

ತುಳಸಿ ಗಿಡದ ಆಸುಪಾಸು ಚಪ್ಪಲಿಗಳನ್ನು ಇಡಬಾರದು. ಹೀಗೆ ಚಪ್ಪಲಿ ಇರಿಸಿದರೆ ತುಳಸಿಗೆ ಅವ,ಮಾನ ಮಾಡಿದಷ್ಟೇ ಅಲ್ಲ.. ತಾಯಿ ಲಕ್ಷ್ಮೀಯನ್ನು ಕೂಡ ಅವಮಾನ ಮಾಡದಂತಾಗುತ್ತದೆ. ತುಳಸಿ ಸಸ್ಯದ ಸುತ್ತಮುತ್ತಲ ಪರಿಸರವನ್ನು ಕಡ್ಡಾಯವಾಗಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ತುಳಸಿ ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರೀತಿಕರ. ಆದ್ದರಿಂದ ತುಳಸಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ. ತುಳಸಿ ಹತ್ತಿರ ಎಂದಿಗೂ ಪೊರಕೆ ಇಡಬಾರದು. ಪೊರಕೆಯಿಟ್ಟರೆ ವಿಷ್ಣುಮೂರ್ತಿ ಮತ್ತು ಲಕ್ಷ್ಮೀ ದೇವಿ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

ತುಳಸಿ ಮುಂತಾದ ಮಹಾಮಹಿಮಾನ್ವಿತ ಸಸ್ಯದ ಸಮೀಪ ಮುಳ್ಳುಗಳು ಇರುವ ಸಸ್ಯಗಳನ್ನು ಇಡಬಾರದು. ಇದು ತುಂಬಾ ಅಶುಭ. ಈ ಮುಳ್ಳು ಸಸ್ಯಗಳ ಪರಿಸರದಲ್ಲಿ ತುಳಸಿ ಗಿಡವನ್ನು ಇರಿಸಿದರೆ ಅದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ತುಳಸಿ ಸಸ್ಯ ಪರಿಸರದಲ್ಲಿ ಕಸದ ಬುಟ್ಟಿಯನ್ನು ಸಹ ಇರಬಾರದು. ಹೀಗೆ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೇರಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.