ಭಾರತದಲ್ಲಿ ಸ್ವಾತಂತ್ರ್ಯ ನಂತರ ಬಹು ವರ್ಷಗಳ ಕಾಲದವರೆಗೆ ಅಧಿಕಾರದಲ್ಲಿದ್ದ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ (Congress)ಗೆ ವಿರುದ್ಧವಾಗಿ ಹುಟ್ಟಿಕೊಂಡ ಬಿಜೆಪಿ (BJP) ಇದೀಗ ಭಾರತದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ (Biggest National Party In India) ಆಡಳಿತ ನಡೆಸುತ್ತಿದೆ. ಆದಾಗ್ಯೂ, ಕಮ್ಯುನಿಸ್ಟ್ ಪಕ್ಷಗಳಂತೆ ಕೆಲವು ಸಣ್ಣ ಪಕ್ಷಗಳು ಸಹ ರಾಷ್ಟ್ರೀಯ ಪಕ್ಷಗಳಾಗಿ ಗುರುತಿಸಲ್ಪಟ್ಟಿವೆ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡುವ ಆಮ್ ಆದ್ಮಿ ಪಕ್ಷ (AAP) ಎದುರಾಗಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ (Gujarat Election) ನಂತರ ಇದು ಕೂಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷವೆಂದರೆ ಒಂದು ಪಕ್ಷವು ರಾಷ್ಟ್ರೀಯವಾಗಿ ಅಸ್ತಿತ್ವವನ್ನು ಹೊಂದಿದೆ ಎಂದರ್ಥ. ಪ್ರಾದೇಶಿಕವಾಗಿ ಹುಟ್ಟಿಕೊಂಡ ಒಂದು ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ ಭಾರತದಲ್ಲಿ ರಾಷ್ಟ್ರೀಯ ಪಕ್ಷ (National Parties In India)ವಾಗಲು ಕೆಲವೊಂದು ಷರತ್ತುಗಳನ್ನು ಪೂರೈಸಬೇಕು. ಭಾರತದ ಚುನಾವಣಾ ಆಯೋಗದ (Election Commission Of India) ಪ್ರಕಾರ, ಅರ್ಹತೆಗಳ ಪಟ್ಟಿಯಲ್ಲಿ ಯಾವುದಾದರು ಒಂದನ್ನು ಪೂರೈಸಿದರೆ ರಾಜಕೀಯ ಪಕ್ಷವನ್ನು ಭಾರತದಲ್ಲಿ ರಾಷ್ಟ್ರೀಯ ಪಕ್ಷವೆಂದು ಗುರುತಿಸಬಹುದು. ಭಾರತದಲ್ಲಿ ರಾಷ್ಟ್ರೀಯ ಪಕ್ಷವಾಗಲು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷ, ಕೆಲವು ಕ್ಷೇತ್ರಗಳಲ್ಲಿ ಸಿಕ್ಕಿದ್ದು ನೋಟಾಗಿಂತಲೂ ಕಡಿಮೆ ಮತ
ಒಂದು ಪಕ್ಷವು ರಾಜ್ಯ ಪಕ್ಷವಾಗಿ ಹೊರಹೊಮ್ಮಲು ಕೂಡ ಅದರದ್ದೇ ಆದ ಅರ್ಹತೆಗಳು, ಮಾಹದಂಡಗಳು ಅಥವಾ ಅಗತ್ಯತೆಗಳನ್ನು ಪೂರೈಸಬೇಕು. ಹಾಗಿದ್ದರೆ ರಾಜ್ಯ ಪಕ್ಷವಾಗಿ ಗುರುತಿಸಲ್ಪಡಲು ಪಕ್ಷಕ್ಕೆ ಬೇಕಾದ ಅಗತ್ಯತೆಗಳು ಏನೇನು ಎಂಬುದು ತಿಳಿಯೋಣ.
ಇದನ್ನೂ ಓದಿ: Gujarat Election Results 2022: ಗುಜರಾತ್ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ಸೋಲುಣಿಸಿದ ಮತದಾರ
ಹಾಗಿದ್ದರೆ ಆಮ್ ಆದ್ಮಿ ಪಕ್ಷ ರಾಜ್ಯ ಮನ್ನಣೆ ಮತ್ತು ರಾಷ್ಟ್ರೀಯ ಪಕ್ಷವಾಗಲು ಬೇಕಾದ ಅರ್ಹತೆಗಳನ್ನು ಪೂರೈಸಿದೆಯೇ?
ಸರಿಯಾಗಿ 10 ವರ್ಷಗಳ ಹಿಂದೆ ಅಂದರೆ 2012ರಲ್ಲಿ ದೆಹಲಿಯಲ್ಲಿ ಹುಟ್ಟಿಕೊಂಡು ಆಮ್ ಆದ್ಮಿ ಪಕ್ಷವು ಇದೀಗ ರಾಷ್ಟ್ರೀಯ ಪಕ್ಷವಾಗಿದೆ. ಅರವಿಂದ ಕೇಜ್ರಿವಾಲ್ ರಾಷ್ಟ್ರೀಯ ಸಂಚಾಲಕರಾಗಿ ಆರಂಭದಿಂದಲೂ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಅಮ್ ಆದ್ಮಿ ಸ್ಪರ್ಧಿಸಿತ್ತು. ಅದರಲ್ಲಿ ಪಂಜಾಬ್ನಲ್ಲಿ ಪ್ರಚಂಡ ಗೆಲುವಿನೊಂದಿಗೆ ಅಧಿಕಾರಕ್ಕೇರಿತು. ದೇಶಾದ್ಯಂತ 157 ಶಾಸಕರನ್ನು ಈ ಪಕ್ಷವು ಹೊಂದಿದೆ.
ದೆಹಲಿ ವಿಧಾನಸಭೆಯಲ್ಲಿ ಶೇ 23ರಷ್ಟು ಮತ ಗಳಿಸಿದ್ದ ಎಎಪಿ, ಪಂಜಾಬ್ ವಿಧಾನಸಭೆಯಲ್ಲಿ ಶೇ 18.3ರಷ್ಟು, ಗೋವಾ ಚುನಾವಣೆಯಲ್ಲಿ ಶೇ 0.5ರಷ್ಟು ಮತ ಗಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ 2.1ರಷ್ಟು, 2019ರ ಚುನಾವಣೆಯಲ್ಲಿ ಶೇ 0.4 ರಷ್ಟು ಮತ ಗಳಿಸಿದೆ. ಹಿಮಾಚಲಪ್ರದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿನ ಮತಗಳಿಸಿದ್ದು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶದ ಪ್ರಕಾರ ಅಮ್ ಆದ್ಮಿ ಶೇ 12 ಹೆಚ್ಚು ಮತಗಳಿಸಿದೆ.
ಇದನ್ನೂ ಓದಿ: Gujarat New CM: ಗುಜರಾತ್ ಮುಖ್ಯಮಂತ್ರಿಯಾಗಿ ಡಿ. 12ರಂದು 2ನೇ ಬಾರಿಗೆ ಭೂಪೇಂದ್ರ ಪಟೇಲ್ ಪ್ರಮಾಣವಚನ; ಮೋದಿ, ಅಮಿತ್ ಶಾ ಭಾಗಿ
ಭಾರತದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳು:
ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುವುದರ ಪ್ರಯೋಜನಗಳು:
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 am, Fri, 9 December 22