
ಸರ್ವ ಕಾಯಿಲೆಗೆ ಯೋಗ ಮದ್ದಿನಂತೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದು ಕನಿಷ್ಟ ಒಂದು ಗಂಟೆ ಯೋಗ ಮಾಡಿ. ಅಥವಾ ವ್ಯಾಯಾಮ ಮಾಡಿ. ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.

ವ್ಯಾಯಾಮ ಮುಗಿದ ಬಳಿಕ ಒಂದು ದೊಡ್ಡ ಲೋಟಕ್ಕೆ ಬಿಸಿ ನೀರು ಹಾಕಿ. ಅದಕ್ಕೆ ಅರ್ಧ ಭಾಗದಷ್ಟು ನಿಂಬೆರಸ ಹಾಕಿ ಕುಡಿಯಿರಿ.

ದೇಹಕ್ಕೆ 8 ಗಂಟೆ ನಿದ್ರೆ ಅನಿವಾರ್ಯ. ಹೀಗಾಗಿ ರಾತ್ರಿ ಬೇಗ ಮಲಗಿ. 8 ಗಂಟೆ ನಿದ್ರೆ ಮಾಡಿ.

ಉಪ್ಪು ಶರೀರದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ಹೀಗಾಗಿ ಊಟದಲ್ಲಿ ಉಪ್ಪಿನ ಅಂಶ ಕಡಿಮೆ ಇರಲಿ.

ದಿನಕ್ಕೆ ಎರಡರಿಂದ ಮೂರು ಕಿಲೋಮೀಟರ್ ನಡೆಯಿರಿ. ಇದರಿಂದ ದೇಹದ ತೂಕ ಕಡಿಮೆಯಾಗುವುದು.

ಬೆಳಿಗ್ಗೆ ಉಪಹಾರ ತಪ್ಪಿಸಬೇಡಿ. ಮಧ್ಯಾಹ್ನದ ಊಟ ಸ್ವಲ್ಪವಾಗಿರಲಿ. ಜೊತೆಗೆ ರಾತ್ರಿ ಹಣ್ಣು- ತರಕಾರಿ ತಿನ್ನಿ. ಜಂಕ್ ಫುಡ್ ತಿನ್ನಬಾರದು.