Updated on:Aug 20, 2021 | 8:33 PM
ಖಜಾನೆ ಬರಿದಾದ ದೇಶವೊಂದನ್ನು ಇಟ್ಟುಕೊಂಡು ಏನು ಆಡಳಿತ ಮಾಡುವುದಕ್ಕೆ ಸಾಧ್ಯ? ಸರಿ, ನೆರೆಹೊರೆಯವರ ಸಹಕಾರ ಇದೆಯಾ? ಆಡಳಿತಗಾರರ ಸಲುವಾಗಿ ಮನಸಾರೆ ತ್ಯಾಗ ಮಾಡುವುದಕ್ಕಾದರೂ ಅಲ್ಲಿನ ಪ್ರಜೆಗಳು ಸಿದ್ಧರಿದ್ದಾರಾ? ಈ ಪೈಕಿ ಯಾವುದಕ್ಕೂ ಸಕಾರಾತ್ಮಕ ಉತ್ತರ ಸಿಗಲ್ಲ. ಈಗ ಹೇಳಲು ಹೊರಟಿರುವುದು ಆರ್ಥಿಕ ಪತನದ ಅಂಚಿನಲ್ಲಿ ಭರವಸೆ ಕೂಡ ದಿವಾಳಿಯಾದ ಅಫ್ಘಾನಿಸ್ತಾನದ ಬಗ್ಗೆ. 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಸೇನೆಯನ್ನು ಬಿಟ್ಟಿದ್ದ ಅಮೆರಿಕಾ, ಅಲ್ಲಿಂದ ಹೊರಗೆ ಕಾಲಿಡುತ್ತಾ, ತಾಲಿಬಾನ್ಗಳು ದೇಶದ ಆಡಳಿತದ ಚುಕ್ಕಾಣಿ ಕೈಗೆತ್ತಿಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಏನು ಗೊತ್ತಾ? ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದು ಅಂತಾಗಿದೆ. ಇನ್ನು ವಿಶ್ವದ ಇತರ ದೇಶಗಳು ಸಹ ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ಹಾಗೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿವೆ.
ಈಗ ಅಧಿಕಾರ ಹಿಡಿದ ತಾಲಿಬಾನ್ ಏನೋ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸುಧಾರಿಸುವಂತೆ ಮಾಡುತ್ತೇವೆ ಅಂದರೂ ಅದಕ್ಕೆ ವಿದೇಶೀ ಹಣದ ಮೇಲೆ ಅವಲಂಬಿಸಬೇಕು. ಜಾಗತಿಕ ದಾನಿಗಳು ಈಗಾಗಲೇ ಕೈ ಅನ್ನು ಅಡ್ಡಡ್ಡ ಅಲ್ಲಾಡಿಸಿ ಆಗಿದೆ. ಇನ್ನು ಬಿಕ್ಕಟ್ಟಿನ ಕಾಲದಲ್ಲಿ ದೇಶಗಳ ನೆರವಿಗೆ ಬರುವ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಬುಧವಾರದಂದು ಅಫ್ಘಾನಿಸ್ತಾನದ ಹಣಕಾಸಿನ ನೆರವನ್ನು ತಡೆಹಿಡಿದಿದೆ. ಕಾಬೂಲಿನಲ್ಲಿ ಈಗ ನಾಯಕತ್ವದ ಪ್ರಶ್ನೆ ಎದುರಾಗಿದೆ. ಕೊರೊನಾದಿಂದಲೇ ಆಫ್ಘನ್ ಆರ್ಥಿಕತೆ ಅಪ್ಪಚ್ಚಿಯಾಗಿದೆ. ಈಗ ದೇಶದ ಮೇಲೆ ತಾಲಿಬಾನ್ಗಳ ಹಿಡಿತ ಬಂದ ಮೇಲಂತೂ ಹಪ್ಪಳದ ಮೇಲೆ ಲಾರಿ ಹತ್ತಿದಂತಾಗಿದೆ. ಅಫ್ಘಾನಿಸ್ತಾನದ ಬಳಿ ಇರುವ ಹಣವನ್ನು ಹೊರತುಪಡಿಸಿ, ಡ್ರಾ ಮಾಡಬಹುದು ಎಂಬಂಥ ಇನ್ನಷ್ಟು ಹಣ ಇರಬಹುದು. ದೇಶಕ್ಕೆ ಸೇರಿದ ಬಹುತೇಕ ನಗದು ಮತ್ತು ಚಿನ್ನದ ಸಂಗ್ರಹಕ್ಕೆ ಕೈ ಹಾಕಲು ತಾಲಿಬಾನ್ಗೆ ಸಾಧ್ಯವಿಲ್ಲ.
