AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Popular Zodiac Signs: 12 ರಾಶಿಗಳವರ ಪೈಕಿ ಈ 5 ರಾಶಿಯವರು ಅತ್ಯಂತ ಜನಪ್ರಿಯರು

ಹನ್ನೆರಡು ರಾಶಿಗಳವರ ಪೈಕಿ ಈ ಐದು ರಾಶಿಯವರು ಬಹು ಜನಪ್ರಿಯರಾಗುತ್ತಾರೆ ಏಕೆ? ಹೀಗೊಂದು ಪ್ರಶ್ನೆಯೊಂದಿಗೆ ಲೇಖನವನ್ನು ನೀಡಲಾಗಿದೆ. ಆಸಕ್ತಿಕರ ಮಾಹಿತಿ ಇಲ್ಲಿದೆ.

TV9 Web
| Edited By: |

Updated on: Aug 21, 2021 | 6:46 AM

Share
ರಾಶಿ ಚಕ್ರ

These Zodiac sign people become enemy know the reason why

1 / 6
ಸಿಂಹ ರಾಶಿಯನ್ನು ಇಡೀ ರಾಶಿಚಕ್ರದ ಪೈಕಿಯೇ ಅತ್ಯಂತ ಜನಪ್ರಿಯ ಎಂದು ಪರಿಗಣಿಸಲಾಗಿದೆ. ಇವರು ಸ್ನೇಹಪರರಾಗಿರುತ್ತಾರೆ. ಯಾರನ್ನೂ ಕಳೆದುಕೊಳ್ಳಲು ಇಷ್ಟಪಡದ ಜನರಾದ ಇವರು, ತಮ್ಮ ಸುತ್ತಲೂ ಸದಾ ಜನರು ಇರಲು ಬಯಸುತ್ತಾರೆ. ಅಷ್ಟೇ ಅಲ್ಲ, ಸಿಂಹ ರಾಶಿಯವರ ಜತೆಗಿದ್ದಾಗ ಪಾಸಿಟಿವ್ ಮತ್ತು ಪಾಪ್ಯುಲರ್ ಆದ ಅನುಭವವನ್ನು ಇತರರಿಗೂ ನೀಡುತ್ತಾರೆ. ಸಿಂಹ ರಾಶಿಯವರು ಎಲ್ಲೇ ಇದ್ದರೂ ಜನಪ್ರಿಯರು ಎಂಬ ಪಟ್ಟಿಯಲ್ಲಿರುತ್ತಾರೆ. ಶಾಲೆ, ಕಾಲೇಜು, ಕೆಲಸದ ಸ್ಥಳಗಳು ಇತ್ಯಾದಿ ಹೀಗೆ ಯಾವುದೇ ಹೇಳಿ, ಇವರು ಜನಪ್ರಿಯರು. ತುಂಬಾ ಕರುಣಾಮಯಿಯಾದ ಸಿಂಹ ರಾಶಿಯವರು, ಇತರರು ನೀಡುವ ದಯೆ- ಪ್ರೀತಿಯನ್ನು ಹಲವು ಪಟ್ಟು ಹಿಂತಿರುಗಿಸುತ್ತಾರೆ.

2 / 6
ಧನು

ಧನು ರಾಶಿಯವರು ಆಕರ್ಷಕ ವ್ಯಕ್ತಿತ್ವದ ಆಶಾವಾದಿಗಳು ಮತ್ತು ಅತ್ಯುತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಈ ಗುಣಗಳು ಎಲ್ಲರನ್ನೂ ಇವರ ಕಡೆಗೆ ಆಕರ್ಷಿಸುತ್ತವೆ. ಧನುಸ್ಸು ರಾಶಿಯವರು ಅತ್ಯಂತ ಉದಾರರು ಮತ್ತು ಎಲ್ಲರಿಗೂ ಇಷ್ಟವಾಗುತ್ತಾರೆ. ಸಾಹಸಗಳನ್ನು ಮಾಡಲು ಇಷ್ಟಪಡುತ್ತಾರೆ ಹಾಗೂ ಒಬ್ಬರ ಮೂಲಕ ಪರಿಚಯ ಆಗುವ ಹೊಸಬರನ್ನೂ ಅಷ್ಟು ಸುಲಭಕ್ಕೆ ತಮ್ಮ ಸ್ನೇಹ ವಲಯದಿಂದ ಬಿಟ್ಟುಕೊಡದ ಜನರಾದ ಇವರು, ಎಲ್ಲರ ಬಳಿಯೂ ಅದೇ ಸ್ನೇಹವನ್ನು ನಿರ್ವಹಿಸುತ್ತಾರೆ. ಆ ಕಾರಣಕ್ಕೆ ಹೆಚ್ಚು ಜನಪ್ರಿಯರಾಗುತ್ತಾರೆ.

