Bengaluru Stampede: ಕಾಲ್ತುಳಿತದಲ್ಲಿ ಸಿಲುಕಿಯೂ ಬದುಕುಳಿದ ಯುವಕ ತಮ್ಮ ಕತೆಯನ್ನು ಟಿವಿ9ಗೆ ಹೇಳಿದರು!
ಇವರು ಕೆಳಗೆ ಬಿದ್ದಾಗ ಮೇಲೆ ಮೂರು ಜನ ಬಿದ್ದರಂತೆ, ಉಸಿರಾಟ ಹೆಚ್ಚುಕಡಿಮೆ ನಿಂತು ಹೋದಂತೆ ಇವರಿಗೆ ಭಾಸವಾಗಿದೆ, ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವರನ್ನು ಅರ್ಸಿಬಿ ಅಭಿಮಾನಿಗಳು ಮೇಲೆ ಬಿದ್ದ ಜನರ ಕೆಳಗಿಂದ ಎಳೆದುಕೊಂಡಿದ್ದಾರೆ. ಇವರಿಗೆ ಪ್ರಜ್ಞೆಯೂ ತಪ್ಪಿದೆ, ಮುಖಕ್ಕೆ ನೀರು ರಾಚಿದಾಗ ಎಚ್ಚರವಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಆಟೋವೊಂದನ್ನು ನಿಲ್ಲಿಸಿ ಇವರನ್ನು ಆಸ್ಪತ್ರೆಗೆ ಸಾಗಿಸಲಾಯಿತಂತೆ.
ಬೆಂಗಳೂರು, ಜೂನ್ 6: ಬುಧವಾರ ನಗರದ ಚಿನ್ನಸ್ವಾಮಿ ಸ್ಟೇಡಿಯಂ (M Chinnaswamy Stadium) ಬಳಿ ನಡೆದ ಭೀಕರ ಕಾಲ್ತುಳಿತದ ದುರ್ಘಟನೆಯಲ್ಲಿ ಸತ್ತವರದ್ದು ಒಂದ ಕತೆಯಾದರೆ ಸಾವಿನ ದವಡೆಗೆ ಸಿಕ್ಕು ಪಾರಾಗಿ ಬಂದವರದ್ದು ಮತ್ತೊಂದು ಕತೆ. ಕಾಲ್ತುಳಿತಕ್ಕೀಡಾಗಿ, ಪ್ರಜ್ಞೆ ತಪ್ಪಿ, ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು ಇವತ್ತು ಸಾಯಂಕಾಲ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ಸು ಹೋಗುತ್ತಿರುವ ವ್ಯಕ್ತಿಯೊಬ್ಬರು ತಾನು ಮತ್ತು ಸ್ನೇಹಿತ ಗೇಟ್ ನಂಬರ್ 17ರ ಬಳಿ ಸಿಕ್ಹಾಕಿಕೊಂಡಿದ್ದನ್ನು ನಮ್ಮ ವರದಿಗಾರನಿಗೆ ವಿವರಿಸಿದ್ದಾರೆ. ಅವರ ಕೈಗೆ ಸಲೈನ್ ಹಾಕಿದ್ದರ ಕುರುಹನ್ನು ನೋಡಬಹುದು ಮತ್ತು ಕಣ್ಣು ಈಗಲೂ ಕೆಂಪಗಿವೆ. ಇವರಂತೆಯೇ ಸುಮಾರು 85 ಜನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಈಗಲೂ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