ವಾಯು ಮಾಲಿನ್ಯದಿಂದ ಪ್ರತೀವರ್ಷ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಲೇ ಇದೆ. ವಾಹನಗಳ ಓಡಾಟ, ಧೂಳು ತುಂಬಿದ ಪ್ರದೇಶಗಳಲ್ಲಿ ಇರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಅತಿಯಾಗುತ್ತಿವೆ. ಇದನ್ನು ನಿಯಂತ್ರಿಸಲು ನೀವು ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲಿದೆ ಕೆಲವು ಟಿಪ್ಸ್ಗಳು
ಆದಷ್ಟು ಮನೆಯ ಒಳಗೆ ಇರಿ. ಮನೆಯಿಂದ ಹೊರಹೊರಡುವಾಗ ಬಟ್ಟೆಯ ಮಾಸ್ಕ್ ಬದಲಾಗಿ N95 ಮಾಸ್ಕ್ಅನ್ನೇ ಧರಿಸಿ.
ಹೊರಗಡೆ ಹೋಗಿ ವ್ಯಾಯಾಮ ಮಾಡುವುದನ್ನು ಆದಷ್ಟು ನಿಲ್ಲಿಸಿ, ಹೊರಗಿನ ವಾತಾವರಣದಲ್ಲಿ ಧೂಳು, ಹೊಗೆ ತುಂಬಿಕೊಂಡ ಸಂದರ್ಭಗಳಲ್ಲಿ ಮನೆಯಲ್ಲಿಯೇ ವ್ಯಾಯಾಮ ಮಾಡಿ. ಇದರಿಂದ ಆರೋಗಯಕ್ಕೂ ಒಳಿತು.
ಧೂಮಪಾನದ ಅಭ್ಯಾಸವಿದ್ದರೆ ಅದನ್ನು ನಿರ್ಬಂಧಿಸಿ. ಇದರಿಂದ ವಾತಾವರಣ ಅಷ್ಟೇ ಅಲ್ಲ ಆರೋಗ್ಯವೂ ಕೆಡುತ್ತದೆ.
ಮನೆಯಲ್ಲಿ ಏರ್ ಪ್ಯೂರಿಪೈರ್ಗಳನ್ನು ಬಳಸಿ. ಇದರಿಂದ ಹೊರಗಡೆಯಿಂದ ಬರುವ ಧೂಳು ತುಂಬಿದ ಗಾಳಿ ಪಿಲ್ಟರ್ ಆಗುವ ಮೂಲಕ ಶುದ್ಧ ಗಾಳಿ ಸಿಗುತ್ತದೆ.
ನೀರನ್ನು ಹೆಚ್ಚು ಸೇವಿಸಿ, ಜತೆಗೆ ಹಣ್ಣು ತರಕಾರಿಗಳನ್ನು ತಿಂದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಮನೆಯ ಬಳಿ ಹೆಚ್ಚು ಗಿಡಗಳನ್ನು ಬೆಳೆಸಿ. ತುಳಸಿ, ಆಲೋವೇರಾದಂತಹ ಗಿಡಗಳು ನಿಮಗೆ ಹೆಚ್ಚು ಶುದ್ಧವಾದ ಗಾಳಿಯನ್ನು ನೀಡುತ್ತದೆ.