ಸಿಂಹ ರಾಶಿಯನ್ನು ಇಡೀ ರಾಶಿಚಕ್ರದ ಪೈಕಿಯೇ ಅತ್ಯಂತ ಜನಪ್ರಿಯ ಎಂದು ಪರಿಗಣಿಸಲಾಗಿದೆ. ಇವರು ಸ್ನೇಹಪರರಾಗಿರುತ್ತಾರೆ. ಯಾರನ್ನೂ ಕಳೆದುಕೊಳ್ಳಲು ಇಷ್ಟಪಡದ ಜನರಾದ ಇವರು, ತಮ್ಮ ಸುತ್ತಲೂ ಸದಾ ಜನರು ಇರಲು ಬಯಸುತ್ತಾರೆ. ಅಷ್ಟೇ ಅಲ್ಲ, ಸಿಂಹ ರಾಶಿಯವರ ಜತೆಗಿದ್ದಾಗ ಪಾಸಿಟಿವ್ ಮತ್ತು ಪಾಪ್ಯುಲರ್ ಆದ ಅನುಭವವನ್ನು ಇತರರಿಗೂ ನೀಡುತ್ತಾರೆ. ಸಿಂಹ ರಾಶಿಯವರು ಎಲ್ಲೇ ಇದ್ದರೂ ಜನಪ್ರಿಯರು ಎಂಬ ಪಟ್ಟಿಯಲ್ಲಿರುತ್ತಾರೆ. ಶಾಲೆ, ಕಾಲೇಜು, ಕೆಲಸದ ಸ್ಥಳಗಳು ಇತ್ಯಾದಿ ಹೀಗೆ ಯಾವುದೇ ಹೇಳಿ, ಇವರು ಜನಪ್ರಿಯರು. ತುಂಬಾ ಕರುಣಾಮಯಿಯಾದ ಸಿಂಹ ರಾಶಿಯವರು, ಇತರರು ನೀಡುವ ದಯೆ- ಪ್ರೀತಿಯನ್ನು ಹಲವು ಪಟ್ಟು ಹಿಂತಿರುಗಿಸುತ್ತಾರೆ.