ಈ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಬಂದ್: ಇಲ್ಲಿದೆ ಫೋನುಗಳ ಪಟ್ಟಿ

Updated on: Oct 16, 2023 | 6:55 AM

WhatsApp will end support for older Android phones: ವಾಟ್ಸ್​​ಆ್ಯಪ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್​​ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.

1 / 6
ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ.

ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ.

2 / 6

ವಾಟ್ಸ್​​ಆ್ಯಪ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್​​ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.

3 / 6

“ಈಗಲೂ ಕೆಲವು ಜನರು ತಮ್ಮ ಸ್ಮಾರ್ಟ್​ಫೋನ್​ಗಳನ್ನು ಅಪ್ಡೇಟ್ ಮಾಡದೆ ಅಥವಾ ಹಳೆಯ ಸಾಫ್ಟ್‌ವೇರ್ ಬಳಸುತ್ತಿರುವುದು ಕಂಡುಬಂದಿದೆ. ಈ ಮೊಬೈಲ್​ಗಳು ಇತ್ತೀಚಿನ ಭದ್ರತಾ ನವೀಕರಣಗಳನ್ನು ಹೊಂದಿಲ್ಲದಿರಬಹುದು. ವಾಟ್ಸ್​ಆ್ಯಪ್ ಮುಂದಿನ ನೂತನ ಅಪ್ಡೇಟ್​ಗಾಗಿ ಕೆಲ ಫೋನುಗಳಲ್ಲಿ ಕಾರ್ಯಚರಣೆ ನಿಲ್ಲಿಸಲಿದೆ,” ಎಂದು ವಾಟ್ಸ್​ಆ್ಯಪ್ FAQ ನಲ್ಲಿ ಬರೆದುಕೊಂಡಿದೆ.

4 / 6

ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿರುವ ಫೋನ್‌ಗಳನ್ನು ನೋಡುವುದಾದರೆ, ನೆಕ್ಸಸ್ 7 (ಆಂಡ್ರಾಯ್ಡ್ 4.2 ಗೆ ಅಪ್‌ಗ್ರೇಡ್ ಮಾಡಬಹುದು), ಸ್ಯಾಮ್​ಸಂಗ್ ಗ್ಯಾಲಕ್ಸಿ ನೋಟ್ 2, ಹೆಚ್​ಟಿಸಿ ಒನ್, ಸೋನಿ ಎಕ್ಸ್‌ಪೀರಿಯಾ Z, ಎಲ್ಜಿ ಆಪ್ಟಿಮಸ್ ಜಿ ಪ್ರೊ, ಸ್ಯಾಮ್​ಸಂಗ್ ಗ್ಯಾಲಕ್ಸಿ S2.

5 / 6

ಸ್ಯಾಮ್​ಸಂಗ್ ಗ್ಯಾಲಕ್ಸಿ ನೆಕ್ಸಸ್, ಹೆಚ್​ಟಿಸಿ ಸೆನ್ಸೇಶನ್, ಮೋಟೋರೊಲ Droid Razr, ಸೋನಿ ಎಕ್ಸ್‌ಪೀರಿಯಾ S2, ಮೋಟೋರೊಲ Xoom, ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ 10.1, ಏಸಸ್ ಫೀ ಪ್ಯಾಡ್ ಟ್ರಾನ್ಸ್ಫಾರ್ಮರ್, ಏಸರ್ ಐಕೋನಿಯಾ ಟ್ಯಾಬ್ A5003, ಸ್ಯಾಮ್​ಸಂಗ್ ಗ್ಯಾಲಕ್ಸಿ S, ಹೆಚ್​ಟಿಸಿ ಡಿಸೈರ್ HD, ಎಲ್​ಜಿ Optimus 2X, ಸೋನಿ ಎರಿಕ್ಸಾನ್ ಎಕ್ಸ್‌ಪೀರಿಯಾ Arc3.

6 / 6

ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಹಳೆಯದರಲ್ಲಿ ಇದೆಯೇ ಅಥವಾ ಇಲ್ಲವೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನಿನಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ನೀವು ಪರಿಶೀಲಿಸಬಹುದು. ಸೆಟ್ಟಿಂಗ್‌ಗೆ ತೆರಳಿ ಸಾಫ್ಟ್‌ವೇರ್ ಆಯ್ಕೆಗೆ ಹೋದರೆ ಅಲ್ಲಿ ಕಾಣಿಸುತ್ತದೆ. ವಾಟ್ಸ್​ಆ್ಯಪ್ ಈ ಫೋನುಗಳಲ್ಲಿ ಕಾರ್ಯನಿವರ್ಹಿಸುವುದನ್ನು ನಿಲ್ಲಿಸಿದರೆ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಯಾವುದೇ ಇತರ ವಾಟ್ಸ್​ಆ್ಯಪ್ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

Loading...
Unable to load recommendations.
Follow Us