Kannada News Photo gallery US troops describe the Kabul Mayhem triggered by Taliban takeover and the condition of Afghan children through these photos
Afghanistan Photos: ಅಫ್ಘಾನಿಸ್ತಾನದಲ್ಲಿ ಹೆತ್ತವರಿಗೂ ಭಾರವಾದ ಮಕ್ಕಳು; ಬಂದೂಕಿನ ಸದ್ದಿನಲ್ಲಿ ಮಕ್ಕಳ ಆಕ್ರಂದನ ಕೇಳುವವರಾರು?
TV9 Web | Updated By: Skanda
Updated on:
Aug 21, 2021 | 12:15 PM
ತಾಲಿಬಾನ್ ದಾಳಿಯಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಈಗ ಖುಷಿ, ನಗು, ಸಂಭ್ರಮ ಇವೆಲ್ಲವೂ ದುಬಾರಿಯಾಗಿದೆ. ಈಗಿನ್ನೂ ಲೋಕ ನೋಡುತ್ತಿರುವ ಮಕ್ಕಳ ಕಣ್ಣಲ್ಲಿ ಬರೀ ಭಯವೇ ಆವರಿಸಿಕೊಂಡಿದ್ದು ಅವರ ಭವಿಷ್ಯ ಅತಂತ್ರವಾಗಿದೆ. ಅದು ಅಮೆರಿಕಾ ಸೇನೆಯ ಈ ಚಿತ್ರಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ.
1 / 13
ತಾಲಿಬಾನ್ ದಾಳಿಯಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಈಗ ಖುಷಿ, ನಗು, ಸಂಭ್ರಮ ಇವೆಲ್ಲವೂ ದುಬಾರಿಯಾಗಿದೆ. ಈಗಿನ್ನೂ ಲೋಕ ನೋಡುತ್ತಿರುವ ಮಕ್ಕಳ ಕಣ್ಣಲ್ಲಿ ಬರೀ ಭಯವೇ ಆವರಿಸಿಕೊಂಡಿದ್ದು ಅವರ ಭವಿಷ್ಯ ಅತಂತ್ರವಾಗಿದೆ. ಅದು ಅಮೆರಿಕಾ ಸೇನೆಯ ಈ ಚಿತ್ರಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ.
2 / 13
ಅಫ್ಘಾನಿಸ್ತಾನ
3 / 13
ಪಾಲಕರಿಲ್ಲದ ಪುಟ್ಟ ಮಕ್ಕಳನ್ನು ಸ್ವೀಕರಿಸುವುದಿಲ್ಲ ಎಂದು ಯೋಧರು ವಾಪಸ್ ಕೊಟ್ಟರೆ, ಅಲ್ಲಿನ ಮುಳ್ಳುತಂತಿ ಬೇಲಿಯಿಂದಾಚೆಗೆ ಮಕ್ಕಳನ್ನು ಕಳಿಸಲು ಯತ್ನಿಸುತ್ತಿದ್ದಾರೆ. ಕೆಲವರು ಎಸೆಯುತ್ತಿದ್ದಾರೆ. ಈ ಪ್ರಯತ್ನದಲ್ಲಿ ಎಷ್ಟೋ ಮಕ್ಕಳು ಮುಳ್ಳುತಂತಿಗೆ ಸಿಲುಕಿ, ಚರ್ಮ ಹರಿದುಕೊಂಡಿದ್ದಾರೆ. ಅಳು ಕೇಳಲಾಗದ ಬ್ರಿಟಿಷ್ ಯೋಧರು ಮಕ್ಕಳನ್ನು ಸಂತೈಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದಿದ್ದಾರೆ.
4 / 13
ವಿದೇಶಗಳಿಗೆ ತೆರಳಿ ಆಶ್ರಯ ಪಡೆದುಕೊಳ್ಳುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯರು ವಿಮಾನ ಹತ್ತಲು ಅವಕಾಶ ಸಿಗುವುದಿಲ್ಲ ಎಂದು ಖಚಿತವಾದಾಗ ಮಕ್ಕಳನ್ನು ಬ್ರಿಟಿಷ್ ಮತ್ತು ಅಮೆರಿಕ ಯೋಧರತ್ತ ಎಸೆದು ವಾಪಸ್ ಹೋಗುತ್ತಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ರಕ್ಷಣಾ ಇಲಾಖೆಯ ಉನ್ನತ ವಲಯದ ಮನಕಲಕುವಂತೆ ಮಾಡಿದೆ.
