ಭಾರೀ ಸಂಚಲನ ಸೃಷ್ಟಿಸಿದ್ದ ವಿವೋ V29e ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?

|

Updated on: Sep 07, 2023 | 6:55 AM

Vivo V29e Smartphone First Sale: ವಿವೋ ತನ್ನ V-ಸರಣಿ ಅಡಿಯಲ್ಲಿ ಫೋಟೋ ಪ್ರಿಯರಿಗೆ ಹಾಗೂ ಬಜೆಟ್-ಕೇಂದ್ರಿತ ಗ್ರಾಹಕರಿಗಾಗಿ ಈ ನೂತನ ಫೋನನ್ನು ಅನಾವರಣ ಮಾಡಿತ್ತು. ಕಡಿಮೆ ಬೆಲೆಯಾಗಿದ್ದರೂ ವಿವೋ V29e ಫೋನ್​ನಲ್ಲಿ ಹುಬ್ಬೇರಿಸುವಂತಹ ಫೀಚರ್​ಗಳು ಅಡಕವಾಗಿದೆ. ಹಾಗಾದರೆ ವಿವೋ V29e ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

1 / 8
ಬಿಡುಗಡೆ ಆದಾಗಿನಿಂದ ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ವಿವೋ ಕಂಪನಿಯ ಹೊಸ ಸ್ಮಾರ್ಟ್​ಫೋನ್ ವಿವೋ ವಿ29ಇ (Vivo V29e) ಇಂದಿನಿಂದ ಖರೀದಿಗೆ ಸಿಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಈ ಸ್ಮಾರ್ಟ್​ಫೋನ್ ಸೇಲ್ ಕಾಣಲಿದೆ.

2 / 8
ವಿವೋ ತನ್ನ V-ಸರಣಿ ಅಡಿಯಲ್ಲಿ ಫೋಟೋ ಪ್ರಿಯರಿಗೆ ಹಾಗೂ ಬಜೆಟ್-ಕೇಂದ್ರಿತ ಗ್ರಾಹಕರಿಗಾಗಿ ಈ ನೂತನ ಫೋನನ್ನು ಅನಾವರಣ ಮಾಡಿದೆ. ಕಡಿಮೆ ಬೆಲೆಯಾಗಿದ್ದರೂ ಈ ಫೋನ್​ನಲ್ಲಿ ಹುಬ್ಬೇರಿಸುವಂತಹ ಫೀಚರ್​ಗಳು ಅಡಕವಾಗಿದೆ. ಹಾಗಾದರೆ ವಿವೋ V29e ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

3 / 8
ವಿವೋ V29e ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ರಿಲೀಸ್ ಆಗಿತ್ತು. ಇದರ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ.

4 / 8
ವಿವೋ V29e ಸ್ಮಾರ್ಟ್‌ಫೋನ್ ಇಂದಿನಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಸಿಗಲಿದೆ. ಈ ಫೋನ್ ಕೆಂಪು ಅಥವಾ ನೀಲಿ ಬಣ್ಣಗಳ ಆಯ್ಕೆಯಲ್ಲಿ ಬಂದಿದೆ. ವಿಶೇಷವಾಗಿ ಆರ್ಟಿಸ್ಟಿಕ್ ಕೆಂಪು ಆಯ್ಕೆಯ ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.

5 / 8
ಈ ಸ್ಮಾರ್ಟ್​ಫೋನ್ ರಿಯಲ್ ಮಿ, ಮೋಟೋರೊಲಾ, ಲಾವಾ ಬ್ರ್ಯಾಂಡ್‌ಗಳ ಫೋನ್​ನಲ್ಲಿರುವಂತೆ ನಯವಾದ ಫ್ರೇಮ್ ಮತ್ತು ಬಾಗಿದ ವಿನ್ಯಾಸ ಹೊಂದಿದೆ. ಇದರಲ್ಲಿ ಹೆಚ್ಚಿನ ರಿಫ್ರೆಶ್ ದರದೊಂದಿಗೆ ಪೂರ್ಣ-HD+ ರೆಸಲ್ಯೂಶನ್ (2400×1080 ಪಿಕ್ಸೆಲ್‌ಗಳು) ಜೊತೆಗೆ 6.73-ಇಂಚಿನ AMOLED ಡಿಸ್ ಪ್ಲೇ ಇದೆ.

6 / 8
ಮುಂಭಾಗದ ಪಂಚ್ ಹೋಲ್ ಕಟೌಟ್ ಒಳಗೆ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಆಕರ್ಷಕವಾಗಿದ್ದು ಉತ್ತಮ ಫೋಕಸ್‌ಗಾಗಿ “ಐ ಆಟೋ ಫೋಕಸ್” ಆಯ್ಕೆ ನೀಡಲಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ನಲ್ಲಿ ಕ್ವಾಲ್ಕಮ್​ನ ಸ್ಮಾಪ್​ಡ್ರಾಗನ್ 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.

7 / 8
ಈ ಫೋನಿನ ಹಿಂಭಾಗ ಎರಡು ಕ್ಯಾಮೆರಾ ಸಂವೇದಕಗಳನ್ನು ಅಳವಡಿಸಲಾಗಿದೆ. ಇದು 64-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಆಗಿದೆ. ಪ್ರೀಮಿಯಂ ಲುಕ್‌ಗಾಗಿ ಹಿಂಭಾಗದಲ್ಲಿ ಗ್ಲಾಸ್ ಫಿನಿಶ್ ಕೂಡ ಇದೆ. ಕ್ಯಾಮೆರಾ ಅಪ್ಲಿಕೇಶನ್ ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪ್ಯಾನೋ, ಸ್ಲೋ-ಮೋ, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ಗಳನ್ನು ಒಳಗೊಂಡಿದೆ.

8 / 8
5000mAh ಬ್ಯಾಟರಿ ಶಕ್ತಿ ನೀಡಲಾಗಿದ್ದು, 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿಯು ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ. ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ 5G ಸಪೋರ್ಟ್ ಮಾಡುತ್ತದೆ, ಟೈಪ್-C ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಆಂಡ್ರಾಯ್ಡ್ 13-ಆಧಾರಿತ Funtouch OS ಮತ್ತು ಇನ್-ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ನೀಡಲಾಗಿದೆ.