ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ: ಬಿಕೆ ಹರಿಪ್ರಸಾದ್

ವಿಧಾನಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್​ ಮಾತನಾಡಿದ್ದು, ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ. ಇಡಿ, ಐಟಿ ಮೂಲಕ ಯಾವತ್ತೂ ವಿಪಕ್ಷಗಳು ತೊಂದರೆ ನೀಡಿಲ್ಲ. ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ ಎಂದು ಹೇಳಿದ್ದಾರೆ.

ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ: ಬಿಕೆ ಹರಿಪ್ರಸಾದ್
ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್
Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2023 | 3:09 PM

ಬೆಂಗಳೂರು, ಡಿಸೆಂಬರ್​​​ 05: ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ (B K Hariprasad)​​ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದರು. ಇದೀಗ ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ. ವಿಧಾನಪರಿಷತ್​ನಲ್ಲಿ ಮಾತನಾಡಿದ ಅವರು, ಇಡಿ, ಐಟಿ ಮೂಲಕ ಯಾವತ್ತೂ ವಿಪಕ್ಷಗಳು ತೊಂದರೆ ನೀಡಿಲ್ಲ. ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ. ಅದನ್ನು ತಡೆದುಕೊಂಡಿರುವುದೇ ದೊಡ್ಡದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನಗೆ ಸಿಎಂ ಆಯ್ಕೆ ಮಾಡುವುದು, ಕೆಳಗೆ ಇಳಿಸುವುದು ಬಹಳ ಚೆನ್ನಾಗಿ ಗೊತ್ತಿದೆ ಎಂದು ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನಾನು ಮಂತ್ರಿ ಆಗುವುದು, ಬಿಡುವುದು ಬೇರೆ ಪ್ರಶ್ನೆ. ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು; ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಿ.ಕೆ.ಹರಿಪ್ರಸಾದ್​ ಆಕ್ರೋಶ

ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್​​ ಕಳೆದ ಹಲವು ತಿಂಗಳಿಂದ ನೇರಾನೇರ ಸಮರ ಸಾರಿದ್ದರು. ಬಳಿಕ ಎಐಸಿಸಿ ನಾಯಕರ ಸೂಚನೆ ಮೇರೆಗೆ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯಗೆ ಸವಾಲ್ ಎಂಬಂತೆ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಂಘಟನೆಗೆ ಮುಂದಾಗಿದ್ದರು.

ಇದನ್ನೂ ಓದಿ: ನಾನು ವೈಯಕ್ತಿಕ ಹಿತಾಸಕ್ತಿಗಾಗಿ ಯಾವತ್ತೂ ರಾಜಕೀಯ ಮಾಡಿಲ್ಲ: ಸದಸ್ಯ ಬಿಕೆ ಹರಿಪ್ರಸಾದ್​​​

ಬಿ.ಕೆ.ಹರಿಪ್ರಸಾದ್​ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರವಾಗಿ ಗುಡುಗಿದ್ದರು. ಇದರಿಂದ ಅಸಮಾಧಾನ ಗೊಂಡಿರುವ ಬಿ.ಕೆ.ಹರಿಪ್ರಸಾದ್ ಮನವೊಲಿಕೆ ಕಸರತ್ತು ಶುರುವಾಗಿತ್ತು. ಗೃಹ ಸಚಿವ ಪರಮೇಶ್ವರ್ ಮತ್ತು, ಸತೀಶ್ ಜಾರಕಿಹೊಳಿ ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ನಿಮ್ಮಂತಹ ಹಿರಿಯರು ಹೀಗೆಲ್ಲಾ ಹೇಳಿಕೆ ಕೊಡಬಾರದು, ಇದ್ರಿಂದ ಪಕ್ಷಕ್ಕೂ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತೆ. ನಿಮ್ಮ ಅಸಮಾಧಾನವನ್ನ ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಿ, ಮುಂದಿನ ದಿನಗಳಲ್ಲಿ ಈ ರೀತಿ ಹೇಳಿಕೆ ಕೊಡಬೇಡಿ ಎಂದು ಪರಮೇಶ್ವರ್ ಹೇಳಿದ್ದರು.

ಪರಮೇಶ್ವರ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಬಿ.ಕೆ.ಹರಿಪ್ರಸಾದ್ ನನಗೆ ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡಿದ್ದರು. ಹೀಗಾಗಿ ನಾನು ನೇರವಾಗಿ ಧ್ವನಿ ಎತ್ತಾಬೇಕಾಯಿತು. ನಾನು ಕಟ್ಟರ್ ಕಾಂಗ್ರೆಸ್ ಮ್ಯಾನ್ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು ನನ್ನ ಉದ್ದೇಶ ಅಲ್ಲ ಎಂದು ಸ್ಪಷ್ಟಣೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.