US President Joe Biden warns Taliban and says America will not let terrorists to stay in Afghanistan
SDR Allocation Of 17.86 Billion USD Made To India By IMF Said By Reserve Bank Of India
ತಾಲಿಬಾನ್ಗಳು ಕಾಬೂಲ್ಗೆ ಲಗ್ಗೆ ಹಾಕುತ್ತಿದ್ದಂತೆ ಅವರಿಗೆ ಒಂದಿಷ್ಟು ಮಾನ್ಯತೆ ಅಂತ ಸಿಕ್ಕಿದ್ದು ರಷ್ಯಾ, ಚೀನಾ, ಟರ್ಕಿ ಹಾಗೂ ಪಾಕಿಸ್ತಾನದಂಥ ಬೆರೆಳೆಣಿಕೆ ದೇಶಗಳಿಂದ. ಅಮೆರಿಕ ಹಾದಿಯಲ್ಲಿ ಉಳಿದ ರಾಷ್ಟ್ರಗಳು ಸಹ ಸಾಗಿ, ತಾಲಿಬಾನ್ಗಳನ್ನು ಛೀದರಿಸಿ ದೂರ ಇಟ್ಟಿವೆ. ಜರ್ಮನಿಯಿಂದ 430 ಮಿಲಿಯನ್ ಯುರೋ ಅನುದಾನ ಅಫ್ಘಾನಿಸ್ತಾನಕ್ಕೆ ಬರಬೇಕಾಗಿತ್ತು. ಅದರಲ್ಲಿ 250 ಮಿಲಿಯನ್ ಯುರೋ ಅಭಿವೃದ್ಧಿಗೆ ಅಂತಲೇ ಕೊಡುವುದರಲ್ಲಿತ್ತು. ಅದೀಗ ಅಮಾನತಾಗಿದೆ. ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾದ ಚೀನಾದಿಂದ ಹಣ ಬರಬಹುದಾ ಎಂಬುದು ಇನ್ನೂ ಗೊತ್ತಾಗಿಲ್ಲ.
ಈಗಾಗಲೇ ಇರುವ ವಾಹನ, ಪರ್ಸನಲ್ ಅಥವಾ ಹೋಮ್ಲೋನ್ ಟಾಪ್-ಅಪ್ನಿಂದ ಅಸಲಿನ ಮೊತ್ತವು ಹೆಚ್ಚಾಗುತ್ತದೆ. ಹೋಮ್ ಲೋನ್ ಗ್ರಾಹಕರು ಬಾಕಿ ಇರುವ ಸಾಲದ ಮೊತ್ತದ ಆಧಾರದಲ್ಲಿ ಮರುಪಾವತಿ ಮೂಲಕ ಪಡೆಯುತ್ತಾರೆ. ಆಸ್ತಿಯ ಬೆಲೆ ಏರಿಕೆಯಾದರೂ ಟಾಪ್ ಅಪ್ ಲೋನ್ ಪ್ರಮಾಣವನ್ನು ಹೆಚ್ಚಿಸಲು ಆಗಲ್ಲ. ಇದರ ಹೊರತಾಗಿ ಗ್ರಾಹಕರು ಯಾವುದೇ ಹೊಸ ಗ್ರಾಹಕರಿಗೆ ಟಾಙ್ ಅಪ್ ವ್ಯವಸ್ಥೆ ಸಿಗುವುದಿಲ್ಲ.
ಅಫ್ಘಾನಿಸ್ತಾನದ ಕರೆನ್ಸಿ ಅಮೆರಿಕದ ಡಾಲರ್ ವಿರುದ್ಧ 86 ಅಫ್ಘನಿ ತಲುಪಿದೆ. ಕಳೆದ ಶುಕ್ರವಾರದಿಂದ ಈಚೆಗೆ, ಅಂದರೆ ಆಗ 80 ಆಫ್ಘನಿ ಇದ್ದದ್ದು ಶೇ 6ರಷ್ಟು ಇಳಿದು, 86 ಆಪ್ಘನಿ ಆಗಿದೆ. ಇನ್ನು ಒಂದು ಕಡೆ ಯುದ್ಧ, ಮತ್ತೊಂದು ಕಡೆ ಜಾಗತಿಕ ತಾಪಮಾನ ಹೆಚ್ಚಳದ ಕಾರಣಕ್ಕೆ ಬರ ಸೇರಿಕೊಂಡು, ಅಫ್ಘಾನಿಸ್ತಾನದ ಮೂರನೇ ಒಂದು ಭಾಗದಷ್ಟು, ಅಂದರೆ 1.40 ಕೋಟಿ ಜನರು ಗಂಭೀರವಾದ ಹಸಿವಿನಿಂದ ನರಳುವ ಸಾಧ್ಯತೆ ಇದೆ. ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಕಳೆದ ಮೂರು ವರ್ಷಗಳಿಂದ ಬರ ಇದೆ. ಹೊಡೆದಾಟ, ಜನರ ಚದುರುಹೋಗುವುದರ ಜತೆಗ ಇದೂ ಸಮಸ್ಯೆ ಸೇರಿಕೊಂಡಿದೆ. ಕಳೆದ ಮೂವತ್ತು ವರ್ಷದಲ್ಲೇ ಗಂಭೀರ ಕ್ಷಾಮ ಎದುರಿಸುತ್ತಿರುವ ಈ ದೇಶಲ್ಲಿ ಗೋಧಿ ಉತ್ಪಾದನೆ ಶೇ 40ರಷ್ಟು ಕುಸಿದಿದೆ. ಸಾಕುಪ್ರಾಣಿಗಳ ಮೇಲೂ ಇದರ ಪರಿಣಾಮ ಆಗಿದೆ. ಯುದ್ಧದ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಸೇತುವೆ, ಅಣೆಕಟ್ಟು, ರಸ್ತೆಗಳೇ ಹಾಳಾಗಿವೆ. ಬಿಕ್ಕಟ್ಟಿನ ಜತೆಗೆ ಯುದ್ಧದ ಪರಿಣಾಮವಾಗಿ ಇವತ್ತಿಗೆ ಗೋಧಿಯ ಬೆಲೆಯು ಐದು ವರ್ಷಗಳ ಸರಾಸರಿಗಿಂತ ಶೇ 24ರಷ್ಟು ಹೆಚ್ಚಾಗಿದೆ.