5 / 13
ಈಗ ಇಂಥ ಮಕ್ಕಳನ್ನು ಬ್ರಿಟನ್ಗೆ ಕರೆದೊಯ್ಯುವುದು ಹೇಗೆಂಬ ಪ್ರಶ್ನೆ ಅಲ್ಲಿನ ಆಡಳಿತವನ್ನು ಬಾಧಿಸುತ್ತಿದೆ. ರಾಯಿಟರ್ಸ್ ಸುದ್ದಿಸಂಸ್ಥೆಯು ಬಿಡುಗಡೆ ಮಾಡಿದ್ದ ವಿಡಿಯೊ ತುಣುಕಿನಲ್ಲಿ ಅಫ್ಘಾನ್ ಕುಟುಂಬವೊಂದರ ದಾಖಲೆಗಳನ್ನು ಪರಿಶೀಲಿಸುವ ಬ್ರಿಟಿಷ್ ಯೋಧರು, ಆ ಕುಟುಂಬದ ಮಕ್ಕಳನ್ನು ಎತ್ತಿಕೊಂಡು ವಿಮಾನ ನಿಲ್ದಾಣ ಪ್ರವೇಶಿಸಲು ಅವಕಾಶ ಕೊಡುತ್ತಾರೆ. ಆ ಮಗುವಿನ ಪರಿಸ್ಥಿತಿ ಮುಂದೆ ಏನಾಯ್ತು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.
6 / 13
ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್ನ ರಕ್ಷಣಾ ವಿಭಾಗದ ಮುಖ್ಯಸ್ಥ ಬೆನ್ ವಾಲೆಸ್, ‘ಈ ಮಗುವಿನ ಪೋಷಕರಿಗೆ ಬ್ರಿಟನ್ನಲ್ಲಿ ನೆಲೆ ಕಲ್ಪಿಸಲು ಅಫ್ಘಾನಿಸ್ತಾನದಲ್ಲಿರುವ ಬ್ರಿಟನ್ ಅಧಿಕಾರಿಗಳು ಒಪ್ಪಿಕೊಂಡಿರಬೇಕು. ಹೀಗಾಗಿಯೇ ಆ ಮಗುವನ್ನು ನಮ್ಮ ಸೈನಿಕರು ಸ್ವೀಕರಿಸಿರಬಹುದು. ಪೋಷಕರಿಲ್ಲದ ಮಕ್ಕಳನ್ನು ಬ್ರಿಟನ್ಗೆ ಕರೆತಂದು ಸಾಕಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
7 / 13
ಅಫ್ಘಾನಿಸ್ತಾನದ ಸಾವಿರಾರು ಜನರು ದೇಶಬಿಟ್ಟು ಹೋಗಲು ಹಾತೊರೆಯುತ್ತಿದ್ದಾರೆ. ಭದ್ರತೆಗೆ ನಿಯೋಜನೆಗೊಂಡಿರುವ ಸೈನಿಕರು ಪರಿಸ್ಥಿತಿ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ನಿಶ್ಯಸ್ತ್ರ ಜನರ ಕಣ್ಣೀರು ಸೈನಿಕರಿಗೆ ತುಂಬಾ ಕಷ್ಟದ ವಿಚಾರ ಎಂದು ಬ್ರಿಟನ್ನ ಮತ್ತೋರ್ವ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.
8 / 13
ಪೋಷಕರಿಂದ ದೂರಾಗಿರುವ ಮಕ್ಕಳನ್ನು ರಕ್ಷಿಸುತ್ತಿರುವ ಸೈನಿಕರು ಹಸುಗೂಸುಗಳನ್ನು ಸಮಾಧಾನಿಸುತ್ತಿರುವ ದೃಶ್ಯ ಮನಕಲಕುವಂತಿದೆ.
9 / 13
ಆಸ್ಪತ್ರೆಯಲ್ಲಿ ಈಗಷ್ಟೇ ಜನಿಸಿದ ಶಿಶುಗಳ ಭವಿಷ್ಯ ಕೂಡಾ ಅಭದ್ರತೆಯಲ್ಲಿದ್ದು ಬಾಣಂತಿ ಹಾಗೂ ನವಜಾತ ಶಿಶುಗಳನ್ನು ನೋಡಿಕೊಳ್ಳುವುದೇ ಸವಾಲಾಗಿದೆ.
10 / 13
ನಿರಾಶ್ರಿತ ಬಾಲಕನೊಬ್ಬ ಆಸೆಗಣ್ಣುಗಳಿಂದ ನೋಡುತ್ತಿರುವ ಪರಿ
11 / 13
ಎಳೆ ಮಗುವನ್ನು ಸಮಾಧಾನಿಸುತ್ತಿರುವ ಸೈನಿಕರು
12 / 13
ಹಸುಗೂಸನ್ನು ಎತ್ತಿ ಆಡಿಸುತ್ತಿರುವ ಸಮವಸ್ತ್ರಧಾರಿ ಸೈನಿಕರು
13 / 13
ಸೈನಿಕರ ಕೈಯಲ್ಲಿ ಚಿಕ್ಕಮಗು
Published On - 12:13 pm, Sat, 21 August 21