ನೂತನ ರಾಜ್ಯಾಧ್ಯಕ್ಷರನ್ನ ಬರಮಾಡಿಕೊಳ್ಳಲು ಶೃಂಗಾರಗೊಂಡ ಬಿಜೆಪಿ ಕಚೇರಿ, ಜಗನಾಥ್ ಭವನದಲ್ಲಿ ಹಬ್ಬದ ಸಂಭ್ರಮ

|

Updated on: Nov 15, 2023 | 8:47 AM

ಕರ್ನಾಟಕದ ಬಿಜೆಪಿಯಲ್ಲೀಗ ಯುವ ಹವಾ. ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಲಾಗಿದೆ. ಅವರು ಅಧಿಕಾರ ವಹಿಸಿಕೊಳ್ಳುವ ಕ್ಷಣ. ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯುವ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ಸಿದ್ದತೆಯನ್ನೇ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 6.30ರಿಂದಲೇ ಹೋಮ-ಹವನ ಶುರುವಾಗಿವೆ. ಹಾಗಾದ್ರೆ, ಇನ್ನು ನೂತನ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಬಿಜೆಪಿ ಕಚೇರಿ ಹೇಗೆಲ್ಲ ಸಿದ್ಧತೆಗೊಂಡಿದೆ ಎನ್ನುವುದನ್ನು ವಿಡಿಯೋಗಳನ್ನು ನೋಡಿ.

ನೂತನ ರಾಜ್ಯಾಧ್ಯಕ್ಷರನ್ನ ಬರಮಾಡಿಕೊಳ್ಳಲು ಶೃಂಗಾರಗೊಂಡ ಬಿಜೆಪಿ ಕಚೇರಿ, ಜಗನಾಥ್ ಭವನದಲ್ಲಿ ಹಬ್ಬದ ಸಂಭ್ರಮ
ಬಿಜೆಪಿ ಕಚೇರಿ
Follow us on

ಬೆಂಗಳೂರು, (ನವೆಂಬರ್ 03): ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (BY Vijayendra) ಅವರು ಬುಧವಾರ (ನವೆಂಬರ್‌ 15) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಬಿ.ವೈ.ವಿಜಯೇಂದ್ರ ಅವರು ಪದಗ್ರಹಣ (Karnataka BJP President) ಮಾಡಲಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ (BJP Office) ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇನ್ನು ವಿಜಯೇಂದ್ರ ಅವರ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 6.30ರಿಂದಲೇ ಹೋಮ-ಹವನ ಶುರುವಾಗಿವೆ.

ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಕ್ಷಕ್ಕೆ ಹೊಸ ಸಾರಥಿಯಾಗಿ ವಿಜಯೇಂದ್ರ ಅವರು ನೇಮಕಗೊಂಡು ಬುಧವಾರ ನಿರ್ಗಮಿತ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಬಿಜೆಪಿ ಕಚೇರಿಯನ್ನು ತೋರಣದಿಂದ ಅಲಂಕರಿಸಲಾಗಿದೆ. ಹಾಗೇ ಜಗನಾಥ್ ಭವನದ ಮುಂದೆ ರಂಗೋಲಿ ಬಿಡಿಸಲಾಗಿದೆ.

ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮವೇ ಮಾಯವಾಗಿತ್ತು. ಈಗ ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಸುಣ್ಣ ಬಣ್ಣಗಳ ಜತೆಗೆ ದೀಪಗಳಿಂದಲೂ ಕರ್ನಾಟಕ ಬಿಜೆಪಿ ಕಚೇರಿ ಕಂಗೊಳಿಸುತ್ತಿದೆ.