Kannada News Photo gallery yadagiri: Here is a glimpse of hundreds of Sadhus enjoying the ganja, devotees distributing ganja to the Sadhus with devotion
ಗಾಂಜಾ ಗುಂಗಿನಲ್ಲೇ ತೇಲಾಡುತ್ತಿರುವ ನೂರಾರು ಸಾಧುಗಳು, ಭಕ್ತಿಯಿಂದ ಸಾಧುಗಳಿಗೆ ಗಾಂಜಾ ಹಂಚುತ್ತಿರುವ ಭಕ್ತರು, ಅದರ ಝಲಕ್ ಇಲ್ಲಿದೆ ನೋಡಿ
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Feb 06, 2023 | 5:57 PM
ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಸಿದ್ಧ ಜಾತ್ರೆಯಾಗಿದ್ದು, ಐದು ದಿನಗಳ ಕಾಲ ನಡೆಯುವ ಆ ಜಾತ್ರೆಗೆ ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತದೆ. ದೇಶದ ವಿವಿಧ ಕಡೆಯಿಂದ ಬಂದ ಸಾದುಗಳು ಗಾಂಜಾ ನಶೆಯಲ್ಲಿ ಮಿಂದೆಳುತ್ತಾರೆ.
1 / 7
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸುಪ್ರಸಿದ್ಧ ಮೌನೇಶ್ವರ ಜಾತ್ರೆ ನಡೆದಿದ್ದು, ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರ, ಮಹರಾಷ್ಟ್, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ನಾನಾ ಕಡೆಯಿಂದ ಸಾಧುಗಳು ಇಲ್ಲಿಗೆ ಬಂದಿದ್ದರು.
2 / 7
ದಶಮಾನಗಳಿಂದ ನಡೆಯುತ್ತಿರುವ ಸುಪ್ರಸಿದ್ಧ ಮೌನೇಶ್ವರ ಜಾತ್ರೆಯು ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಜಾತ್ರೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗಿರುತ್ತೆ. ಮೌನೇಶ್ವರ ದೇವಸ್ಥಾನದ ಬಳಿಯಿರುವ ಕೈಲಾಸ ಕಟ್ಟಿಯಲ್ಲಿ ನೂರಾರು ಸಾಧುಗಳು ಗಾಂಜಾ ನಶೆಯಲ್ಲಿ ತೇಲಾಡುತ್ತಾರೆ.
3 / 7
ಜಾತ್ರೆಯಲ್ಲಿ ವಿಶೇಷ ಅಂದ್ರೆ ಸಾಧುಗಳು ಕೈಲಾಸ ಕಟ್ಟಿಯಲ್ಲಿ ಕುಳಿತು ಭಕ್ತರು ತಂದು ಕೊಟ್ಟ ಗಾಂಜಾವನ್ನ ಸೇದುವುದು. ಕೈಲಾಸ ಕಟ್ಟಿಯಲ್ಲಿ ಜಾತ್ರೆಯ ಐದು ದಿನ ನಿತ್ಯ ಸಾಧುಗಳು ಗಾಂಜಾ ಹೊಡೆಯುತ್ತಾರೆ. ಇನ್ನು ಇಲ್ಲಿ ಗಾಂಜಾ ಹೊಡೆಯುವುದರಿಂದ ಕೈಲಾಸ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆ ಸಾಧುಗಳಲ್ಲಿದೆ. ಹೀಗಾಗಿ ಮೌನೇಶ್ವರ ಸನ್ನಿಧಿಯಲ್ಲಿ ಸಾಧುಗಳು ಗಾಂಜಾ ಹೊಡೆಯುವುದಕ್ಕೆ ದೂರ ದೂರದಿಂದ ಬರುತ್ತಾರೆ.
