AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷ, ಕೆಲವು ಕ್ಷೇತ್ರಗಳಲ್ಲಿ ಸಿಕ್ಕಿದ್ದು ನೋಟಾಗಿಂತಲೂ ಕಡಿಮೆ ಮತ

ಡಾಲ್‌ಹೌಸಿ, ಕಸುಂಪ್ಟಿ, ಚೋಪಾಲ್, ಅರ್ಕಿ, ಚಂಬಾ ಮತ್ತು ಚುರಾ ಮುಂತಾದ ಕ್ಷೇತ್ರಗಳಲ್ಲಿ  ಹೆಚ್ಚು ಜನರು ಆಪ್​​ಗಿಂತ ನೋಟಾಗೆ ಹೆಚ್ಚು ಮತ ಹಾಕಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷ, ಕೆಲವು ಕ್ಷೇತ್ರಗಳಲ್ಲಿ ಸಿಕ್ಕಿದ್ದು ನೋಟಾಗಿಂತಲೂ ಕಡಿಮೆ ಮತ
ಅರವಿಂದ ಕೇಜ್ರಿವಾಲ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 08, 2022 | 9:49 PM

Share

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ (AAP) ಒಟ್ಟು ಚಲಾವಣೆಯಾದ ಮತಗಳಲ್ಲಿ ಕೇವಲ 1.10 ಪ್ರತಿಶತದಷ್ಟು ಮತಗಳನ್ನು ಗಳಿಸಿದೆ. ಇಲ್ಲಿ ಖಾತೆ ತೆರೆಯದ ಆಮ್ ಆದ್ಮಿ ಪಕ್ಷಕ್ಕೆ ಹಲವಾರು ಕ್ಷೇತ್ರಗಳಲ್ಲಿ ನೋಟಾಕ್ಕಿಂತ ಕಡಿಮೆ ಮತ ಸಿಕ್ಕಿದೆ. ‘None Of The Above ಅಥವಾ ನೋಟಾ’ ಆಯ್ಕೆಯು ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಬಯಸುವುದಿಲ್ಲ ಎಂದು ಸೂಚಿಸಲು ಅನುಮತಿಸುತ್ತದೆ. ಇಲ್ಲಿ ಒಟ್ಟಾರೆ ನೋಟಾ ಮತಗಳ ಪ್ರಮಾಣ ಶೇ.0.60ರಷ್ಟಿತ್ತು. ಡಾಲ್‌ಹೌಸಿ, ಕಸುಂಪ್ಟಿ, ಚೋಪಾಲ್, ಅರ್ಕಿ, ಚಂಬಾ ಮತ್ತು ಚುರಾ ಮುಂತಾದ ಕ್ಷೇತ್ರಗಳಲ್ಲಿ  ಹೆಚ್ಚು ಜನರು ಆಪ್​​ಗಿಂತ ನೋಟಾಗೆ(NOTA) ಹೆಚ್ಚು ಮತ ಹಾಕಿದ್ದಾರೆ. ಎಎಪಿಯ ಕಳಪೆ ಪ್ರದರ್ಶನವು ಸುಮಾರು ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಪರ್ಯಾಯವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಾಬಲ್ಯವನ್ನು ಎದುರಿಸಲು ರಾಜ್ಯದಲ್ಲಿ ಬಲವಾದ ಮೂರನೇ ಶಕ್ತಿಯಾಗಿ ಹೊರಹೊಮ್ಮುವ ಭರವಸೆಯನ್ನು ಹಾಳುಮಾಡಿದೆ. ನವೆಂಬರ್ 12 ರ ಚುನಾವಣೆಗೆ ಒಂದು ತಿಂಗಳ ಮೊದಲು ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಿಮಾಚಲದಲ್ಲಿ ರ್ಯಾಲಿ, ರೋಡ್ ಶೋಗಳೊಂದಿಗೆ ಪ್ರಚಾರ ನಡೆಸಿದ್ದರು. ಆದರೆ ಗುಜರಾತಿನಲ್ಲಿ ಹೆಚ್ಚಿನ ಗಮನ ವಹಿಸಿರುವುದರಿಂದ ಅದೇ ಜೋಶ್​​ನಲ್ಲಿ ಹಿಮಾಚಲದಲ್ಲಿ ಪ್ರಚಾರ ನಡೆಸಿರಲಿಲ್ಲ.

