‘ಸರಿಗಮಪ ಸೀಸನ್ 21’ ವಿನ್ನರ್ ಆದ ಶಿವಾನಿ ಸ್ವಾಮಿ; ಉಳಿದವರಿಗೆ ಎಷ್ಟನೇ ಸ್ಥಾನ?
ವಿವಿಧ ಹಂತಗಳಲ್ಲಿ ‘ಸರಿಗಮಪ’ ಅಂತಿಮ ಸುತ್ತಿಗೆ ಬಂದಿದೆ. ಈ ಮೊದಲು ‘ಟಿಕೆಟ್ ಟು ಫಿನಾಲೆ’ ನಡೆಸಲಾಯಿತು. ಆ ಬಳಿಕ ಸೆಮಿಫೈನಲ್ ನಡೆಯಿತು. ‘ಸರಿಗಮಪ’ ಫಿನಾಲೆಯಲ್ಲಿ ಶಿವಾನಿ ಸ್ವಾಮಿ ಅವರು ಗೆದ್ದು ಬೀಗಿದ್ದಾರೆ. ಉಳಿದವರಿಗೆ ಯಾವ ಸ್ಥಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Updated on:Jun 06, 2025 | 12:02 PM

‘ಸರಿಗಮಪ ಸೀಸನ್ 21’ರ ವಿನ್ನರ್ ಆಗಿ ಬೀದರ್ನ ಶಿವಾನಿ ಸ್ವಾಮಿ ಹೊರ ಬಿದ್ದಿದ್ದಾರೆ. ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದ ಅವರಿಗೆ ವಿಜಯದ ಕಿರೀಟ ಸಿಕ್ಕಿದೆ. ಜೀ5 ಒಟಿಟಿಯಲ್ಲಿ ಜೂನ್ 5ರಂದು ಎಪಿಸೋಡ್ ಪ್ರಸಾರ ಕಂಡಿದೆ.

ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಜೀ ಕನ್ನಡ ‘ಸರಿಗಮಪ’ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ ಆದರು. ಅವರು ವಿನ್ನರ್ ಪಟ್ಟ ಅಲಂಕರಿಸಿದ್ದಾರೆ.

ಶಿವಾನಿ ಸ್ವಾಮಿಗೆ ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸಿದ್ದಾರೆ. ಈ ವಿಜಯವು ಅವರ ಸಂಗೀತ ಜೀವನಕ್ಕೆ ಮತ್ತಷ್ಟು ಮೈಲೇಜ್ ನೀಡುವ ಸಾಧ್ಯತೆ ಇದೆ. ಜೀ ಕನ್ನಡದಲ್ಲಿ ಜೂನ್ 7ರಂದು ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನು, ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಶಿವಾನಿ ಜೊತೆ ಇವರಿಗೂ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು. ಅವರು ರನ್ನರ್ ಅಪ್ ಸ್ಥಾನಕ್ಕೆ ಖಷಿಪಟ್ಟುಕೊಂಡಿದ್ದಾರೆ. ಇವರೇ ವಿನ್ ಆಗಬೇಕು ಎಂಬುದು ಅನೇಕರ ಆಸೆ ಆಗಿತ್ತು.

ಎರಡನೇ ರನ್ನರ್ ಅಪ್ ಆಗಿ ರಶ್ಮಿ ಇದ್ದಾರೆ. ಈ ಬಾರಿ ಟಾಪ್ ಮೂರರಲ್ಲಿ ಇದ್ದವರು ಮಹಿಳಾ ಸ್ಪರ್ಧಿಗಳೇ ಆಗಿದ್ದರು ಅನ್ನೋದು ವಿಶೇಷ. ಫಿನಾಲೆಯಲ್ಲಿ ಒಟ್ಟೂ ಆರು ಮಂದಿ ಇದ್ದರು.
Published On - 11:35 am, Fri, 6 June 25