3 / 6
ಮೇಷ

ರಾಶಿಚಕ್ರದ ಪೈಕಿಯೇ ತುಂಬಾ ಉತ್ಸಾಹಭರಿತರು ಮತ್ತು ಯಾವುದೇ ಕ್ಷಣವನ್ನು ಆನಂದದಾಯಕ ಮತ್ತು ಉಲ್ಲಾಸ ತುಂಬಬಲ್ಲಂಥ ಕ್ಷಣವನ್ನಾಗಿ ಮಾರ್ಪಡಿಸಬಲ್ಲವರು ಅಂತ ಇದ್ದಲ್ಲಿ ಅದು ಮೇಷ ರಾಶಿಯವರು. ಇತರರು ತಮ್ಮ ನಿಗೂಢ ವಿಷಯಗಳನ್ನೂ ಇವರೊಂದಿಗೆ ಹಂಚಿಕೊಳ್ಳಬಹುದು, ಇದರಿಂದ ಖಾಸಗಿತನಕ್ಕೆ ಧಕ್ಕೆ ಬರಲ್ಲ ಎಂಬ ಧೈರ್ಯದಿಂದಾಗಿ ಇವರೊಂದಿಗೆ ಸುತ್ತಾಡಲು ಇಷ್ಟಪಡುತ್ತಾರೆ. ಇವರು ಬಹಳ ಕಾಂಪಿಟೇಟಿವ್ ಆದಂಥ ಜನ. ಪಾಸಿಟಿವ್ ಆದ ಆಲೋಚನೆಯ ಮೂಲಕವಾಗಿ ತಮ್ಮ ಜತೆಗೆ ಇರುವವರು ಸಹ ಅತ್ಯುತ್ತಮವಾದದ್ದನ್ನೇ ನೀಡಲು ಪ್ರೇರಣೆ ಆಗುತ್ತಾರೆ.

4 / 6
ಮೀನ

ಮೀನ ರಾಶಿಯವರು ನಿಸ್ವಾರ್ಥಿಗಳು ಮತ್ತು ಸ್ವಭಾವತಃ ಇತತರಿಗೆ ಬೇಕಾದದ್ದನ್ನು ತಮ್ಮ ಬಳಿ ಇದ್ದಲ್ಲಿ ನೀಡುವ ಮೂಲಕ ಎಲ್ಲರ ಮಧ್ಯೆಯೂ ಜನಪ್ರಿಯರಾಗುತ್ತಾರೆ. ಇವರ ಸೃಜನಶೀಲತೆಯು ಇತರ ಮಧ್ಯೆ ಗುರುತಿಸಿಕೊಳ್ಳುವಂತೆಯೂ ಜನಪ್ರಿಯರಾಗುವಂತೆಯೂ ಮಾಡುತ್ತದೆ. ಮೀನ ರಾಶಿಯವರು ಸಾಮಾಜಿಕವಾಗಿ ಸಕ್ರಿಯರಾಗಿರುತ್ತಾರೆ. ಇವರು ಏಕಾಂಗಿಯಾಗಿರಬಹುದು ಅಥವಾ ತಮಗಾಗಿ ಸಮಯವನ್ನು ಹೊಂದಿರಬಹುದು, ಅದೆಂಥ ಸಂದರ್ಭವೇ ಆದರೂ ತಮ್ಮ ದೊಡ್ಡ ಮಟ್ಟದ ಸ್ನೇಹಿತರ ವಲಯದ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ.

5 / 6
ಮಿಥುನ

ಮಿಥುನ ರಾಶಿಯವರು ಇತರರ ಮೇಲೆ ತೋರಿಸುವಂಥ ದಯೆ, ಸಹಾಯ ಗುಣ, ಇತರರನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ರೀತಿಯಿಂದಾಗಿ ಎಲ್ಲರಿಗೂ ಮಾದರಿ ಆಗಬಲ್ಲಂಥವರು. ಇತರರಿಗೆ ಸಹಾಯ ಮಾಡುವಾಗ ಕೂಡ ಅತ್ಯುತ್ತಮವಾದದ್ದನ್ನೇ ನೀಡಲು ಬಯಸುವಂಥವರು. ಇವರ ಈ ಗುಣವೇ ಇತರರನ್ನು ಆಕರ್ಷಿಸುತ್ತದೆ. ಇವರು ಇತರರೊಂದಿಗೆ ತಕ್ಷಣವೇ ಸ್ನೇಹಿತರಾಗಲು ಬಯಸುತ್ತಾರೆ. ಇವರ ಸಂತೋಷದ ಸ್ವಭಾವವು ಯಾರಲ್ಲಾದರೂ ಉತ್ಸಾಹ ಹಾಗೂ ಚೈತನ್ಯವನ್ನು ತುಂಬುತ್ತದೆ. ಒಟ್ಟಿನಲ್ಲಿ ಮಿಥುನ ರಾಶಿಯವರ ಜತೆಗೆ ಈ ಜಗತ್ತನ್ನು ನಿಶ್ಚಿಂತೆಯಿಂದ ಕಳೆಯಲು ಅಡ್ಡಿ ಇಲ್ಲ.

6 / 6
Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​