
ಶರತ್ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

ಮಂಗಳೂರಿನ ಎಸ್ಡಿಆರ್ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.