2ಎ ಮೀಸಲಾತಿ, ಮಠಾಧೀಶರ ರಾಜಕೀಯ ಪ್ರವೇಶ ಸುದ್ದಿ ಮಧ್ಯೆ ವಚನಾನಂದ ಸ್ವಾಮೀಜಿಯನ್ನ ಭೇಟಿಯಾದ ಬಿಎಲ್​ ಸಂತೋಷ್​

|

Updated on: Mar 07, 2023 | 2:47 PM

ಇಂದು (ಮಾ.7) ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಗುರುಪೀಠದ ವಚನಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ.

2ಎ ಮೀಸಲಾತಿ, ಮಠಾಧೀಶರ ರಾಜಕೀಯ ಪ್ರವೇಶ ಸುದ್ದಿ ಮಧ್ಯೆ ವಚನಾನಂದ ಸ್ವಾಮೀಜಿಯನ್ನ ಭೇಟಿಯಾದ ಬಿಎಲ್​ ಸಂತೋಷ್​
ಬಿಎಲ್​ ಸಂತೋಷ, ವಚನಾನಂದ ಸ್ವಾಮೀಜಿ
Follow us on

ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ರಾಜ್ಯ ಪ್ರವಾಸ ಮಾಡುತ್ತಿದ್ದು, ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಮತಗಳಕ್ರೋಢೀಕರಣಕ್ಕೆ ಎಲ್ಲ ಆಯಾಮಗಳಿಂದ ಲೆಕ್ಕಾಚಾರ ಹಾಕುತ್ತಿದ್ದು, ಮುಖ್ಯವಾಗಿ ಆಯಾ ಕ್ಷೇತ್ರದ ಸಮುದಾಯದ ಲೆಕ್ಕಾಚಾರದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ಮಾಡಿಕೊಳ್ಳುತ್ತಿವೆ. ಸದ್ಯ ರಾಜ್ಯದಲ್ಲಿ ಎರಡು ವಿಷಯಗಳು ಸಾಕಷ್ಟು ಚರ್ಚೆಯಾಗುತ್ತಿವೆ. ಒಂದು ಮಠಾಧೀಶರ ರಾಜಕೀಯ ಪ್ರವೇಶ ಮತ್ತು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ. ಈ ಎರಡು ವಿಚಾರಗಳು ರಾಜ್ಯ ಸರ್ಕಾರದ ಪಾಲಿಗೆ ಅಲ್ಪ ಮಟ್ಟಿಗೆ ತೆಲೆನೋವಾಗಿ ಪರಿಣಮಿಸಿದೆ. ಇನ್ನು ಇಂದು (ಮಾ.7) ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಗುರುಪೀಠದ ವಚನಾನಂದ ಸ್ವಾಮೀಜಿಯವರನ್ನು (Vachananda Swamiji) ಭೇಟಿ ಮಾಡಿದ್ದು, ಸದ್ಯ ಸರ್ಕಾರಕ್ಕಿರುವ ಈ ಎರಡು ತೆಲೆನೋವನ್ನು ನಿವಾರಿಸುವ ಸಾಧ್ಯತೆಗಳಿವೆ.

ಬಿಜೆಪಿ ಪಾಲಿಗೆ ಲಿಂಗಾಯತ ಪಂಚಮಸಾಲಿ ಸಮಾಜದ ಮತಗಳು ಅತಿ ದೊಡ್ಡ ಶಕ್ತಿಯಾಗಿವೆ. ಆದರೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ ವಿಚಾರದಲ್ಲಿ ಬಿಜೆಪಿಗೆ ಈ ಮತಗಳು ಒಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಮಾಜದ ಪ್ರಮುಖ ಮಠಾಧೀಶರಾದ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಮತ್ತು ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಹಲವು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ 2ಸಿ 2ಡಿ ಮೀಸಲಾತಿ ನೀಡಿ ಸಮಾಧಾನ ಮಾಡಿತ್ತಾದರೂ, ಸಮಾಜ ತೃಪ್ತವಾಗಿಲ್ಲ. ಇದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತಿ ದೊಡ್ಡ ಸಮಾಜದ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ.

ಇನ್ನು ಲಿಂಗಾಯತ ಪಂಚಮಸಾಲಿ ಸಮಾಜದ ಮತ್ತು ಬೇರೆ ಸಮಾಜದ ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಪಾಲಿನ ಮತಗಳು ಇಬ್ಬಾಗ ಆಗುವ ಸಾಧ್ಯತೆ ಇದೆ. ಈ ಸಂಬಂಧ ಬಿ.ಎಲ್.ಸಂತೋಷ್, ವಚನಾನಂದ ಸ್ವಾಮೀಜಿ‌ ಜೊತೆ‌ ಮಾತುಕತೆ ನಡೆಸಿದ್ದು, ಮಠಾಧೀಶರ ರಾಜಕೀಯ ರಂಗ ಪ್ರವೇಶದ ಬಗ್ಗೆಯೂ ಚರ್ಚೆಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Tue, 7 March 23