ವದ ಪಾತ್ರವಹಿಸುತ್ತದೆ.

7 / 10
ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್​, ಫೈಬರ್​, ನ್ಯೂಟ್ರಿಯಂಟ್ಸ್​​ಗಳು ಗುಣಗಳನ್ನು ಹೊಂದಿರುವ ಬೆರ್ರಿಹಣ್ಣುಗಳನ್ನು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

8 / 10
ಚಾಕಲೇಟ್​ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾಕಲೇಟ್​ ಚರ್ಮದ ಆರೋಗ್ಯಕ್ಕೂ ಒಳಿತು. ಹೌದು, ಸನ್​ಬರ್ನ್​, ಸ್ಕಿನ್​ ಟಾನಿಂಗ್​ಅನ್ನು ಹೋಗಲಾಡಿಸಲು ಡಾರ್ಕ್​ ಚಾಕಲೇಟ್​ ಸಹಕಾರಿ.

9 / 10
ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳಿತು. ಒಣ ಚರ್ಮ, ಸುಕ್ಕು ಚರ್ಮವನ್ನು  ದಾಳಿಂಬೆ ಹಣ್ಣು ನಿವಾರಿಸುತ್ತದೆ.

10 / 10
ಅಗಸೆ ಬೀಜದಲ್ಲಿ ಸಮೃದ್ಧವಾದ ಕೊಬ್ಬಿನಾಮ್ಲಗಳು ಇರುವುದರಿಂದ ಒಣ ಚರ್ಮವನ್ನು ನಿವಾರಿಸುತ್ತದೆ. ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ಚರ್ಮವನ್ನು ಕಾಂತಿಯುತಗೊಳಿಸುತ್ತವೆ.