ಅಡುಗೆ ಮಾಡುವಾಗ ಎಣ್ಣೆಯ ಆಯ್ಕೆ ಸರಿಯಾಗಿರಲಿ
TV9 Web | Updated By: Pavitra Bhat Jigalemane
Updated on:
Feb 06, 2022 | 6:03 PM
ಪ್ರತಿನಿತ್ಯ ಅಡುಗೆ ಮಾಡಲು ಎಣ್ಣೆ ಅತಿ ಮುಖ್ಯ ಪದಾರ್ಥವಾಗಿದೆ. ಹೀಗಾಗಿ ಆರೋಗ್ಯದೆಡೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ಅಡುಗೆ ಎಣ್ಣೆಯ ಆಯ್ಕೆ ಸರಿಯಾಗಿರಬೇಕು. ಹೀಗಾಗಿ ಯಾವ ಎಣ್ಣೆ ಅಡುಗೆಗೆ, ಆರೋಗ್ಯಕ್ಕೆ ಉತ್ತಮ ಎನ್ನುವ ಮಾಹಿತಿ ಇಲ್ಲಿದೆ.
1 / 5
ಒಮೆಗಾ 3 ಅಂಶಗಳಿರುವ ಎಳ್ಳೆಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೂ ಉತ್ತಮ. ಕಡಿಮೆ ಫ್ಯಾಟ್ ಇರುವ ಎಳ್ಳೆಣ್ಣೆ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
2 / 5
ದೇಹಕ್ಕೆ ಶಕ್ತಿ ನೀಡುವ ತುಪ್ಪ ನಿಮ್ಮ ಮೂಳೆಗಳನ್ನೂ ಬಲಗೊಳಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲೂ ಕುಡ ತುಪ್ಪ ಸಹಾಯಕವಾಗಿದೆ.
3 / 5
ಕೊಬ್ಬರಿ ಎಣ್ಣೆ ಎಲ್ಲ ರೀತಿಯಲ್ಲಿಯೂ ದೇಹಕ್ಕೆ ಒಳ್ಳೆಯದು. ಬಾಹ್ಯ ಸೌಂದರ್ಯಕ್ಕೂ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ. ಆಂತರಿಕವಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳಲೂ ಕೂಡ ಕೊಬ್ಬರಿ ಎಣ್ಣೆ ಒಳ್ಳೆಯದು. ಹೀಗಾಗಿ ಪ್ರತಿದಿನ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯ ಬಳಕೆಯಿರಲಿ.
4 / 5
ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಅಗಸೇ ಬೀಜಗಳು ಕೂದಲು ಮತ್ತು ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.
5 / 5
ಅಕ್ರೂಡ ಅಥವಾ ವಾಲ್ನಟ್ ಎಣ್ಣೆಯನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು, ಒಮೆಗಾ 3 ಅಂಶಗಳು ದೇಹವನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ.