- Kannada News Photo gallery Cricket photos IPL 2025: Royal Challengers Bengaluru won their maiden IPL title in 2025
ದಾಖಲೆ ಭರ್ಜರಿ ದಾಖಲೆ… ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
IPL 2025 Final RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ಲಾಗಿ ಟ್ರೋಫಿ ಎತ್ತಿ ಹಿಡಿದಿದೆ. ಅದು ಕೂಡ ಭರ್ಜರಿ ದಾಖಲೆಯೊಂಧಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ರೀತಿಯಲ್ಲಿ ಆರ್ಸಿಬಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Updated on: Jun 04, 2025 | 8:24 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ಚಾಂಪಿಯನ್ ಪಟ್ಟವು ಅಂತಿಂಥ ಗೆಲುವಿನಿಂದ ದಕ್ಕಿದ್ದಲ್ಲ. ಬದಲಾಗಿ ದಾಖಲೆಯ ವಿಜಯದೊಂದಿಗೆ ಮೂಡಿಬಂದಿದೆ. ಅಂದರೆ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ರೀತಿ ಯಾವುದೇ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿಲ್ಲ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 16 ಪಂದ್ಯಗಳನ್ನಾಡಿದೆ. ಈ 16 ಮ್ಯಾಚ್ಗಳಲ್ಲಿ ಸೋತಿರುವುದು ಕೇವಲ 4 ಪಂದ್ಯಗಳನ್ನು ಮಾತ್ರ. ಅದರಲ್ಲಿ 9 ಪಂದ್ಯಗಳನ್ನು ಅವೇ ಮೈದಾನದಲ್ಲಿ ಗೆದುಕೊಂಡಿದೆ. ಅಂದರೆ ಬೆಂಗಳೂರಿನ ಹೊರಗೆ ಆರ್ಸಿಬಿ ಸತತ 9 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ.

ಐಪಿಎಲ್ ಸೀಸನ್ವೊಂದರಲ್ಲಿ ತವರಿನ ಹೊರಗೆ ಸತತ 9 ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದ ಮತ್ತೊಂದು ತಂಡವಿಲ್ಲ. ಅಂದರೆ ಆರ್ಸಿಬಿ ತಂಡವು ಐಪಿಎಲ್ನಲ್ಲಿ ಈವರೆಗೆ ಯಾರಿಂದಲೂ ಕೂಡ ಸಾಧ್ಯವಾಗದ ಗೆಲುವಿನ ನಾಗಾಲೋಟದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎದುರಾಳಿ ತಂಡಗಳ ತವರು ಮೈದಾನದಲ್ಲಿ 7 ಜಯ ಹಾಗೂ ತವರಿನ ಹೊರಗೆ ನಡೆದ ಪ್ಲೇಆಫ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಹೊಮ್ಮಿದೆ. ಅದು ಕೂಡ 17 ವರ್ಷಗಳ ಕಾಯುವಿಕೆಯ ಬಳಿಕ ಎಂಬುದು ವಿಶೇಷ.

ಇನ್ನು ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 190 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 184 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 6 ರನ್ಗಳ ರೋಚಕ ಜಯ ಸಾಧಿಸಿ ಆರ್ಸಿಬಿ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದಿದೆ.









