ಪ್ರಸಿದ್ದ ವಿಧುರಾಶ್ವತ್ಥ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆೆಯ ಗೌರಿಬಿದನೂರು ತಾಲೂಕಿನಲ್ಲಿದೆ. ಉತ್ತರಪಿನಾಕಿನಿ ನದಿಯ ದಂಡೆಯ ಮೇಲೆ ಅಶ್ವತ್ಥನಾರಾಯಣ ಸ್ವಾಮಿಯ ದೇವಾಲಯವಿದೆ. ಮಹಾಭಾರತ ವಿಧುರ ಇಲ್ಲಿರುವ ದೇವಸ್ಥಾನದ ಬಳಿ ಅಶ್ವತ್ಥ ಮರ ನೆಟ್ಟ ಕಾರಣ ವಿಧುರಾಶ್ವತ್ಥ ಎನ್ನುವ ಹೆಸರು ಬಂದಿದೆ.
ಪ್ರತಿದಿನ ಸಾವಿರಾರು ಜನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಂದು ಅಲ್ಲಿ ಜಾತ್ರೆ- ಬ್ರಹ್ಮರಥೋತ್ಸವ ಎಂದು ಗೊತ್ತಾಗಿದ್ದೇ ತಡ, ಬಿಸಿಲನ್ನು ಲೆಕ್ಕಿಸದೆ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು.
ಇನ್ನು ಇಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ನಡೆಯುವ ಹಾಗೆ ಇಂದು ಸಹ ರಥೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಗೌರಿಬಿದನೂರು ತಾಲೂಕಿನ ತಹಶಿಲ್ದಾರ್ ಮಹೇಶ ಪತ್ರಿ ಸೇರಿದಂತೆ ತಾಲೂಕು ಆಡಳಿತ ದೇವಸ್ಥಾನದಲ್ಲಿ ಇದ್ದು ಮೂಲಭೂತ ಸೌಕರ್ಯಗಳು ಹಾಗೂ ಮುಂಜಾಗೃತೆ ವಹಿಸಿತ್ತು.
ಇಲ್ಲಿರುವ ನಾಗರ ಕಲ್ಲುಗಳಿಗೆ ಹಾಲು, ತುಪ್ಪು, ಮೊಸರು ಎರೆದು ಅಭಿಷೇಕ ಮಾಡಿ, ತುಪ್ಪದ ದೀಪ ಹಚ್ಚಿದರೆ ಇಷ್ಟಾರ್ಥ ಕೊರಿಕೆ ಈಡೇರುತ್ತದೆ ಎನ್ನುವ ಪ್ರತಿತಿ ಕೂಡ ಇದೆ. ಇಂದು ವಿಶೇಷ ದಿನವಾದ ಕಾರಣ ಅಶ್ವತ್ಥನಾರಾಯಣಸ್ವಾಮಿ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ನಂತರ ನಡೆದ ವಿಧುರಾಶ್ವತ್ಥ ನಾರಾಯಣಸ್ವಾಾಮಿ ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಇನ್ನೂ ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಫೆಗೆ ಪಾತ್ರರಾದರು.
ಈಗ ಬಿರು ಬೇಸಿಗೆ, ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಲು ಇದ್ದರೂ ಬಿಸಿಲನ್ನು ಲೆಕ್ಕಿಸದ ಜನ, ಅಶ್ವತ್ಥನಾರಾಯಣ ಸ್ವಾಮಿಯ ಜಾತ್ರೆಗೆ ಜನಸಾಗರವಾಗಿ ಹರಿದು ಬಂದಿದ್ದು ವಿಶೇಷವಾಗಿತ್ತು.