ಮಾಸ್ ಲೀಡರ್‌ನ ಅನುಪಸ್ಥಿತಿಯು ಕಾರ್ಯಕರ್ತರನ್ನು ನಿರಾಸೆಗೊಳಿಸಿತು. ಸತ್ಯೇಂದ್ರ ಜೈನ್ ಅವರ ಬಂಧನ ಮತ್ತು ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ ತನಿಖಾ ಸಂಸ್ಥೆಯ ದಾಳಿಗಳು ಆಪ್ ಉತ್ಸಾಹವನ್ನು ಕುಗ್ಗಿಸಿತು. ಪಕ್ಷವು 68 ಸ್ಥಾನಗಳಲ್ಲಿ 67 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ನಾವು ಪೌಂಟಾ ಸಾಹಿಬ್, ಇಂದೋರಾ ಮತ್ತು ನಲಗಢದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದೆವು. ಆದರೆ ಫಲಿತಾಂಶಗಳು ಅನುಕೂಲಕರವಾಗಿಲ್ಲ. ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ ಮತ್ತು ಸಾಕಷ್ಟು ದೂರ ಸಾಗಬೇಕಾಗಿದೆ. ಇದು ನಮ್ಮ ಮೊದಲ ಚುನಾವಣೆ ಮತ್ತು ಕೊನೆಯ ಚುನಾವಣೆಯಲ್ಲ ಎಂದು ಎಎಪಿ ರಾಜ್ಯ ಅಧ್ಯಕ್ಷರು ಸುರ್ಜಿತ್ ಸಿಂಗ್ ಠಾಕೂರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನಾಲ್ಕು ಬಾರಿ ಶಾಸಕ ಮತ್ತು ಮಾಜಿ ಸಂಸದ ರಾಜನ್ ಸುಶಾಂತ್, ಕಸೌಲಿಯಿಂದ ಬಿಜೆಪಿಯ ಮಾಜಿ ನಾಯಕ ಹರ್ಮೆಲ್ ಧಿಮಾನ್, ಪೌಂಟಾ ಸಾಹಿಬ್‌ನಿಂದ ಮನೀಶ್ ಠಾಕೂರ್, ಸೋಲನ್‌ನಿಂದ ಮಾಜಿ ಕಾಂಗ್ರೆಸ್ ನಾಯಕ ಧರಂ ಪಾಲ್ ಚೌಹಾನ್ ಮತ್ತು ದೇಶದ ಕಿರಿಯ ಅಭ್ಯರ್ಥಿ ನಾಚನ್‌ನಿಂದ ಸರಪಂಚ್ ಜಬ್ನಾ ಚೌಹಾಣ್ ಸೇರಿದಂತೆ ಎಎಪಿ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಮಾತನಾಡುವ ಯಾರೊಬ್ಬರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಪ್ರಚಾರ ವೇಳೆ ಆಪ್ ಹಲವಾರು ಭರವಸೆಗಳನ್ನು ನೀಡಿತ್ತು. ಸರ್ಕಾರಿ ವಲಯದ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಬಹಿರಂಗವಾಗಿ ಆಪ್ ಬೆಂಬಲಕ್ಕೆ ಬಂದಿತು. ಮತದಾರರಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ₹ 1,000 ‘ಸಮ್ಮಾನ ರಾಶಿ’, ಯುವಕರಿಗೆ ಉದ್ಯೋಗ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಮತ್ತು ಗ್ರಾಮೀಣ ಮೂಲಸೌಕರ್ಯಗಳ ಸುಧಾರಣೆ ಮೊದಲಾದ ಆರು ಭರವಸೆಗಳನ್ನು ಆಪ್ ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್