ವಾಸ್ತವಕ್ಕಿಂತ ಕಡಿಮೆ ಆಸ್ತಿ ಘೋಷಿಸಿದ ಡಿಕೆಶಿ ವಿರುದ್ಧ ತನಿಖೆಯಾಗಲಿ; ಬಿಜೆಪಿ ಆಗ್ರಹಕ್ಕೆ ಈ ವಿಡಿಯೋ ಕಾರಣ!

|

Updated on: Jun 23, 2023 | 8:47 PM

ನಾನೇ ಆಸ್ತಿ ಘೋಷಣೆ ಮಾಡುವಾಗ ಎಷ್ಟೋ ಲೆಕ್ಕಾಚಾರ ಕಡಿಮೆ ಘೋಷಣೆ ಮಾಡಿದ್ದೇನೆ. ಇಂಥವೆಲ್ಲ ಇದೆ. ನಮ್ಮಂಥವರು ಎಷ್ಟೋ ತಪ್ಪು ಮಾಡುತ್ತಿದ್ದೇವೆ. ಇಂಥವೆಲ್ಲ ಇದೆ ಎಂದು ಡಿಕೆಶಿ ಹೇಳಿದ್ದರು.

ವಾಸ್ತವಕ್ಕಿಂತ ಕಡಿಮೆ ಆಸ್ತಿ ಘೋಷಿಸಿದ ಡಿಕೆಶಿ ವಿರುದ್ಧ ತನಿಖೆಯಾಗಲಿ; ಬಿಜೆಪಿ ಆಗ್ರಹಕ್ಕೆ ಈ ವಿಡಿಯೋ ಕಾರಣ!
ಡಿಕೆ ಶಿವಕುಮಾರ್
Follow us on

ಬೆಂಗಳೂರು: ವಾಸ್ತವಕ್ಕಿಂತ ಕಡಿಮೆ ಆಸ್ತಿ ಘೋಷಣೆ ಮಾಡಿದ್ದೇನೆ ಎಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ತನಿಖೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸ್ವಯಂಪ್ರೇರಣೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಮಾತನಾಡಿರುವ ವಿಡಿಯೋ ತುಣುಕನ್ನು ಉಲ್ಲೇಖಿಸಿದೆ.

ವಾಸ್ತವಕ್ಕಿಂತಲೂ ಕಡಿಮೆ ಘೋಷಣೆ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಅವರು ಗರ್ವದಿಂದ ಹೇಳಿದ್ದಾರೆ. ಹಾಗಾದರೆ, ಉಪಮುಖ್ಯಮಂತ್ರಿ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಲೆಕ್ಕ ತೋರಿಸಿದ್ದಾರೆ ಎಂದಾಯಿತಲ್ಲವೇ? ಅವರು ಆಸ್ತಿ ತೆರಿಗೆವಂಚಕ ಎಂದು ಖುದ್ದು ಒಪ್ಪಿಕೊಂಡರಲ್ಲವೇ! ಧೈರ್ಯವಾಗಿ ಆಸ್ತಿ ಘೋಷಣೆ ಮಾಡಲು ಅವರಿಗೆ ಐಟಿ, ಇಡಿ, ಸಿಬಿಐ ಮೇಲೆ ಭಯವೇ? ಅಕ್ರಮ ಎಸಗುವವರು ಭಯ ಬೀಳಲೇ ಬೇಕು ಬಿಡಿ! ಈ ಪ್ರಕರಣವನ್ನು ಸಿದ್ದರಾಮಯ್ಯನವರು ಸ್ವಯಂಪ್ರೇರಿತರಾಗಿ ಪಾರದರ್ಶಕ ತನಿಖೆಗೆ ಒಳಪಡಿಸಲಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.


ಇದನ್ನೂ ಓದಿ: BBMP Wards: ಬಿಬಿಎಂಪಿ ವಾರ್ಡ್​ ಪುನರ್​ ವಿಂಗಡಣೆಗೆ ಆಯೋಗ ರಚಿಸಿದ ಸರ್ಕಾರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ತೆರಿಗೆ ವಂಚನೆ, ಕಟ್ಟಡ ತೆರಿಗೆ ವಂಚನೆ, ಸೆಲ್ಫ್ ಅಸೆಸ್​​ಮೆಂಟ್ ಸ್ಕೀಮ್ ಇತ್ಯಾದಿಗಳ ಬಗ್ಗೆ ಮಾತನಾಡಿದ್ದರು. ಇದೇ ವೇಳೆ, ನಾನೇ ಆಸ್ತಿ ಘೋಷಣೆ ಮಾಡುವಾಗ ಎಷ್ಟೋ ಲೆಕ್ಕಾಚಾರ ಕಡಿಮೆ ಘೋಷಣೆ ಮಾಡಿದ್ದೇನೆ. ಇಂಥವೆಲ್ಲ ಇದೆ. ನಮ್ಮಂಥವರು ಎಷ್ಟೋ ತಪ್ಪು ಮಾಡುತ್ತಿದ್ದೇವೆ. ಇಂಥವೆಲ್ಲ ಇದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