Photo Gallery: ಸಕುಟುಂಬ ಸಮೇತರಾಗಿ ತುಂಗಭದ್ರಾ ಜಲಾಶಯ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು; ಇಲ್ಲಿವೆ ಚಿತ್ರಗಳು
TV9 Web | Updated By: guruganesh bhat
Updated on:
Aug 20, 2021 | 8:30 PM
ಬಳ್ಳಾರಿಯ ತುಂಗಭದ್ರಾ ಆಣೆಕಟ್ಟು ಕನ್ನಡ ನಾಡಿನ ಸಾವಿರಾರು ರೈತರ ಕೃಷಿಭೂಮಿಗೆ ನೀರು ಹರಿಸುವ ತಾಯಿ. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಇಂದು ವಿಶೇಷ ಅತಿಥಿಯೋರ್ವರ ಆಗಮನವಾಗಿತ್ತು.
1 / 6
ಬಳ್ಳಾರಿಯ ತುಂಗಭದ್ರಾ ಆಣೆಕಟ್ಟು ಕನ್ನಡ ನಾಡಿನ ಸಾವಿರಾರು ರೈತರ ಕೃಷಿಭೂಮಿಗೆ ನೀರು ಹರಿಸುವ ತಾಯಿ. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಇಂದು ವಿಶೇಷ ಅತಿಥಿಯೋರ್ವರ ಆಗಮನವಾಗಿತ್ತು.
2 / 6
ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕುಟುಂಬ ಸಮೇತರಾಗಿ ತುಂಗಭದ್ರಾ ಆಣೆಕಟ್ಟಿಗೆ ಭೇಟಿ ಕೊಟ್ಟು ವಿಹಂಗಮ ನೋಟವನ್ನು ಕಣ್ತುಂಬಿಸಿಕೊಂಡರು.
3 / 6
ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆಗಮನದಿಂದ ಸ್ಥಳಿಯರ ಮತ್ತು ತುಂಗಭದ್ರಾ ಜಲಾಶಯದ ಅಧಿಕಾರಿಗಳ ಮನಸ್ಸು ಸಂತಸಗೊಂಡಿತ್ತು.
4 / 6
ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯವು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ರೈತರ ಜೀವನಾಡಿಯಾಗಿದೆ. ಈ ಭಾಗಗಳ ರೈತರು ಕೃಷಿಗೆ ಪೂರಕವಾಗಿದೆ ಎಂದು ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
5 / 6
ಜಲಾಶಯ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ‘ರೈತನ ಮಗನಾಗಿ ಜಲಾಶಯ ವೀಕ್ಷಿಸಿದ್ದು ಸಂತಸ ತಂದಿದೆ. ಈ ಜಲಾಶಯ ರೈತರ ಕೃಷಿಗೆ ತುಂಬಾ ಅನುಕೂಲವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ಭರ್ತಿಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
6 / 6
ಅವರು ತುಂಗಭದ್ರಾ ಜಲಾಶಯಕ್ಕೆ ತಮ್ಮ ಕುಟುಂಬ ಸಮೇತವಾಗಿ ಆಗಮಿಸಿದ್ದರು. ದೇಶದ ಉಪರಾಷ್ಟ್ರಪತಿ ಆಗಮಿಸುತ್ತಿರುವ ಕಾರಣ ತುಂಗಭದ್ರಾ ಜಲಾಶಯದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಅವರ ಕುಟುಂಬ ಜಲಾಶಯ ವೀಕ್ಷಿಸಿ ಸಂತಸಪಟ್ಟಿತು.
Published On - 8:23 pm, Fri, 20 August 21