4 / 7
ಇನ್ನು ಈ ಕೈಲಾಸ ಕಟ್ಟಿಯಲ್ಲಿ ಕುಳಿತು ಸಾಧುಗಳು ಗಾಂಜಾ ಹೊಡೆಯುವುದಕ್ಕೆ ವಿಶೇಷವಾದ ಕಾರಣವಿದೆ. ಶತಮಾನಗಳ ಹಿಂದೆ ಮೌನೇಶ್ವರರ ಶಿಷ್ಯರ ಗುಂಪು ಕೈಲಾಸ ಕಾಣುವುದಕ್ಕೆ ಕಾಶಿಗೆ ಪಾದಯಾತ್ರೆ ಹೊರಟಿದ್ರಂತೆ ಆದ್ರೆ ಮೌನೇಶ್ವರ ಅವರು ಕಾಶಿಗೆ ಹೋಗಿ ಕೈಲಾಸ ಕಾಣುವುದು ಬೇಡ ನಾನು ಇಲ್ಲೇ ತೋರಿಸುತ್ತೆನೆ ಅಂತಾ ಮೌನೇಶ್ವರ ಅವರು ಕಣ್ಣು ಮುಚ್ಚಿ ಶಿಷ್ಯಂದರಿಗೆ ಅಂಗೈಯಲ್ಲಿ ಕೈಲಾಸ ತೋರಿಸಿದ್ರಂತೆ ಬಳಿಕ ಕಟ್ಟಿ ಮೇಲೆ ಕುಳಿತು ಗಾಂಜಾ ಹೊಡೆದ್ದರಿಂದ ಈ ಸ್ಥಳಕ್ಕೆ ಮೌನೇಶ್ವರನ ಕೈಲಾಸ ಕಟ್ಟಿ ಎಂದು ಹೆಸರು ಬಂದಿದೆ.
5 / 7
ಹೀಗಾಗಿ ಸಾವಿರಾರು ಭಕ್ತರು ಕೈಲಾಸ ಕಟ್ಟಿ ಬಳಿ ಬಂದು ಸಾಧುಗಳಿಗೆ ಗಾಂಜಾವನ್ನ ಹಂಚುತ್ತಾರೆ ಸಾಕ್ಷಾತ್ ಮೌನೇಶ್ವರನನ್ನ ಸಾದುಗಳ ರೂಪದಲ್ಲಿ ಕಾಣುತ್ತಾರೆ. ಹೀಗಾಗಿ ಭಕ್ತರ ತಂದು ಕೊಟ್ಟ ಗಾಂಜಾವನ್ನ ಸಾಧುಗಳು ಚಿಲುಮೆಯಲ್ಲಿ ತುಂಬಿ ನೆತ್ತಿಗೆ ಹೆರುವ ಹಾಗೆ ಎಳೆದು ಬಿಡುತ್ತಾರೆ.
6 / 7
ಈ ಸ್ಥಳದಲ್ಲಿ ಹತ್ತಾರು ವರ್ಷಗಳಿಂದ ಸಾಧುಗಳು ಜಾತ್ರೆಯ ಐದು ದಿನ ಕೈಲಾಸ ಕಟ್ಟಿಯಲ್ಲಿ ಕುಳಿತು ಗಾಂಜಾವನ್ನ ಹೊಡೆಯುತ್ತಾರೆ. ಇನ್ನು ಈ ಸ್ಥಳದಲ್ಲಿ ಗಾಂಜಾ ಸೇದುವುದಕ್ಕೆ ಯಾವುದೆ ನಿರ್ಬಂಧವಿಲ್ಲ. ಹೀಗಾಗಿ ಸಾಧುಗಳು ನಿರಂತರವಾಗಿ ಚಿಲುಮೆಯಲ್ಲಿ ಗಾಂಜಾ ಹಾಕಿ ಎಳೆಯುತ್ತಾರೆ.
7 / 7
ಒಟ್ಟಿನಲ್ಲಿ ಮೌನೇಶ್ವರ ಜಾತ್ರೆಯಲ್ಲಿ ಐದು ದಿನಗಳ ಕಾಲ ಸಾಧುಗಳ ಗಾಂಜಾ ಗಮ್ಮತ್ತು ದೃಶ್ಯ ನೋಡುವುದೆ ವಿಶೇಷವಾಗಿರುತ್ತೆ. ಹೀಗಾಗಿ ಈ ಜಾತ್ರೆ ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಿಂದ ಭಕ್ತ ಸಾಗರ ಹರಿದು ಬರುತ್ತೆ. ಇನ್ನು ಗಾಂಜಾ ಗುಂಗು ಸಾಧುಗಳಿಗೆ ನಶೆಯಲ್ಲಿ ತೇಲಾಡುವಂತೆ ಮಾಡುವುದೆ ವಿಶೇಷವಾಗಿದೆ.
Published On - 5:40 pm, Mon, 6 February 23