ತಾಲಿಬಾನ್ಗಳಿಗೆ ಆದಾಯ ಏನು ಅಂತ ನೋಡಿದರೆ, ಹೆರಾಯಿನ್ ಮತ್ತು ಒಪಿಯಂಗೆ ಬಳಸುವ ಸೊಪ್ಪನ್ನು ಬೆಳೆಯುತ್ತಾರೆ. ಮಾದಕ ಪದಾರ್ಥಗಳ ಉತ್ಪಾದನೆ ಹಾಗೂ ಮಾರಾಟವೇ ತಾಲಿಬಾನ್ಗಳ ಪ್ರಮುಖ ಆದಾಯ ಮೂಲ. ಹಫ್ತಾ ವಸೂಲಿ, ಅಪಹರಣ ಮಾಡಿ ಹಣ ಕೀಳುವುದು ಇಂಥವುಗಳು ಕೂಡ ಆದಾಯ ತರುವ ಮಾರ್ಗಗಳು. ಒಂದು ವರದಿಯ ಪ್ರಕಾರ ಇಂಥವುಗಳಿಂದಲೇ ತಾಲಿಬಾನ್ಗಳಿಗೆ ಬರುವ ಆದಾಯ ಪ್ರಮಾಣ ವರ್ಷಕ್ಕೆ 30 ಕೋಟಿ ಅಮೆರಿಕನ್ ಡಾಲರ್ನಿಂದ 150 ಕೋಟಿ ಅಮೆರಿಕನ್ ಡಾಲರ್ ಇದೆ. ತಾವು ನಿಯಂತ್ರಿಸುವ ಪ್ರದೇಶದಲ್ಲಿ ಯೋಜನೆಯಿಂದ ಉತ್ಪನ್ನಗಳ ತನಕ ಎಲ್ಲದರ ಮೇಲೂ ತೆರಿಗೆ ಹಾಕುವುದರಲ್ಲಿ ತಾಲಿಬಾನ್ಗಳು ನಿಸ್ಸೀಮರು. ಅಂತರರಾಷ್ಟ್ರೀಯ ಸಮುದಾಯವು ಅಫ್ಘಾನಿಸ್ತಾನದಲ್ಲಿ ಶಾಂತಿ ಬಿತ್ತಲು ಯತ್ನಿಸಿದ ಹೊರತಾಗಿಯೂ ವಿಶ್ವದ ಶೇ 80ರಷ್ಟು ಒಪಿಯಂ ಬೆಳೆಯುವುದು ಅಫ್ಘಾನಿಸ್ತಾನದಲ್ಲೇ. ನಲವತ್ತು ವರ್ಷಗಳ ಸಂಘರ್ಷದ ನಂತರ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ. ವಿದೇಶೀಗರ ಸಹಾಯ ಇಲ್ಲದೆ ಅಫ್ಘಾನಿಸ್ತಾನದ ಆರ್ಥಿಕತೆ ಸುಧಾರಿಸಲ್ಲ ಎಂಬುದನ್ನು ಸ್ವತಃ ತಾಲಿಬಾನ್ ಒಪ್ಪಿದೆ. ಈ ಹಿಂದಿನ ಅವಧಿಯಲ್ಲಿ, ಅಂದರೆ 1996ರಿಂದ 2001ರ ಮಧ್ಯೆ ಮಾಡಿದಂತೆ ಈ ಬಾರಿ ಒಪಿಯಂ ಬೆಳೆಯಲು ಅವಕಾಶ ನೀಡಲ್ಲ ಎಂಬುದು ತಾಲಿಬಾನ್ ಮಾತು. ಆದರೆ ನಂಬುವುದಕ್ಕೆ ಎಷ್ಟು ಸಾಧ್ಯ ಎಂಬುದು ಯಾವನಿಗ್ ಗೊತ್ತು?
Published On - 7:56 pm, Fri, 20 August 21