ಬಿಜೆಪಿ ಅಧಿಕೃತ ಟ್ವಿಟರ್​​ ಹ್ಯಾಂಡಲ್​ಗೆ 2 ಕೋಟಿ ಫಾಲೋವರ್ಸ್; ನಾವೇ ನಂಬರ್ 1 ಎಂದ ಮಾಳವೀಯ

|

Updated on: Mar 04, 2023 | 7:22 PM

ಟ್ವಿಟರ್​​ನಲ್ಲಿ 2 ಕೋಟಿ ಫಾಲೋವರ್​ಗಳನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಫಾಲೋವರ್​​ಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಧನ್ಯವಾದಗಳು ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಅಧಿಕೃತ ಟ್ವಿಟರ್​​ ಹ್ಯಾಂಡಲ್​ಗೆ 2 ಕೋಟಿ ಫಾಲೋವರ್ಸ್; ನಾವೇ ನಂಬರ್ 1 ಎಂದ ಮಾಳವೀಯ
ಬಿಜೆಪಿ
Follow us on

ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಟ್ವಿಟರ್(Twitter) ಹ್ಯಾಂಡಲ್​ ಫಾಲೋವರ್​​ಗಳ ಸಂಖ್ಯೆ 2 ಕೋಟಿ ದಾಟಿದೆ. ಈ ವಿಚಾರವಾಗಿ ಹರ್ಷ ವ್ಯಕ್ತಪಡಿಸಿ ಟ್ವೀಟ್ (Tweet) ಮಾಡಿರುವ ಬಿಜೆಪಿ, ಈ ಮೂಲಕ ನಾವು ಒಗ್ಗಟ್ಟು, ಸಾಮರಸ್ಯ, ಶಕ್ತಿ ಹಾಗೂ ಬೆಂಬಲದ ಹೊಸ ಅಧ್ಯಾಯ ಬರೆಯುತ್ತಿದ್ದೇವೆ. ಧನ್ಯವಾದಗಳು ಮತ್ತು ಅಭಿನಂದನೆಗಳು. ನಾವೀಗ 2 ಕೋಟಿ ಮಂದಿ ಜತೆಯಾಗಿದ್ದೇವೆ ಎಂದು ಉಲ್ಲೇಖಿಸಿದೆ. ಬಿಜೆಪಿ ಮತ್ತೊಂದು ಸಾಧನೆ ಮಾಡಿದೆ. ಟ್ವಿಟರ್​​ನಲ್ಲಿ 2 ಕೋಟಿ ಫಾಲೋವರ್​ಗಳನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಫಾಲೋವರ್​​ಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಧನ್ಯವಾದಗಳು ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.


ವಿಶೇಷವೆಂದರೆ, ಬಿಜೆಪಿ ಟ್ವಿಟರ್​ ಹ್ಯಾಂಡಲ್​ನಿಂದ ಕೇವಲ ಮೂರು ಮಂದಿಯನ್ನು ಮಾತ್ರ ಫಾಲೋ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್​ ಹ್ಯಾಂಡಲ್​​ಗಳನ್ನು ಮಾತ್ರ ಬಿಜೆಪಿ ಟ್ವಿಟರ್​ ಹ್ಯಾಂಡಲ್ ಫಾಲೋ ಮಾಡುತ್ತಿದೆ.

ಇದೀಗ ಪಕ್ಷದ ನಾಯಕರು ಪ್ರತಿಪಾದಿಸಿರುವ ಪ್ರಕಾರ, ಅತಿಹೆಚ್ಚು ಟ್ವಿಟರ್​ ಫಾಲೋವರ್​ಗಳನ್ನು ಹೊಂದಿರುವ ವಿಶ್ವದ ನಂಬರ್ 1 ರಾಜಕೀಯ ಪಕ್ಷವಾಗಿದೆ ಬಿಜೆಪಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